ಕನ್ನಡಪ್ರಭ ವಾರ್ತೆ ಹಳೇಬೀಡು
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಹಳೇಬೀಡಿನ ಅಂಬೇಡ್ಕರ್ ಸರ್ಕಲ್ ವೃತ್ತದಿಂದ ರಾಜನಸಿರಿಯೂರು ಹೋಗುವ ರಸ್ತೆ ಅಧೋಗತಿ ತಲುಪಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ವಿಶ್ವ ವಿಖ್ಯಾತ ಹಳೇಬೀಡು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು, ಶಿಲ್ಪಕಲಾ ವೈಭವವನ್ನು ನೋಡಲು ದಿನನಿತ್ಯ ಸಾವಿರಾರು ಜನರು ಆಗಮಿಸುವ ಸ್ಥಳವಾಗಿದೆ. ಹಳೇಬೀಡು ಬೇಲೂರು ತಾಲೂಕಿಗೆ ದೊಡ್ಡ ಹೋಬಳಿ ಕೇಂದ್ರವಾಗಿದ್ದು ಇಲ್ಲಿನ ಅಂಬೇಡ್ಕರ್ ಸರ್ಕಲ್ ವೃತ್ತದಿಂದ ಬಿದರಿಕೆರೆ ಪ್ರಥಮ ಹಂತದ ಕೋಡಿವರೆಗೆ ರಸ್ತೆ ತೀರಾ ಹದಗೆಟ್ಟಿದೆ. ಈ ರಸ್ತೆಯಲ್ಲಿ ಎಸ್.ಬಿ.ಎಮ್. ಬ್ಯಾಂಕ್, ಬಜಾಜ್ ಶೋರೂಮ್, ಹಲವಾರು ಅಂಗಡಿಗಳು, ತರಕಾರಿ ಮಾರುಕಟ್ಟೆ ಇದ್ದು ಜನರಿಗೆ ಓಡಾಡಲು ಭಾರಿ ತೊಂದರೆಯಾಗಿದೆ.
ಜೊತೆಗೆ ಮಳೆಯ ಪ್ರಭಾವದಿಂದ ರಸ್ತೆ ತುಂಬೆಲ್ಲಾ ಗುಂಡಿಗಳಾಗಿದ್ದು, ದ್ವಿ ಚಕ್ರ ವಾಹನ ಸವಾರರ ಸ್ಥಿತಿ ಹೇಳತೀರದ್ದಾಗಿದೆ. ಹಳೇಬೀಡಿನಿಂದ ರಾಜನಸಿರಿಯೂರುವರೆಗೆ ೫ ಕೀ.ಮೀ. ಅಂತರವಿದ್ದು ಹಳೇಬೀಡಿನಿಂದ ಬಿದಿರಿಕೆರೆ ಕೋಡಿವರೆಗೆ ರಸ್ತೆ ತೀರ ಹದಗಟ್ಟಿದೆ. ಆದರೆ ಅಲ್ಲಿಂದ ಬಂಡಿ ಲಕ್ಕನ ಕೊಪ್ಪಲುವರೆಗೆ ಸಂಚಾರಕ್ಕೆ ಯೋಗ್ಯವಾಗಿದ್ದು, ನಮ್ಮ ಊರು ರಾಜನಸಿಯೂರು ಬಗ್ಗೆ ಏಕೆ ತಾತ್ಸಾರ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ. ಜನಪ್ರತಿನಿಧಿಗಳು ಈ ಕಡೆ ಗಮನಹರಿಸಿ ತಕ್ಷಣವೇ ಈ ರಸ್ತೆಯನ್ನು ದುರಸ್ತಿ ಮಾಡಿ ಸಂಪರ್ಕಕ್ಕೆ ಅನುಕೂಲ ಕಲ್ಪಿಸಿಕೊಡಬೇಕೆಂದು ಸ್ಥಳೀಯ ಜನತೆ ಒತ್ತಾಯಿಸಿದ್ದಾರೆ.ಹೇಳಿಕೆ-1
ಸ್ಥಳಿಯ ಶಾಸಕರು ಈ ರಸ್ತೆಯ ಬಗ್ಗೆ ಗಮನ ನೀಡಬೇಕು. ಇಲ್ಲಿ ನಿತ್ಯ ಸಾವಿರಾರು ರೈತರು ತಮ್ಮ-ತಮ್ಮ ಬೆಳೆದ ತರಕಾರಿಯನ್ನು ವ್ಯಾಪಾರ ಮಾಡಲು ಬರುತ್ತಾರೆ, ಅವರಿಗೆ ತೊಂದರೆಯಾಗದೆ- ಜಗದೀಶ್, ಸ್ಥಳೀಯ ಹೇಳಿಕೆ-2
ಇದು ರಾಜ್ಯ ಹೆದ್ದಾರಿಯಾಗಿದ್ದು ಇಲ್ಲಿಂದ ಹಲವಾರು ಗ್ರಾಮಗಳಿಗೆ ಸಂಪರ್ಕವಿದ್ದು ನಿತ್ಯವಾಹನಗಳ ಸಂಖ್ಯೆ ಜಾಸ್ತಿ ಇದೆ. ಈ ರಸ್ತೆಯನ್ನು ಶೀಘ್ರವಾಗಿ ಅಭಿವೃದ್ಧಿ ಪಡಿಸಿ ನಾಗರಿಕರಿಗೆ ಅನುಕೂಲ ಮಾಡಿ ಕೊಡಿ.- ಉಮೇಶ್, ಸ್ಥಳೀಯ ಚಿತ್ರ-೧ ಹಳೇಬೀಡಿನ ಅಂಬೇಡ್ಕರ್ ಸರ್ಕಲ್ ವೃತ್ತದಿಂದ ರಾಜನಸಿರಿಯೂರು ಹೋಗುವ ರಸ್ತೆ ಗುಂಡಿಬಿದ್ದು ಹಾಳಾಗಿರುವುದು.