ಭಾರೀ ಮಳೆ ಹಿನ್ನೆಲೆ ಭೋರ್ಗರೆಯುತ್ತಿರುವ ಕಾವೇರಿ । ಮುನ್ನೆಚ್ಚರಿಕೆಯಾಗಿ ಅರಣ್ಯ ಇಲಾಖೆ ಕ್ರಮ । ಎರಡು ರಾಜ್ಯದ ಜನರಿಗೆ ನಿಷೇಧ
ಹೊಗೇನಕಲ್ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರುವ ಮೂಲಕ ಅರಣ್ಯ ಇಲಾಖೆ ಮುಂಜಾಗ್ರತೆ ಕ್ರಮ ಕೈಗೊಂಡಿದೆ.
ಹನೂರು ತಾಲೂಕಿನ ಪ್ರೇಕ್ಷಣೀಯ ಸ್ಥಳ ಹೊಗೇನಕಲ್ ಜಲಪಾತ ವೀಕ್ಷಣೆಗೆ ಕರ್ನಾಟಕ ಹಾಗೂ ತಮಿಳುನಾಡು ಎರಡು ರಾಜ್ಯದ ಜಲಪಾತದ ದಡದಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸುವ ಮೂಲಕ ಮುನ್ನೆಚ್ಚರಿಕೆ ಕ್ರಮವಹಿಸಲಾಗಿದೆ.ಭೋರ್ಗರೆಯುತ್ತಿದೆ ಕಾವೇರಿ ನದಿ:
ಹೊಗೇನಕಲ್ ಜಲಪಾತದ ರೌದ್ರ ನರ್ತನ:
ಪ್ರವಾಸಿಗರಿಗೆ ನಿರ್ಬಂಧ:
ಮಳೆ ಇಲ್ಲದೆ ಬಣಗುಟ್ಟುತ್ತಿದ್ದ ಹೊಗೇನಕಲ್ ಜಲಪಾತ ಕಾವೇರಿ ಜಲಾನಯನ ಪ್ರದೇಶದಲ್ಲಿ ಕಬಿನಿ ಹೊರಹರಿವು ಹೆಚ್ಚಳದಿಂದ ಕಾವೇರಿ ನದಿಯ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ತಮಿಳುನಾಡಿನ ಭಾಗದಲ್ಲಿ ಅಲ್ಲಿನ ಸರ್ಕಾರ ತೆಪ್ಪ ನಡೆಸುವವರಿಗೆ ತೆಪ್ಪಗಳನ್ನು ಇಡಲು ಶಡ್ ನಿರ್ಮಾಣ ಮಾಡಿ ಸುರಕ್ಷತಾ ಸಾಧನಗಳನ್ನು ಸಹ ನೀಡಿದೆ. ಕರ್ನಾಟಕದ ಭಾಗದಲ್ಲಿ ತೆಪ್ಪ ನಡೆಸುವವರಿಗೆ ತೆಪ್ಪಗಳನ್ನು ಇಡಲು ಯಾವುದೇ ಸುರಕ್ಷಿತ ಸ್ಥಳ ಶೆಡ್ ಇಲ್ಲದೆ ಬಿಸಿಲು ಮಳೆಯಲ್ಲಿ ಇಡಲಾಗಿದೆ. ಇದರಿಂದಾಗಿ ಪ್ರವಾಸಿಗರಿಗೆ ಇಲ್ಲಿನ ಯಾವುದೇ ಸೌಲಭ್ಯ ಇಲ್ಲದೆ ಇರುವುದರಿಂದ ಮುಂದಿನ ದಿನಗಳಲ್ಲಿ ಇಲ್ಲಿನ ಸರ್ಕಾರ ಹಾಗೂ ಜಿಲ್ಲಾಡಳಿತ ಪ್ರವಾಸಿಗರಿಗೆ ಕನಿಷ್ಠ ಮೂಲಭೂತ ಸೌಲಭ್ಯವನ್ನಾದರೂ ಕಲ್ಪಿಸುವಂತೆ ಪ್ರವಾಸಿಗರು ಒತ್ತಾಯಿಸಿದ್ದಾರೆ.
ತಮಿಳುನಾಡಿನಲ್ಲಿ ತೆಪ್ಪ ನಡೆಸುವವರ ಸುರಕ್ಷತೆ ಹಾಗೂ ಜಲಪಾತ ವೀಕ್ಷಣೆಗೆ ನಿಷೇಧ ಹೇರಿರುವ ಕಾರಣ ಅಲ್ಲಿನ ಸರ್ಕಾರ ತೆಪ್ಪಗಳನ್ನು ಸುರಕ್ಷಿತ ಸ್ಥಳದಲ್ಲಿ ಇಡಲು ಶೆಡ್ ನಿರ್ಮಾಣ ಮಾಡಿಕೊಟ್ಟಿದೆ. ಆದರೆ ನಮ್ಮ ಕರ್ನಾಟಕದ ಗಡಿಭಾಗದ ತೆಪ್ಪ ನಡೆಸುವವರ ನಿವಾಸಿಗಳ ತೆಪ್ಪಗಳು ಬಿಸಿಲು ಮಳೆಯಲ್ಲಿ ಬಿದ್ದಿವೆ.