ಹಿರೇಬಂಡಾಡಿ: ಕೃಷಿ ಹಾನಿ ಪ್ರದೇಶಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳ ಭೇಟಿ

KannadaprabhaNewsNetwork |  
Published : May 28, 2025, 12:20 AM IST
ಹಿರೇಬಂಡಾಡಿ: ಕೃಷಿ ಹಾನಿ ಪ್ರದೇಶಕ್ಕೆ  ಕಂದಾಯ ಅಧಿಕಾರಿಗಳು, ಜನಪ್ರತಿನಿಧಿಗಳ ಭೇಟಿ | Kannada Prabha

ಸಾರಾಂಶ

ಹಿರೇಬಂಡಾಡಿ ಗ್ರಾಮದ ಬೊಳುಂಬುಡ ಪ್ರದೇಶದಲ್ಲಿ ಭಾನುವಾರ ಸಂಜೆ ಬೀಸಿದ ಭಾರೀ ಗಾಳಿ ಮಳೆಗೆ ಉಂಟಾದ ವ್ಯಾಪಕ ಹಾನಿಯ ಬಗ್ಗೆ ಪರಿಶೀಲನೆ ನಡೆಸಲು ಈ ಪ್ರದೇಶಗಳಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿದರು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿಹಿರೇಬಂಡಾಡಿ ಗ್ರಾಮದ ಬೊಳುಂಬುಡ ಪ್ರದೇಶದಲ್ಲಿ ಭಾನುವಾರ ಸಂಜೆ ಬೀಸಿದ ಭಾರೀ ಗಾಳಿ ಮಳೆಗೆ ಉಂಟಾದ ವ್ಯಾಪಕ ಹಾನಿಯ ಬಗ್ಗೆ ಪರಿಶೀಲನೆ ನಡೆಸಲು ಈ ಪ್ರದೇಶಗಳಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿದರು.ಹಿರೇಬಂಡಾಡಿ ಗ್ರಾಮದ ಬೊಲುಂಬುಡ ಮಜಿಕೂಡೇಲು ನಿವಾಸಿ ರುಕ್ಮಿಣಿ ಎಂಬವರ ಮನೆಯ ಮೇಲೆ ಮರ ಬಿದ್ದು ಮನೆ ಭಾಗಶಃ ಹಾನಿಗೊಂಡಿದೆ. ಇವರ ತೋಟದಲ್ಲಿ ೬೦೦ ಅಡಕೆ, ೧೦ ತೆಂಗು, ನೀರಿನ ಟ್ಯಾಂಕ್ ದೂರಕ್ಕೆ ಎಸೆಯಲ್ಪಟ್ಟು ಪುಡಿಯಾಗಿದೆ. ಕೇದಗೆದಡಿ ಪರಿಸರದಲ್ಲಿ ಧನಂಜಯ ಗೌಡ ಎಂಬವರ ತೋಟದಲ್ಲಿ ೫೦೦ ಅಡಕೆ ಮರ, ೫ ತೆಂಗು, ೫ ವಿದ್ಯುತ್ ಕಂಬಗಳು ಧರೆಗುರುಳಿದೆ. ಜನಾರ್ದನ ಗೌಡ ಎಂಬವರ ತೋಟದಲ್ಲಿ ೪೫೦ ಅಡಿಕೆ ಮರ, ೪ ತೆಂಗು, ಮನೆಯ ಸಿಮೆಂಟು ಶೀಟು ಹಾರಿ ಹೋಗಿದೆ. ಚಿದಾನಂದ ಎಂಬವರ ತೋಟದಲ್ಲಿ ೩೫ ಅಡಕೆ, ೫ ವಿದ್ಯುತ್ ಕಂಬ, ಫಾರೂಕ್ ಎಂಬವರ ತೋಟದಲ್ಲಿ ೫೦ ಅಡಕೆ ಮರ, ದಿನೇಶ್ ಎಂಬವರ ತೋಟದಲ್ಲಿ ೨೫ ಅಡಕೆ ಮರ, ಬರಮೇಲು ಹೊನ್ನಪ್ಪ ಗೌಡ ಎಂಬವರ ತೋಟದಲ್ಲಿ ೧೦೦ ಅಡಕೆ ಮರ, ವಾಸಪ್ಪ ಗೌಡ ಎಂಬವರ ತೋಟದಲ್ಲಿ ೭೫ ಅಡಕೆ ಮರಗಳು ಧರೆಗುರುಳಿ ಬಿದ್ದಿದ್ದು, ಈ ಪ್ರದೇಶದಲ್ಲಿ ಸುಮಾರು ೩೫ ಲಕ್ಷಗಳಿಗೂ ಅಧಿಕ ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ.ಹಿರೇಬಂಡಾಡಿ ಗ್ರಾಮ ಆಡಳಿತಾಧಿಕಾರಿ ನರಿಯಪ್ಪ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸತೀಶ್ ಸೋಮವಾರ ಘಟನಾ ಸ್ಥಳ ಬೊಲುಂಬುಡ ಕೇದಗೆದಡಿ ನಿವಾಸಿಗಳಾದ ಧನಂಜಯ ಗೌಡ, ಜನಾರ್ದನ ಗೌಡ, ರುಕ್ಮಿಣಿ ಇವರ ಮನೆಗೆ ಭೇಟಿ ನೀಡಿ ಹಾನಿಗೀಡಾಗಿರುವ ಕೃಷಿಗಳ ಬಗ್ಗೆ ಪರಿಶೀಲನೆ ನಡೆಸಿ, ಮಾಹಿತಿ ಪಡೆದುಕೊಂಡಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು, ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಾನಂದ ಶೆಟ್ಟಿ, ಸದಸ್ಯರಾದ ಹಮ್ಮಬ್ಬ ಸೌಕತ್, ದಯಾನಂದ ಸರೋಳಿ, ಹೇಮಂತ ಮತ್ತಿತರರು ಭೇಟಿ ನೀಡಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ