ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಪಟ್ಟಣದ ಆರಾಧ್ಯದೈವ ಮೂಲನಂದೀಶ್ವರನ ಬೆಳ್ಳಿ ಪಲ್ಲಕ್ಕಿ ಮಹೋತ್ಸವದ ಎರಡನೇ ದಿನವಾದ ಮಂಗಳವಾರ ಐತಿಹಾಸಿಕ ಹೋರಿಮಟ್ಟಿ ಗುಡ್ಡಕ್ಕೆ ತೆರಳಿದ್ದ ಅಲಂಕೃತ ಮೂಲನಂದೀಶ್ವರ ಬೆಳ್ಳಿ ಪಲ್ಲಕ್ಕಿ ಉತ್ಸವ ಸಂಪನ್ನಗೊಂಡಿದೆ. ಭಕ್ತರ ಜಯಘೋಷ, ಬಸವಣ್ಣನ ಕುದರಿ ಶಿವಾನಂದ ಈರಕಾರ ಮುತ್ಯಾ ಅವರ ಹೇಳಿಕೆ ಬಳಿಕ ಪಲ್ಲಕ್ಕಿ ಮೂಲ ಸ್ಥಾನಕ್ಕೆ ಮರಳಿತು.ಪಟ್ಟಣದ ಬಳಿಯ ಹೋರಿಮಟ್ಟಿ ಗುಡ್ಡದಲ್ಲಿ ಪಲ್ಲಕ್ಕಿ ಮೂಲನಂದೀಶ್ವರ ಅಲಂಕೃತ ಬೆಳ್ಳಿ ಪಲ್ಲಕ್ಕಿ ಉತ್ಸವದ ಹಿನ್ನಲೆಯಲ್ಲಿ ಸಂಜೆ ಆಕರ್ಷಕ ಸಿಡಿಮದ್ದು ಸಿಡಿಸಲಾಯಿತು. ವಿವಿಧ ಕಲಾ ತಂಡಗಳ ಮೆರವಣಿಗೆ, ಭಕ್ತರ ಜಯಘೋಷದೊಂದಿಗೆ ಪುರ ಪ್ರವೇಶ ಮಾಡಿದ ನಂತರ ಅದ್ದೂರಿ ಮೆರವಣಿಗೆಯ ಮೂಲಕ ಮೂಲ ಸ್ಥಾನ ತಲುಪಿದೆ. ಮಂಗಳವಾರ ನಸುಕಿನ ಜಾವ ಬಸವಣ್ಣನ ಕುದರಿ ಶಿವಾನಂದ ಈರಕಾರಮುತ್ಯಾ ಅವರು ಆಗಮಿಸಿದ ನಂತರ ಪಲ್ಲಕ್ಕಿ ಉತ್ಸವವು ದೇವಸ್ಥಾನದ ಪ್ರಾಂಗಣದಲ್ಲಿ ಮೂರು ಪ್ರದಕ್ಷಿಣೆ ಹಾಕಿತು. ನಂತರ ಶಿವಾನಂದ ಈರಕಾರಮುತ್ಯಾ ಈ ವರ್ಷದ ಮಳೆ-ಬೆಳೆಗಳ ಬಗ್ಗೆ ಭವಿಷ್ಯ ನುಡಿದರು. ಹೇಳಿಕೆಯನ್ನು ಹಿರಿಯರಾದ ಬಸವರಾಜ ಹಾರಿವಾಳ ಅವರು ಕೇಳಿ ನೆರೆದ ಭಕ್ತಗಣಕ್ಕೆ ಧ್ವನಿವರ್ದಕದ ಮೂಲಕ ತಿಳಿಸಿದರು.ಉತ್ಸವದಲ್ಲಿ ಹೇಳಿಕೆ
ಪಲ್ಲಕ್ಕಿ ಉತ್ಸವದಲ್ಲಿ ಗಂಗಯ್ಯ ಕಾಳಹಸ್ತೇಶ್ವರಮಠ, ಬಸವರಾಜ ಹಾರಿವಾಳ, ಸಂಗಪ್ಪ ಡಂಬಳ, ಚಂದ್ರಶೇಖರ ಮುರಾಳ, ನಿಂಗಪ್ಪ ಜೈನಾಪುರ, ಬಸವಂತ ಅಡಗಿಮನಿ, ಸಂಗಪ್ಪ ವಾಡೇದ, ಪವಾಡೆಪ್ಪ ಕರಮಳಕರ, ಶರಣಪ್ಪ ಕೂಡಗಿ, ನಾಗಪ್ಪ ಬಾಡಗಿ, ಮೀರಾಸಾಬ ಕೊರಬು, ಸಿದ್ದಲಿಂಗ ಪೂಜಾರಿ, ಗಿರೀಶ ಬಿರಾದಾರ, ಪುಟ್ಟು ಪಟ್ಟಣಶೆಟ್ಟಿ, ಶಿವು ಸಿಂದಗಿ, ಕುಮಾರ ಒಣರೊಟ್ಟಿ, ಪರಶುರಾಮ ದೇವಕರ, ಸಿದ್ದು ಚವ್ಹಾಣ, ಪ್ರಭು ಮಾಲಗಾರ, ಮಂಜು ಹಾರಿವಾಳ, ಭೀಮು ನಿಕ್ಕಂ, ಮಲ್ಲು ಡೋಣೂರ, ಸಂತೋಷ ಕೂಡಗಿ ಸೇರಿ ಅನೇಕರು ಭಾಗವಹಿಸಿದ್ದರು.
ಬಾಕ್ಸ್ಬಸವೇಶ್ವರರು ಪೂಜೆಗೈದ ಜಾಗವಿದು