ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದೆಲ್ಲೆಡೆ ಮಂಗಳವಾರ ಸಂಭ್ರಮದ ಹೋಳಿ ಹಬ್ಬ ಆಚರಿಸಲಾಯಿತು. ವಿವಿಧ ದೇವಾಲಯಗಳಲ್ಲಿ ಹೋಳಿ ಹಬ್ಬದ ಅಂಗವಾಗಿ ವಿಶೇಷ ಪೂಜೆ, ಉತ್ಸವಗಳು ನಡೆದವು.
ಇಲ್ಲಿನ ವಡ್ಡರಪೇಟೆಯಲ್ಲಿರುವ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಕದರಿ ಹುಣ್ಣಿಮೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇವರ ರಾಜಬೀದಿ ಉತ್ಸವ ಆಯೋಜಿಸಲಾಗಿತ್ತು.
ಬಣ್ಣದೋಕುಳಿ ಸಂಭ್ರಮ:ಸಂಭ್ರಮದ ಸಂಕೇತವಾಗಿರುವ ಹೋಳಿ ಬದುಕಿನಲ್ಲಿ ಹೊಸ ಆಶಯಗಳಿಗೆ ಪೂರಕವಾಗಿ ಉನ್ನತ ಚಿಂತನೆಗಳು ಮೂಡುವಂತೆ ಮಾಡಲಿ ಎಂಬ ಆಶಯದೊಂದಿಗೆ ಬಣ್ಣದೋಕುಳಿ ಎರಚಿ ಸಂಭ್ರಮಿಸಿದರು. ಜಗತ್ತಿನ ಜನ ಪರಸ್ಪರ ಭ್ರಾತೖತ್ವ ಧೋರಣೆಯಿಂದ ಸುಖ-ಶಾಂತಿ-ನೆಮ್ಮದಿಯಿಂದ ಬಾಳುವಂತಾಗಲಿ ಎಂಬ ಮಹತ್ವಾಕಾಂಕ್ಷೆ ಈ ಹೋಳಿ ಹಬ್ಬದ್ದು. ಕಾಲೇಜು ವಿದ್ಯಾಥಿ೯-ವಿದ್ಯಾಥಿ೯ನಿಯರು, ಕಾಮಿ೯ಕರು, ಸಾವ೯ಜನಿಕರು, ವಿಶೇಷವಾಗಿ ಪುಟಾಣಿ ಮಕ್ಕಳು ಕೂಡಾ ಹೋಳಿ ಬಣ್ಣದಾಟದಲ್ಲಿ ತೊಡಗಿದ್ದ ದೖಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ರಸ್ತೆಗಳಲ್ಲಿ ಬಣ್ಣ ಮೆತ್ತಿಕೊಂಡು ಸುತ್ತಾಡುತ್ತಿದ್ದ ಯುವಕರು ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು.
ದೊಡ್ಡಬಳ್ಳಾಪುರ ತಾಲೂಕಿನ ಮಧುರೆ, ತೂಬಗೆರೆ, ಸಾಸಲು, ದೊಡ್ಡಬೆಳವಂಗಲ ಹೋಬಳಿಗಳಲ್ಲೂ ಹೋಳಿಯ ಸಂಭ್ರಮ ಮನೆಮಾಡಿತ್ತು.
3ಕೆಡಿಬಿಪಿ7- ದೊಡ್ಡಬಳ್ಳಾಪುರದ ವಡ್ಡರಪೇಟೆಯಲ್ಲಿರುವ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಹೋಳಿ ಹುಣ್ಣಿಮೆ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು.