ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕರ್ನಾಟಕ ಇದರ ಉಳ್ಳಾಲ ಸೆಂಟರ್ ವತಿಯಿಂದ 2025–26ನೇ ಸಾಲಿನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪ್ರಮಾಣಪತ್ರ ವಿತರಣಾ ಸಮಾರಂಭವು ಬಬ್ಬುಕಟ್ಟೆಯ ಹಿರಾ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಉಳ್ಳಾಲ: ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕರ್ನಾಟಕ ಇದರ ಉಳ್ಳಾಲ ಸೆಂಟರ್ ವತಿಯಿಂದ 2025–26ನೇ ಸಾಲಿನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪ್ರಮಾಣಪತ್ರ ವಿತರಣಾ ಸಮಾರಂಭವು ಬಬ್ಬುಕಟ್ಟೆಯ ಹಿರಾ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಪಿ.ಎ. ಪಾಲಿಟೆಕ್ನಿಕ್ ನಡುಪದವು, ಪ್ರಾಂಶುಪಾಲ ಪ್ರೊ. ಇಸ್ಮಾಯಿಲ್ ಖಾನ್ ಹಾಗೂ ಬಹುಭಾಷಾ ಲೇಖಕಿ ಶಮೀಮಾ ಕುತ್ತಾರ್ ಮಾತನಾಡಿ, ವಿದ್ಯಾರ್ಥಿಗಳು ಧಾರ್ಮಿಕ ಶಿಕ್ಷಣದೊಂದಿಗೆ ಆಧುನಿಕ ಶಿಕ್ಷಣದಲ್ಲೂ ಉನ್ನತ ಸಾಧನೆ ಮಾಡಿ ಸಮಾಜಕ್ಕೆ ಮಾದರಿಯಾಗುವಂತೆ ಸಲಹೆ ನೀಡಿದರು.
ಜಮಾಅತೇ ಇಸ್ಲಾಮೀ ಹಿಂದ್ ಮಂಗಳೂರು ಅಧ್ಯಕ್ಷ ಮುಹಮ್ಮದ್ ಇಸ್ಹಾಕ್ ಅಧ್ಯಕ್ಷತೆ ವಹಿಸಿದ್ದರು.
ಹಮ್ದಾನ್ ರಮಿನ್ ಕರೀಮ್ ಮತ್ತು ಅರ್ಹಮ್ ರಿಯಾಝ್ ಅಹ್ಮದ್ ಅವರು ಪವಿತ್ರ ಕುರ್‌ಆನ್ ಪಠಣ ಮಾಡಿದರು. ಡಾ. ಮುಹಮ್ಮದ್ ಮುಬೀನ್ ಸ್ವಾಗತಿಸಿದರು.
2025-26ನೇ ಸಾಲಿನ ಪರೀಕ್ಷೆಯಲ್ಲಿ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು. ಬೋರ್ಡ್ ನ ವಿದ್ಯಾರ್ಥಿಗಳಾದ ಶಂಶಾದ್ ಮತ್ತು ತಸ್ಲೀಮಾ ಅನುಭವ ಹಂಚಿಕೊಂಡರು.
ಶಾಂತಿ ಎಜುಕೇಶನಲ್ ಟ್ರಸ್ಟ್ ಚೇರ್ಮನ್ ಎ.ಎಚ್. ಮಹಮೂದ್, ಜಮಾಅತೆ ಇಸ್ಲಾಮಿ ಹಿಂದ್, ಉಳ್ಳಾಲ ಅಧ್ಯಕ್ಷ ಇಲ್ಯಾಸ್ ಇಸ್ಮಾಯಿಲ್, ಅಲ್ ಫುರ್ಖಾನ್ ಅರೆಬಿಕ್ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಇಸ್ಹಾಕ್ ಹಸನ್, ಕರ್ನಾಟಕ ವೆಲ್ಫೇರ್ ಸೊಸೈಟಿ ರಿಯಾದ್ ನ ಕಾರ್ಯಕಾರಿ ಸಮಿತಿ ಸದಸ್ಯ ಮುಹಮ್ಮದ್ ಶಮೀಮ್, ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗ, ಉಳ್ಳಾಲ ಉಪಾಧ್ಯಕ್ಷೆ ಹಫ್ಸಾ, ಎಸ್ ಐಒ, ಉಳ್ಳಾಲ ಅಧ್ಯಕ್ಷ ಸಾಹಿಲ್, ಜಿಐಒ ಉಳ್ಳಾಲ ಕಾರ್ಯದರ್ಶಿ ಹಲೀಮಾ ನಿಧಾ ಉಪಸ್ಥಿತರಿದ್ದರು. ಅಬ್ದುಲ್ ರವೂಫ್ ಮತ್ತು ಮುಹಮ್ಮದ್ ಶಾಕಿರ್ ನಿರೂಪಿಸಿದರು. ಮುಝಮ್ಮಿಲ್ ಅಹ್ಮದ್ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.