ಅನಾಥ ವೃದ್ಧನಿಗೆ ಆಶ್ರಯ ನೀಡಿದ ಹೋಂ ಡಾಕ್ಟರ್ ಫೌಂಡೇಷನ್

KannadaprabhaNewsNetwork |  
Published : Jan 03, 2025, 12:33 AM IST
02ಆಶ್ರಮ | Kannada Prabha

ಸಾರಾಂಶ

ಹಿರಿಯಡ್ಕ ಮೂಲದ ಮಂಜುನಾಥ ಜೋಗಿ (78) ಅವರು ಹಳೆ ಮನೆಯಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಇತ್ತೀಚಿಗೆ ವೃದ್ಧಾಪ್ಯದ ದೆಸೆಯಿಂದಾಗಿ ಆಹಾರ ತಯಾರಿಸಲು ಕೂಡ ಸಾಧ್ಯವಾಗದೇ, ತನಗೆ ಆಶ್ರಯ ಒದಗಿಸುವಂತೆ ಅವರು ವಿಶು ಶೆಟ್ಟಿ ಅವರಲ್ಲಿ ವಿನಂತಿಸಿದ್ದರು.

ಮಾನವೀಯತೆ ಮೆರೆದ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿಕನ್ನಡಪ್ರಭ ವಾರ್ತೆ ಉಡುಪಿವೃದ್ಧಾಪ್ಯದ ದೆಸೆಯಿಂದ ಜೀವನ ನಡೆಸಲಾಗದೆ ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧರೊಬ್ಬರನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ರಕ್ಷಿಸಿ ಉಡುಪಿಯ ಹೋಂ ಡಾಕ್ಟರ್ ಫೌಂಡೇಶನ್ ನಡೆಸುವ ಸ್ವರ್ಗ ಆಶ್ರಮಕ್ಕೆ ದಾಖಲಿಸಿದ್ದಾರೆ.ಹಿರಿಯಡ್ಕ ಮೂಲದ ಮಂಜುನಾಥ ಜೋಗಿ (78) ಅವರು ಹಳೆ ಮನೆಯಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಇತ್ತೀಚಿಗೆ ವೃದ್ಧಾಪ್ಯದ ದೆಸೆಯಿಂದಾಗಿ ಆಹಾರ ತಯಾರಿಸಲು ಕೂಡ ಸಾಧ್ಯವಾಗದೇ, ತನಗೆ ಆಶ್ರಯ ಒದಗಿಸುವಂತೆ ಅವರು ವಿಶು ಶೆಟ್ಟಿ ಅವರಲ್ಲಿ ವಿನಂತಿಸಿದ್ದರು.ವೃದ್ಧರ ಕೋರಿಕೆಗೆ ಸ್ಪಂದಿಸಿದ ವಿಶು ಶೆಟ್ಟಿ, ಹೋಂ ಡಾಕ್ಟರ್ ಫೌಂಡೇಶನ್ ಮುಖ್ಯಸ್ಥರಾದ ಡಾ. ಶಶಿಕಿರಣ ಅವರನ್ನು ಸಂಪರ್ಕಿಸಿ, ವೃದ್ಧರಿಗೆ ಆಶಯ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಡಾ. ಶಶಿಕಿರಣ್ ಅವರ ಸೂಚನೆಯಂತೆ ವಿಶು ಶೆಟ್ಟಿ, ವೃದ್ಧರನ್ನು ತನ್ನದೇ ವಾಹನದಲ್ಲಿಯೇ ಕರೆದೊಯ್ದು ಕೊಳಲಗಿರಿಯಲ್ಲಿರುವ ಸ್ವರ್ಗ ಆಶ್ರಮಕ್ಕೆ ದಾಖಲಿಸಿದ್ದಾರೆ.ಪ್ರಕರಣದ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಕಾನೂನು ಪ್ರಕ್ರಿಯೆ ನಡೆಸಲಾಗಿದೆ. ವೃದ್ಧರ ಸಂಬಂಧಿಕರು ಯಾರಾದರೂ ಇದ್ದರೆ ಆಶ್ರಮವನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!