ಕೃಷ್ಣನ ಆದರ್ಶಗಳು ನಮ್ಮೆಲ್ಲರಿಗೂ ಸ್ಪೂರ್ತಿ: ಮುರುಡಿ

KannadaprabhaNewsNetwork |  
Published : Aug 28, 2024, 12:46 AM IST
೨೭ಕೆಎನ್‌ಕೆ-೩ ಕನಕಗಿರಿಯ ತಹಸೀಲ್ದಾರ ಕಚೇರಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು. | Kannada Prabha

ಸಾರಾಂಶ

ಮನುಷ್ಯನಲ್ಲಿ ಅಹಂಕಾರ, ಅಸೂಯೆಯನ್ನು ಕಿತ್ತೆಸೆದು ಶ್ರೀ ಕೃಷ್ಣನ ಆದರ್ಶಗಳಂತೆ ಜೀವನ ಸಾಗಿಸಬೇಕು.

ಕನ್ನಡಪ್ರಭ ವಾರ್ತೆ ಕನಕಗಿರಿ

ಮನುಷ್ಯನಲ್ಲಿ ಅಹಂಕಾರ, ಅಸೂಯೆಯನ್ನು ಕಿತ್ತೆಸೆದು ಶ್ರೀ ಕೃಷ್ಣನ ಆದರ್ಶಗಳಂತೆ ಜೀವನ ಸಾಗಿಸಬೇಕು ಎಂದು ತಹಸೀಲ್ದಾರ ವಿಶ್ವನಾಥ ಮುರುಡಿ ಹೇಳಿದರು.

ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕೃಷ್ಣ ಜನ್ಮಾಷ್ಟಮಿಯಲ್ಲಿ ಮಾತನಾಡಿದರು. ಶ್ರೀ ಕೃಷ್ಣ ಪರಮಾತ್ಮ ನಮ್ಮೆಲ್ಲರಿಗೂ ಪ್ರೇರಣಾದಾಯಕನಾಗಿದ್ದಾನೆ. ಈ ಹಿಂದೆ ಕೌರವ ಹಾಗೂ ಪಾಂಡುವರ ನಡುವಿನ ಯುದ್ಧದ ಸಂದರ್ಭಗಳಲ್ಲಿ ಅನ್ಯಾಯ, ಮೋಸಕ್ಕೆ ಒಳಗಾದವರನ್ನು ಹಾಗೂ ಧರ್ಮ, ಸತ್ಯದಿಂದ ನಡೆದುಕೊಂಡವರನ್ನು ಶ್ರೀ ಕೃಷ್ಣ ಸಂರಕ್ಷಣೆ ಮಾಡುತ್ತಿದ್ದ. ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿರುವ ಕೃಷ್ಣನ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗೋಣ ಎಂದು ತಿಳಿಸಿದರು.

ತಹಸೀಲ್ದಾರ ಕಚೇರಿ ಸಿಬ್ಬಂದಿ ರಮೇಶ, ಗುರುಲಿಂಗಯ್ಯ, ಮುತ್ತು ಗೌಂಡಿ, ಯಾದವ ಸಮಾಜದ ಕೃಷ್ಣಮೂರ್ತಿ ದಾಸರ, ಚೇತನ ಯಾದವ, ನರಿಯಪ್ಪ ಗೊಲ್ಲರ, ಲೋಕೇಶ ದಾಸರ, ಮಾರೇಶ ಗೊಲ್ಲರ, ಮಾರುತಿ ಕರಡಿಗುಡ್ಡ ಇತರರು ಇದ್ದರು.

ವಿವಿಧೆಡೆ:ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಪಟ್ಟಣದ ಶಾಲಾ-ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ, ವಿವಿಧ ದೇವಸ್ಥಾನಗಳಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.ಸಚಿವ ತಂಗಡಗಿ ಜನಪ್ರಿಯತೆ ಸಹಿಸದೆ ದುವರ್ತನೆ ತೋರಿದ ಗ್ರಾಪಂ ಸದಸ್ಯ:

ತಾಲೂಕಿನ ಜೀರಾಳ ಕಲ್ಗುಡಿ ಗ್ರಾಮದ ಅಭಿವೃದ್ಧಿಗೆ ಸಚಿವ ಶಿವರಾಜ ತಂಗಡಗಿಯವರು ₹೧.೩೦ ಕೋಟಿ ಅನುದಾನ ತಂದಿದ್ದು, ಅಭಿವೃದ್ಧಿ ಸಹಿಸದೆ, ಸಚಿವರು ಎನ್ನುವ ಗೌರವ ತೋರದೆ ಅಸಭ್ಯವಾಗಿ ನಡೆದುಕೊಂಡಿರುವ ಗ್ರಾಪಂ ಸದಸ್ಯ ಯಲ್ಲಪ್ಪ ಕ್ಷಮೆಯಾಚಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಒತ್ತಾಯಿಸಿದರು.ಕನಕಗಿರಿ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೀರಾಳ ಗ್ರಾಮಕ್ಕೆ ಸಚಿವರು ಆಗಮಿಸಿದ ವೇಳೆ ಅವಮಾನ ಮಾಡುವ ಉದ್ದೇಶದಿಂದ ಗಲಾಟೆ ಮಾಡಿದ್ದಾರೆ. ಸಚಿವರು ಆ ಗ್ರಾಮದ ಅಭಿವೃದ್ಧಿಗಾಗಿಯೇ ₹೧.೩೦ ಕೋಟಿ ಅನುದಾನ ತಂದಿದ್ದಾರೆ. ರಸ್ತೆ ಅಭಿವೃದ್ಧಿಪಡಿಸುವುದಾಗಿ ತಿಳಿಸಿದರೂ ಗ್ರಾಪಂ ಸದಸ್ಯ ಯಲ್ಲಪ್ಪ ಸಚಿವರಿಗೆ ಅವಾಚ್ಯವಾಗಿ ನಿಂದಿಸಿದ್ದಾನೆ. ಆದರೂ ಸಚಿವರು ತಾಳ್ಮೆಯಿಂದ ವರ್ತಿಸಿದ್ದಾರೆ. ರಸ್ತೆ ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದಾರೆ. ಕಾರ್ಯಕ್ರಮದ ಬಳಿಕ ವಾಹನ ಹತ್ತಿ ಹೊರಟಾಗಲೂ ಮತ್ತೆ ಸಚಿವರನ್ನು ಹಿಂಬಾಲಿಸಿ ಸಚಿವರಿಗೆ ತಾಳ್ಮೆ ಮೀರುವಂತೆ ಆ ಗ್ರಾಪಂ ಸದಸ್ಯ ನಡೆದುಕೊಂಡಿದ್ದಾನೆ.ಸಚಿವರ ಅಭಿವೃದ್ಧಿ ಕಾರ್ಯ ಹಾಗೂ ಜನಪ್ರಿಯತೆ ಸಹಿಸಲಾಗದೆ ಗ್ರಾಪಂ ಸದಸ್ಯ ಈ ರೀತಿ ಮಾಡಿದ್ದಾನೆ. ಪಂಚ ಗ್ಯಾರಂಟಿಗಳ ಜತೆಗೆ ಅಭಿವೃದ್ಧಿ ಕೆಲಸ ಮಾಡುತ್ತಿರುವ ರಾಜ್ಯ ಸರ್ಕಾರಕ್ಕೆ ವಿಪಕ್ಷದವರು ಕೈಜೋಡಿಸಬೇಕು. ಈ ಹಿಂದಿನ ಶಾಸಕರು ಅಭಿವೃದ್ಧಿಪಡಿಸಿಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿಯಾಗುತ್ತಿದೆ ಎಂದರು.

ಮುಖಂಡರಾದ ಸಿದ್ದಪ್ಪ ನಿರ್ಲೂಟಿ, ವಕ್ತಾರ ಶರಣಬಸಪ್ಪ ಭತ್ತದ್ ಮಾತನಾಡಿದರು. ತಾಪಂ ಮಾಜಿ ಅಧ್ಯಕ್ಷ ಬಸವಂತಗೌಡ, ಪ್ರಮುಖರಾದ ಹೊನ್ನೂರಸಾಬ ಉಪ್ಪು, ಹಜರತಹುಸೇನ್, ರವಿ ಪಾಟೀಲ್, ಕಂಠಿರಂಗ ನಾಯಕ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ