ಸ್ವಾಮಿಯ ಬಾವುಟವನ್ನು ₹5 ಲಕ್ಷಕ್ಕೆ ಹರಾಜು ಪಡೆದ ಸಂಸದ ಶ್ರೇಯಸ್ ಪಟೇಲ್
ಕನ್ನಡಪ್ರಭ ವಾರ್ತೆ,ಬೀರೂರುಗಿರಿ ಶಿಖರಗಳ ತಪ್ಪಲಿನಲ್ಲಿ ನೆಲೆಸಿರುವ 500ವರ್ಷಗಳ ಇತಿಹಾಸದ ಅತ್ಯಂತ ಪುರಾತನ ಹಾಗೂ ಪ್ರಸಿದ್ಧ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಸೋಮವಾರ ಮಧ್ಯಾಹ್ನ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿಂದ ನಡೆಯಿತು. ರಥೋತ್ಸವದ ಪ್ರಯುಕ್ತ ಶ್ರೀರಂಗನಾಥ ಸ್ವಾಮಿ ಧ್ವಜಾರೋಹಣ, ಗರುಡೋತ್ಸವ, ದೊಡ್ಡ ಕಂಚಿನ ಗರುಡೋತ್ಸವ, ಕುಂಭಾಭಿಷೇಕ, ದಿವ್ಯಕಲ್ಯಾಣೋತ್ಸವ, ಗಜಾರೋಹಣ ಉತ್ಸವ, ಕೃಷ್ಣ ಗಂಧೋತ್ಸವ ವಿಶೇಷ ಅಲಂಕಾರ ನಡೆಯಿತು.ಸೋಮವಾರ ಬೆಳಗ್ಗೆ ಸ್ವಾಮಿಗೆ 108 ನಾಣ್ಯಗಳಿಂದ ರಜತಾಭಿಷೇಕ, ಮಹಾಭಿಷೇಕ, ದಿವ್ಯಾಲಂಕಾರ, ಅರ್ಚನೆ, ಅಷ್ಟೋತ್ತರ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮರಥೋತ್ಸವ ವಿಧಿವತ್ತಾಗಿ ನಡೆಯಿತು.-- ಬಾಕ್ಸ್--₹ 5ಲಕ್ಷಕ್ಕೆ ಬಾವುಟ ತಮ್ಮದಾಗಿಸಿಕೊಂಡ ಸಂಸದಸಂಪ್ರದಾಯದಂತೆ ಬ್ರಹ್ಮರಥೋತ್ಸವದಲ್ಲಿ ರಥದ ಮೊದಲನೆ ಮಂಗಳಾರತಿ ಪ್ರಧಾನ ಬಾವುಟವನ್ನು ಇಲ್ಲಿ ಹರಾಜು ನಡೆಸ ಲಾಗುತ್ತದೆ. ಅದರಂತೆ ಈ ಬಾರಿ ರಥೋತ್ಸವಕ್ಕೆ ಮೊದಲ ಬಾರಿ ಶಾಸಕ ಕೆ.ಎಸ್.ಆನಂದ್ ರೊಂದಿಗೆ ಆಗಮಿಸಿದ್ದ ಹಾಸನ ಸಂಸದ ಶ್ರೇಯಸ್ ಪಟೇಲ್ ಹರಾಜಿನಲ್ಲಿ ಭಾಗವಹಿಸಿ ₹5ಲಕ್ಷಗಳಿಗೆ ಹರಾಜು ಕೂಗಿ ಬಾವುಟ ಪಡೆದು ಮೊದಲ ಪೂಜೆ ಸಲ್ಲಿಸುವ ಗೌರವ ತಮ್ಮದಾಗಿಸಿಕೊಂಡರು.ಬರ ಬೇಸಿಗೆಯಲ್ಲಿ ರಥೋತ್ಸವಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ತಂಪಾದ ಮಜ್ಜಿಗೆ ಮತ್ತು ಪಾನಕ ಕೋಸಂಬರಿ ನೀಡಿ ದಾಹ ತಣಿಸುತ್ತಿದುದ್ದುಕಂಡು ಬಂತು. ಭಕ್ತರು ಪುಷ್ಪಾಲಂಕೃತಗೊಂಡಿದ್ದ ತೇರನ್ನು ಗೋವಿಂದನಾಮ ಸ್ಮರಣೆ ಮಾಡುತ್ತಾ, ರಥ ಎಳೆಯುವ ಜೊತೆ ಬಾಳೆಹಣ್ಣು ಎಸೆದು ಹಣ್ಣುಕಾಯಿ ಕೊಟ್ಟು ತಮ್ಮ ಭಕ್ತಿ ಸಮರ್ಪಿಸಿದರು. ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ದೇವಾಲಯ ಸಮಿತಿ ವಿಶೇಷ ಭೋಜನದ ವ್ಯವಸ್ಥೆ ಮಾಡಿತ್ತು.
ಬಾವುಟ ಪಡೆದು ಮೊದಲ ಪೂಜೆಗೆ ಪಾತ್ರರಾದ ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ನಾನು ಲೊಕಸಭಾ ಚುನಾವಣ ಪ್ರಚಾರಕ್ಕೆ ಬಂದಾಗ ಈ ದೇಗುಲಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಇಲ್ಲಿನ ವಿಶೇಷತೆ ಅರಿತು ರಥೋತ್ಸವಕ್ಕೆ ಭಾಗಿ ಯಾಗು ವುದಾಗಿ ತಿಳಿಸಿದ್ದೆ. ಅದರಂತೆ ಸ್ವಾಮಿ ಆಶೀರ್ವಾದ ಪಡೆಯಲು ಬಾವುಟ ಪಡೆದುಕೊಂಡಿದ್ದು ಸಂತಸ ತಂದಿದೆ ಎಂದರು.ದೇವಸ್ಥಾನ ಸಮಿತಿ ಅಧ್ಯಕ್ಷರಾದ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಗೌರವಾಧ್ಯಕ್ಷ ಲಕ್ಷಿö್ಮಕಾಂತ್ ,ಹೆಚ್.ಎಸ್.ಮೂರ್ತಿ, ಸಿ.ಟಿ.ರಮೇಶ್ ಬಾಬು, ಹೆಚ್.ಜಿ ಶಶಿಕುಮಾರ್ ನಾಗಭೂಷಣ್ ,ವಿಶ್ವಜ್ಞಾಚಾರ್ ಸೇರಿದಂತೆ ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು, ತಾ.ಪಂ.ಮಾಜಿ ಸದಸ್ಯ ಶಶಿಕುಮಾರ್,ಭಕ್ತಾಧಿಗಳು ಹಾಗೂ ದೇವಾಲಯದ ಪ್ರಧಾನಅರ್ಚಕ ಶ್ರೀನಿವಾಸ ಮೂರ್ತಿ, ಸಂತೋಷ್, ನಾಗರಾಜ್, ಗಿರೀಶ್ ,ಮೊದಲಾದವರು ಪಾಲ್ಗೊಂಡಿದ್ದರು.--ಕೋಟ್--
ಹೊಗರೇಹಳ್ಳಿ ಲಕ್ಷ್ಮಿ ರಂಗನಾಥಸ್ವಾಮಿ ನಮ್ಮ ಕುಲದೈವವಾಗಿದ್ದು ಸ್ವಾಮಿ ಆಶೀರ್ವಾದದಿಂದ ಚುನಾವಣೆಯಲ್ಲಿ ಜಯಶೀಲ ನಾಗಲು ಸಾಧ್ಯವಾಯಿತು. ನಾನು ಶಾಸಕನಾದ ಕ್ಷಣದಿಂದಲು ನನಗೆ ಸರ್ಕಾರದಿಂದ ವರ್ಷಕ್ಕೆ ಬರುವ ₹1.20 ಲಕ್ಷ ಗೌರವ ಧನವನ್ನು ದೇವಾಲಕ್ಕೆ ಅರ್ಪಿಸುತ್ತಾ ಬಂದಿದ್ದೇನೆ. ಸದ್ಯ ರಥದ ಹೊಸ ಚಕ್ರಗಳನ್ನು ಮಾಡಿಸಲು ₹ 2.50 ಲಕ್ಷ ನಗದನ್ನು ದೇವಾಲಯದ ಕಮಿಟಿಗೆ ಅರ್ಪಿಸಿ, ಸ್ವಾಮಿ ಆಶೀರ್ವಾದದಿಂದ ಕ್ಷೇತ್ರದ ರೈತಾಪಿ ವರ್ಗದ ಜನರಿಗೆ ಉತ್ತಮ ಮಳೆ, ಬೆಳೆ ನೀಡಲಿ, ಜೊತೆಗೆ ಕಡೂರು ಕ್ಷೇತ್ರದ ಅಭಿವೃದ್ಧಿ ಸರ್ಕಾರದಿಂದ ಹೆಚ್ಚಿನ ಹಣ ತಂದು ಕಾರ್ಯನಿರ್ವಹಿಸಲು ಸ್ವಾಮಿ ಕರುಣಿಸಲಿ.ಕೆ.ಎಸ್.ಆನಂದ್ಶಾಸಕ
21 ಬೀರೂರು 1ಬೀರೂರಿನ ಸಮೀಪದ ಹೊಗರೇಹಳ್ಳಿಯ ಶ್ರೀ ಲಕ್ಷ್ಮಿರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.21 ಬೀರೂರು 2ಬಾವುಟ ಪಡೆದ ಸಂತಸದಲ್ಲಿ ಸಂಸದ ಶ್ರೇಯಸ್ ಪಟೇಲ್.