ಶಾಸಕರ ಸ್ವಾರ್ಥಕ್ಕಾಗಿ ರಸ್ತೆ ಅಗಲೀಕರಣ

KannadaprabhaNewsNetwork |  
Published : Oct 20, 2025, 01:04 AM IST
19ಬಿಎಸ್ವಿ02- ಬಸವನಬಾಗೇವಾಡಿ ಮಿನಿವಿಧಾನಸೌಧ ಆವರಣಗೋಡೆಗೆ ಹೊಂದಿಕೊಂಡಂತೆ ಹಾಕಲಾಗಿರುವ ಶಾಮಿಯಾನದಲ್ಲಿ ತಾಲೂಕಿನ ಕುದರಿಸಾಲವಾಡಗಿ ಗ್ರಾಮದ ರಸ್ತೆ ಅಗಲೀಕರಣದಲ್ಲಿ ನಿರಾಶ್ರಿತ ಕುಟುಂಬಗಳಿಗೆ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ಅನಿರ್ದಿಷ್ಟ ಸತ್ಯಾಗ್ರಹ ಧರಣಿ ಉದ್ದೇಶಿಸಿ ಡಿಎಸ್ಎಸ್ ಮುಖಂಡ ಗುರುರಾಜ ಗುಡಿಮನಿ ಮಾತನಾಡಿದರು. | Kannada Prabha

ಸಾರಾಂಶ

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ ತಾಲೂಕಿನ ಕುದರಿಸಾಲವಾಡಗಿ ಗ್ರಾಮದಲ್ಲಿ ಯಾಳವಾರ ಗ್ರಾಮಕ್ಕೆ ಹೋಗುವ ಮುಖ್ಯರಸ್ತೆಯ ಅಭಿವೃದ್ಧಿ ಹಾಗೂ ಅಗಲೀಕರಣ ನೆಪದಲ್ಲಿ ತೆರವು ಗೊಳಿಸಿರುವ 140 ಕ್ಕೂ ಹೆಚ್ಚು ಕುಟುಂಬಗಳಿಗೆ ಸೂಕ್ತ ಪರಿಹಾರ ಸೇರಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿ ಅಶೋಕಗೌಡ ಪಾಟೀಲ ನೇತೃತ್ವದಲ್ಲಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಭಾನುವಾರ ಐದನೇ ದಿನಕ್ಕೆ ಕಾಲಿಟ್ಟಿತ್ತು.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ

ತಾಲೂಕಿನ ಕುದರಿಸಾಲವಾಡಗಿ ಗ್ರಾಮದಲ್ಲಿ ಯಾಳವಾರ ಗ್ರಾಮಕ್ಕೆ ಹೋಗುವ ಮುಖ್ಯರಸ್ತೆಯ ಅಭಿವೃದ್ಧಿ ಹಾಗೂ ಅಗಲೀಕರಣ ನೆಪದಲ್ಲಿ ತೆರವು ಗೊಳಿಸಿರುವ 140 ಕ್ಕೂ ಹೆಚ್ಚು ಕುಟುಂಬಗಳಿಗೆ ಸೂಕ್ತ ಪರಿಹಾರ ಸೇರಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿ ಅಶೋಕಗೌಡ ಪಾಟೀಲ ನೇತೃತ್ವದಲ್ಲಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಭಾನುವಾರ ಐದನೇ ದಿನಕ್ಕೆ ಕಾಲಿಟ್ಟಿತ್ತು.

ಧರಣಿಯಲ್ಲಿ ಡಿಎಸ್ಎಸ್ ಮುಖಂಡ ಗುರುರಾಜ ಗುಡಿಮನಿ ಮಾತನಾಡಿ, ಕುದರಿಸಾಲವಾಡಗಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ, ಅಗಲೀಕರಣ ನೆಪದಲ್ಲಿ ನೂರಾರು ಮನೆಗಳನ್ನು ತೆರವು ಗೊಳಿಸುವ ಜೊತೆಗೆ ವಿವಿಧ ಸ್ಮಾರಕಗಳನ್ನು, ಮರಗಳನ್ನು ದ್ವಂಸ ಮಾಡಲಾಗಿದೆ. ಇದರಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗಿದೆ. ಈ ರಸ್ತೆಯ ಅಗಲೀಕರಣವು ಶಾಸಕರ ಸ್ವಾರ್ಥಕ್ಕಾಗಿ ನಡೆದಿದೆ. ಬಡವರ ಹೊಟ್ಟೆ ಮೇಲೆ ರಾಜಕೀಯ ಸಲ್ಲದು. ರಸ್ತೆ ಅಂದಾಜು ಪತ್ರಿಕೆ, ಟೆಂಡರ್ ಆಗದೇ ಏಕಾಏಕಿ ರಸ್ತೆ ಅಗಲೀಕರಣಕ್ಕೆ ಶಾಸಕರು, ಗ್ರಾಮ ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮುಂದಾಗಿರುವುದು ಸರಿಯಲ್ಲ. ಇದರಲ್ಲಿ ಶಾಸಕರ ಕುಮ್ಮುಕು ಇದೆ. ಇವರಿಗೆ ಬಡವರ ಕಣ್ಣೀರು ತಟ್ಟದೇ ಬಿಡುವುದಿಲ್ಲ. ದೇವರಹಿಪ್ಪರಗಿ ಶಾಸಕರು ಜೆಡಿಎಸ್ ಶಾಸಕರಲ್ಲ. ಅವರು ದೇವರಹಿಪ್ಪರಗಿ ಶಾಸಕರು ಎಂಬುದನ್ನು ಅರಿತುಕೊಳ್ಳಬೇಕಿದೆ. ರಸ್ತೆ ಅಗಲೀಕರಣದಲ್ಲಿ ನಿರಾಶ್ರಿತರಾದ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವವರೆಗೂ ಧರಣಿ ನಿಲ್ಲುವುದಿಲ್ಲ. ಶನಿವಾರ ಸಂಜೆ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ, ತಹಸೀಲ್ದಾರ್‌ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಧರಣಿ ಹಿಂಪಡೆಯುವಂತೆ ಹೇಳಿದರು. ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಅವರು ಲಿಖಿತ ಭರವಸೆ ನೀಡದೇ ಇರವುದರಿಂದ ನಮ್ಮ ಧರಣಿ ಮುಂದುವರಿಸಿದ್ದೇವೆ. ನಾಡಿನಲ್ಲಿ ದೀಪಾವಳಿ ಹಬ್ಬವಿದ್ದರೂ ನಮಗೆ ಈ ಹಬ್ಬ ಕರಾಳ ಜೀವನ ಉಂಟುಮಾಡಿದೆ. ಈಗಲಾದರೂ ಶಾಸಕರು ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದರು.ರೈತ ಮುಖಂಡ ಅರವಿಂದ ಕುಲಕರ್ಣಿ, ಕಾಂಗ್ರೆಸ್ ಮುಖಂಡ ಅಶೋಕಗೌಡ ಪಾಟೀಲ ಮಾತನಾಡಿದರು. ಧರಣಿಯಲ್ಲಿ ಕಾಶೀಸಾಬ ಮುಲ್ಲಾ, ನಜೀರಪಟೇಲ ಗುಡ್ನಾಳ, ನೂರಲಾ ಹುಸೇನಿಜಿನಪಿರಾ ಪಿರಜಾದೆ, ಚಾಂದಸಾಬ ನಾಯ್ಕೋಡಿ, ಕಾಶೀಂಸಾಬ ಮುಲ್ಲಾ, ಶಾಂತಗೌಡ ಪಾಟೀಲ, ಗಣಿಸಾಬ ಕಾಜಾಪುರ, ಶರಣಪ್ಪ ಕಟಗಾರ, ದಾವಲಸಾಬ ಅತ್ತಾರ, ಕಾಮೇಶ ಭಜಂತ್ರಿ, ಮಲ್ಲನಗೌಡ ಪಾಟೀಲ, ಶ್ರೀಕಾಂತ ಹಚಡದ, ಪಾವೆಡವ್ವ ಇಂಗಳಗಿ, ಯಾಕೂಬ ಎಲಿಗಾರ, ರಜಾಬೇಗಂ ಎಲಿಗಾರ, ದಸ್ತಗೀರ ಅತ್ತಾರ ಸೇರಿದಂತೆ ಇತರರು ಭಾಗವಹಿಸಿದ್ದರು.

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ