೧೦ ದಿನಗಳಿಂದ ಹಿಪ್ಪರಗಿ ಬ್ಯಾರೇಜ್‌ನ ಗೇಟ್ ನಂ.೨೨ರಲ್ಲಿನ ಪೆನಲ್ ಮುರಿದು ಅವಘಡಕ್ಕೆ ತಾತ್ಕಾಲಿಕ ದುರಸ್ತಿ ಕಂಡಿದೆ. ಅಲ್ಲಿನ ನೀರು ಸೋರಿಕೆ ತಡೆಗೆ ೧೦ ಜನ ನುರಿತ ಸಿಬ್ಬಂದಿಯಿಂದ ಕಾರ್ಯ ಹಾಗೆಯೇ ಮುಂದುವರೆದಿದ್ದು, ಮಂಗಳವಾರವೂ ಶತಾಯ-ಗತಾಯ ಪ್ರಯತ್ನ ಮುಂದುವರಿದರೂ ಪ್ರಯೋಜನವಾಗಿಲ್ಲ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
೧೦ ದಿನಗಳಿಂದ ಹಿಪ್ಪರಗಿ ಬ್ಯಾರೇಜ್‌ನ ಗೇಟ್ ನಂ.೨೨ರಲ್ಲಿನ ಪೆನಲ್ ಮುರಿದು ಅವಘಡಕ್ಕೆ ತಾತ್ಕಾಲಿಕ ದುರಸ್ತಿ ಕಂಡಿದೆ. ಅಲ್ಲಿನ ನೀರು ಸೋರಿಕೆ ತಡೆಗೆ ೧೦ ಜನ ನುರಿತ ಸಿಬ್ಬಂದಿಗಳಿಂದ ಕಾರ್ಯ ಹಾಗೆಯೇ ಮುಂದುವರೆದಿದ್ದು, ಮಂಗಳವಾರವೂ ಶತಾಯ-ಗತಾಯ ಪ್ರಯತ್ನ ಮುಂದುವರಿದರೂ ಪ್ರಯೋಜನವಾಗಿಲ್ಲ.
ಗುಜರಾತ್‌ನಿಂದ ಇಬ್ಬರು ಅನುಭವಿ ಈಜುಗಾರರು ಮಂಗಳವಾರ ಕಾರ್ಯದಲ್ಲಿದ್ದರು. ಅದರಂತೆ ಶಿವಮೊಗ್ಗದಿಂದಲೂ ಮೂವರು ಹಾಗೂ ಸ್ಥಳೀಯ ಐವರಿಂದ ನಿರಂತರ ಕಾರ್ಯ ನಡೆಯುತ್ತಿದೆ.
ಗೇಟ್‌ನ ಪೆನಲ್ ಒಳಗಡೆ ಸೋರಿಕೆ ತಡೆಗೆ ತಾತ್ಕಾಲಿಕವಾಗಿ ಹುಲ್ಲಿನ ರವಿಕೆ, ಮರಳು ಸೇರಿದಂತೆ ಇತರೆ ಸಾಮಗ್ರಿಗಳನ್ನೊಂಡ ವಸ್ತುಗಳನ್ನು ಅಳವಡಿಸಲೂ ಸಹಿತ ವಿಫಲವಾಗುತ್ತಿದೆ.
ನೀರಿನ ಒತ್ತಡ ಪ್ರಮಾಣ ಹೆಚ್ಚಿರುವದರಿಂದ ನೀರೊಳಗಡೆ ಕೆಲಸಕ್ಕೆ ಅಡ್ಡಿಯಾಗುತ್ತಿದೆ. ಬುಧವಾರವೂ ಸೋರಿಕೆ ತಡೆಯುವ ಕಾರ್ಯ ಮುಂದುವರೆಯಲಿದ್ದು, ಇವತ್ತಾದರೂ ಕಾರ್ಯ ಪೂರ್ಣಗೊಳ್ಳುವದೇ ಎಂಬುದನ್ನು ಕಾದು ನೋಡಬೇಕಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.