ಕನ್ನಡಪ್ರಭ ವಾರ್ತೆ ಕಲಬುರಗಿ
ಶರಣಬಸಪ್ಪ ಕಾಮರೆಡ್ಡಿ 249, ರಾಜಶೇಖರ ನಿಪ್ಪಾಣಿ 3 ಮತ ಪಡೆದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿ ಪರಾಭವಗೊಂಡರು. ಅಲ್ಲದೇ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹೈಕ ಶಿಕ್ಷಣ ಸಂಸ್ಥೆ ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ ಅವರ ಪುತ್ರ ರಾಜು ಭೀಮಳ್ಳಿ 847 ಮತ ಪಡೆಯುವ ಮೂಲಕ ಅತೀ ಹೆಚ್ಚು ಮತಗಳ ದಾಖಲೆ ಗೆಲುವು ಪಡೆದಿದ್ದಾರೆ.
ನಮೋಶಿ ಪೇನಾಲ್‍ನಿಂದ ಕೈಲಾಸ್ ಪಾಟೀಲ್ (722), ಅರುಣಕುಮಾರ ಎಂ. ಪಾಟೀಲ್ (690), ಉದಯಕುಮಾರ ಎಸ್. ಚಿಂಚೋಳಿ (668), ರಜನೀಶ ವಾಲಿ (622), ಶರಣಬಸಪ್ಪಾ ಹರವಾಳ (538), ನಿಶಂತ ಎಲಿ (427) ಒಟ್ಟು ಆರು ಜನ ಕಾರ್ಯಕಾರಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.ಸಂತೋಷ ಬಿಲಗುಂದಿ ಪೆನಾಲ್‍ದಿಂದ ಐದು ಜನ ಮತ್ತು ಡಾ.ಕಾಮರೆಡ್ಡಿ ಪೆನಾಲ್‍ನಿಂದ ಇಬ್ಬರು ಸದಸ್ಯರು ಆಯ್ಕೆಯಾಗಿದ್ದಾರೆ. ಬಿಲಗುಂದಿ ಪೆನಾಲ್‍ನಿಂದ ಆಯ್ಕೆಯಾದ ಸದಸ್ಯರು- ಡಾ.ಕಿರಣ ದೇಶಮುಖ 622, ಮಹಾದೇವಪ್ಪ ರಾಮಪುರೆ 614, ಡಾ.ನಾಗೇಂದ್ರ ಎಸ್. ಮಂಠಾಳೆ 567, ಸಾಯಿನಾಥ ಪಾಟೀಲ 530 ಮತ್ತು ಡಾ.ಅನೀಲಕುಮಾರ ಪಟ್ಟಣ 529 ಡಾ.ಕಾಮರೆಡ್ಡಿ ಪೆನಾಲ್- ನಾಗಣ್ಣ ಎಸ್. ಘಂಟಿ -508 ಮತ್ತು ಅನೀಲಕುಮಾರ ಎಸ್. ಮರಗೋಳ 494 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.