ಕನ್ನಡಪ್ರಭ ವಾರ್ತೆ, ತುಮಕೂರುಜೆಡಿಎಸ್ ವರಿಷ್ಠರೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಆರೋಗ್ಯ, ಶ್ರೇಯಸ್ಸು ದೊರೆಯಲಿ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಯವರು 2028 ಕ್ಕೆ ರಾಜ್ಯದ ಮುಖ್ಯಮಂತ್ರಿಯಾಗಲಿ, ಜೆಡಿಎಸ್ ಪಕ್ಷ ಬಲವರ್ಧನೆಯಾಗಲಿ ಎಂದು ಪ್ರಾರ್ಥಿಸಲು ಶುಕ್ರವಾರ ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ವಿಶೇಷ ಹೋಮಹವನ, ಪೂಜೆ ಪುನಸ್ಕಾರಗಳನ್ನು ಹಮ್ಮಿಕೊಳ್ಳಲಾಗಿತ್ತು.
ಗ್ರಾಮಾಂತರ ಶಾಸಕ, ಬಿಜೆಪಿ ನಾಯಕ ಬಿ.ಸುರೇಶ್‌ಗೌಡ, ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ, ಸುಧಾಕರ ಲಾಲ್, ಮಾಜಿ ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ, ತುಮುಲ್ ನಿರ್ದೇಶಕ ಎಸ್.ಆರ್.ಗೌಡ, ಮುಖಂಡರಾದಗುಬ್ಬಿ ನಾಗರಾಜು, ಉಗ್ರೇಶ್ ಮೊದಲಾದವರು ಎಚ್.ನಿಂಗಪ್ಪದಂಪತಿಗೆ ಶುಭಾಶಯ ಸಲ್ಲಿಸಿದರು.
ಜೆಡಿಎಸ್ ಕಚೇರಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಬೆಳಗಿನಿಂದ ಗಣ ಹೋಮ, ಸುದರ್ಶನ ಹೋಮ, ವಾಸ್ತು ಹೋಮ ಹಾಗೂ ಪೂರ್ಣಾಹುತಿ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಜಿಲ್ಲೆಯಾದ್ಯಂತ ಪಕ್ಷದ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಎಚ್.ನಿಂಗಪ್ಪ, ವಕೀಲ ವೃತ್ತಿ ಮಾಡುತ್ತಿದ್ದ ತಾವು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸಾರ್ವಜನಿಕ ಜೀವನಕ್ಕೆ ಬಂದು 45 ವರ್ಷವಾಯಿತು. ಜಿಲ್ಲಾ ಪಂಚಾಯ್ತಿ ಸದಸ್ಯನಾಗಿ, ಒಮ್ಮೆ ಶಾಸಕನಾಗಿದ್ದೆ.ಆದರೆ ರಾಜಕೀಯವಾಗಿ ಹೇಳಿಕೊಳ್ಳುವಂತಹ ಏಳಿಗೆ ತಮಗೆ ಆಗಲಿಲ್ಲ ಎಂಬ ನೋವು ಇದೆ.ಆದೇನೇ ಆಗಲಿ, ಅಧಿಕಾರ ಇರಲಿ, ಬಿಡಲಿ ಕೊನೆವರೆಗೂ ನಾನು ಜನರೊಂದಿಗೆ ಇರುತ್ತೇನೆ ಎಂದು ಹೇಳಿದರು.
ಇದರ ಅಂಗವಾಗಿ ನಗರ ಮಹಾ ಪ್ರಧಾನ ಕಾರ್ಯದರ್ಶಿ ಟಿ.ಸಿ.ಪ್ರಭಾಕರ್ ಎಲ್ಲಾ ಕಾರ್ಯಕರ್ತರಿಗೂ ಊಟದ ವ್ಯವಸ್ಥೆ ಮಾಡಿದ್ದರು. ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್. ನಾಗರಾಜು, ಹಿರಿಯ ಮುಖಂಡರಾದ ಟಿ.ಎಲ್. ಕುಂಭಯ್ಯ, ಗಂಗಣ್ಣ, ನಗರ ಅಧ್ಯಕ್ಷ ಟಿ.ಎಚ್. ಜಯರಾಮ್, ಕಾರ್ಯಾಧ್ಯಕ್ಷ ಟಿ.ಸಿ.ಮೋಹನ್‌ಕುಮಾರ್, ನಗರ ಮಹಾ ಪ್ರಧಾನ ಕಾರ್ಯದರ್ಶಿ ಟಿ.ಸಿ. ಪ್ರಭಾಕರ್, ರಾಜ್ಯ ಎಸ್ಟಿ ಘಟಕಉಪಾಧ್ಯಕ್ಷ ಸೋಲಾರ್‌ಕೃಷ್ಣಮೂರ್ತಿ, ನಗರಸಭೆ ಮಾಜಿಉಪಧ್ಯಕ್ಷಶ್ರೀನಿವಾಸ್‌ಪ್ರಸಾದ್, ಮಾಜಿ ಸದಸ್ಯರಾದಟಿ.ಜಿ. ನರಸಿಂಹರಾಜು, ಧರಣೇಂದ್ರಕುಮಾರ್, ಟಿ.ಎ. ಬಾಲಕೃಷ್ಣ, ಶ್ರೀನಿವಾಸ್, ಲಕ್ಷ್ಮೀನರಸಿಂಹರಾಜು, ಟಿ.ಎಚ್. ಬಾಲಕೃಷ್ಣ, ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ರೇಖಾ ರಾಜ್, ನಗರ ಅಧ್ಯಕ್ಷೆ ಲಕ್ಷ್ಮೀ ನಾಯಕ್, ಜಿಲ್ಲಾ ರೈತ ಸಂಘದಅಧ್ಯಕ್ಷರಂಗನಾಥ್, ಜಿಲ್ಲಾ ಪ್ರಚಾರ ಸಮಿತಿಅಧ್ಯಕ್ಷಕೆಂಪರಾಜು, ನಗರಯುವಅಧ್ಯಕ್ಷ ಪ್ರಮೋದ್‌ಗೌಡ, ತಾಲೂಕು ಅಧ್ಯಕ್ಷ ನಾಗವಲ್ಲಿ ರಾಮು, ಮುಖಂಡರಾದ ಯೋಗಾ ನಂದಕುಮಾರ್, ಉಪ್ಪಾರಹಳ್ಳಿ ಕುಮಾರ್, ನವೀನ್‌ಗೌಡ, ಬೆಳಗುಂಬ ವೆಂಕಟೇಶ್, ಭೈರೇಶ್, ದರ್ಶನ್‌ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.