ಕನ್ನಡಪ್ರಭ ವಾರ್ತೆ ಕಮತಗಿ
ಚಿನ್ನದ ಕಳಶಹೊತ್ತ ರಥವು ರಥ ಬೀದಿಯಲ್ಲಿ ರಾಜ ನಡಿಗೆ ಹಾಕುತ್ತಿದ್ದಾಗ ಅಸಂಖ್ಯಾತ ಭಕ್ತ ಸಮೂಹ ಉತ್ತತ್ತಿ, ಬಾಳೆಹಣ್ಣು, ಲಿಂಬೆಹಣ್ಣು ಸಮರ್ಪಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು.
ಮುರಗೋಡ ಮಹಾಂತ ದುರದುಂಡೇಶ್ವರಮಠದ ನೀಲಕಂಠ ಸ್ವಾಮೀಜಿ, ಕಮತಗಿ ಹೊಳೆ ಹುಚ್ಚೇಶ್ವರ ಸ್ವಾಮೀಜಿ, ಮುನವಳ್ಳಿ ಸೋಮಶೇಖರಮಠದ ಮುರಘೇಂದ್ರ ಸ್ವಾಮೀಜಿ, ಗಂಗಾವತಿ ಕಲ್ಮಠದ ಕೊಟ್ಟೂರ ಸ್ವಾಮೀಜಿ, ಗುಳೇದಗುಡ್ಡ ಮುರುಘಾಮಠದ ಕಾಶೀನಾಥ ಸ್ವಾಮೀಜಿ, ಕುಂದರಗಿ ಅಡವಿಸಿದ್ದೇಶ್ವರಮಠದ ಅಮರಸಿದ್ದೇಶ್ವರ ಸ್ವಾಮೀಜಿ, ಬಸವಣ್ಣೆಮ್ಮ ಬಸರಕೋಡ, ಕಮತಪುರ ಉತ್ಸವ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಕಮತಗಿ ಪಟ್ಟಣ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಗ್ರಾಮಸ್ಥರು ರಥೋತ್ಸವದಲ್ಲಿ ಭಾಗವಹಿಸಿದ್ದರು.