ಉಪ್ಪಾರ ಸಮಾಜವನ್ನು ಎಸ್ ಟಿಗೆ ಸೇರಿಸಲು ಪ್ರಾಮಾಣಿಕ ಪ್ರಯತ್ನ: ಶಾಸಕ ಕೆ. ಎಸ್. ಆನಂದ್

KannadaprabhaNewsNetwork |  
Published : May 25, 2026, 01:30 AM IST
24ಕಕಡಿಯು4ಎ. | Kannada Prabha

ಸಾರಾಂಶ

ಕಡೂರುಉಪ್ಪಾರ ಸಮಾಜವನ್ನು ಎಸ್ ಟಿಗೆ ಸೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆಯುತ್ತೇನೆ ಎಂದು ಶಾಸಕ ಕೆ. ಎಸ್. ಆನಂದ್ ತಿಳಿಸಿದರು.

ಕಡೂರಿನಲ್ಲಿ ಜಿಲ್ಲಾ ಮಟ್ಟದ ಭಗೀರಥ ಜಯಂತಿ ಆಚರಣೆಕನ್ನಡಪ್ರಭ ವಾರ್ತೆ ಕಡೂರು

ಉಪ್ಪಾರ ಸಮಾಜವನ್ನು ಎಸ್ ಟಿಗೆ ಸೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆಯುತ್ತೇನೆ ಎಂದು ಶಾಸಕ ಕೆ. ಎಸ್. ಆನಂದ್ ತಿಳಿಸಿದರು.

ಕಡೂರು ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಮುದಾಯ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಭಗೀರಥ ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಉಪ್ಪಾರ ಸಮಾಜದ ಮಹಾಪುರುಷ ಶ್ರೀ ಭಗೀರಥರು ಸನ್ಯಾಸ ಸ್ವೀಕರಿಸಿ ರಾಜ್ಯಾಧಿಕಾರ ತ್ಯಜಿಸಿ ತಪಸ್ಸಿನಿಂದ ಗಂಗೆಯನ್ನು ಭೂಮಿಗೆ ತಂದರು. ಅಂತಹ ವಂಶದ ಉಪ್ಪಾರರು ಉಪ್ಪು ತಯಾರು ವೃತ್ತಿ ಅನುಸರಿಸಿ ಉಪ್ಪಾರರಾದರು. ಈ ಸಮಾಜ ರಾಜ್ಯದ ಹಿಂದುಳಿದ 3ನೇ ದೊಡ್ಡಸಮಾಜ. ಸುಮಾರು 25 ಲಕ್ಷ ಜನ ಸಂಖ್ಯೆ ಇದೆ. ಸಮಾಜದ ಪುಟ್ಟರಂಗ ಶೆಟ್ಟಿ ಒಬ್ಬರೇ ಉಪ್ಪಾರ ಸಮಾಜದ ಶಾಸಕರಾಗಿದ್ದು ಮತ್ತಷ್ಟು ಮುಖಂಡರು ರಾಜಕಾರಣದಲ್ಲಿ ಮುಂದೆ ಬರಬೇಕಿದೆ ಎಂದರು. ಜನ ಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯ ಪಡೆಯಲು ಹೋರಾಟ ನಡೆಸಬೇಕಿದೆ. ಕಡೂರು ಕ್ಷೇತ್ರದಲ್ಲಿ ಹೆಚ್ಚಿನ ಜನ ಸಂಖ್ಯೆ ಇದ್ದು, ಸಮಾಜದ ಸಹಕಾರ ದಿಂದ ನಾನು, ವೈ ಎಸ್ ವಿ ದತ್ತ, ಬೆಳ್ಳಿ ಪ್ರಕಾಶ್ ಶಾಸಕರಾಗಿದ್ದೇವೆ ಎಂದು ಹೇಳಿ ಸಮಾಜವನ್ನು ಎಸ್ ಟಿ ಗೆ ಸೇರಿಸುವ ಪ್ರಯತ್ನಕ್ಕೆ ಸಿದ್ದರಾಮಯ್ಯ ಗಮನ ಸೆಳೆಯುತ್ತೇನೆ ಎಂದರು.

ಶೀಘ್ರ ಸಮಾಜದ 7 ಸಮುದಾಯಭವನಗಳ ನಿರ್ಮಾಣಕ್ಕೆ ಅನುದಾನ ತರಲಾಗುವುದು. ಇನ್ನು ಭಗೀರಥ ಭವನ ನಿರ್ಮಾಣಕ್ಕೆ ನಾನು ₹25 ಲಕ್ಷ ಅನುದಾನ ಹಾಕಿ ವೈಯಕ್ತಿಕವಾಗಿ ₹24 ಲಕ್ಷ ಇದೀಗ ನೀಡುತ್ತಿದ್ದೇನೆಂದು ತಿಳಿಸಿ ಹಣವನ್ನು ವೇದಿಕೆಯಲ್ಲೆ ನೀಡಿದರು. ಡಿಸೆಂಬರ್ ಒಳಗೆ ಭವನಕ್ಕೆ ಸರ್ಕಾರದಿಂದ ₹3 ಕೋಟಿ ಅನುದಾನ ನೀಡುವ ಭರವಸೆ ನೀಡಿದರು.

ಮಾಜಿ ಶಾಸಕ ವೈ ಎಸ್ .ವಿ. ದತ್ತ ಮಾತನಾಡಿ, ಉಪ್ಪಾರ ಸಮಾಜದೊಂದಿಗೆ ನನ್ನ ಸಂಭಂದ 20 ವರ್ಷಗಳದು. ಸಮಾಜದಿಂದ ಶಾಸಕನಾಗಿ, ಎಂಎಲ್ ಸಿ ಆದೆ. ಉಪ್ಪಿಗಿಂತ ರುಚಿ ಇಲ್ಲ ಉಪ್ಪಾರರಗಿಂತ ನಂಬಿಕಸ್ತರಿಲ್ಲ ಎಂದು ಹೇಳಿ, ಸಮಾಜಕ್ಕೆ ಹಣ ನೀಡುವ ಶಕ್ತಿ ಇಲ್ಲ. ಆದರೆ ಈ ಸಮಾಜ ಸ್ವಾಭಿಮಾನಿ ಸಮಾಜ ಎಂಬುದನ್ನು ತೋರಿಸಿದ್ದೇನೆ.

ಶಾಸಕನಾದ ಅವಧಿಯಲ್ಲಿ ಈ ಸಮಾಜದ ಗ್ರಾಮಗಳ ಮುಖಂಡರೇ ಕ್ರಿಯಾ ಶೀಲ ಯೋಜನೆ ಮಾಡುವಂತೆ ಮಾಡಿದ್ದೆ. ನಾನು ಬಡವ ಸರಕಾರದ ಅನುದಾನ ನೀಡಿದ್ದೇನೆ. ರಾಜಕೀಯವಾಗಿ ನನಗೆ ಸಿಕ್ಕಿದ್ದ ಮುಖ್ಯ ಸಚೇತಕ ಹುದ್ದೆಯನ್ನು ಉಪ್ಪಾರ ಸಮಾಜದ ಎಚ್. ಸಿ.ನೀರಾವರಿ ಅವರಿಗೆ ಕೊಡಿಸಿದ್ದು, ನಾನು ಸದಾ ನಿಮ್ಮ ಜೊತೆಯಲ್ಲಿರುತ್ತೇವೆ ಎಂದರು.

ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಮಾತನಾಡಿ, ನಿಮ್ಮ ಆಶೀರ್ವಾದದಿಂದ ನಮಗೆ ಉನ್ನತ ಸ್ಥಾನ ಸಿಕ್ಕಿತು. ಸಮಾಜದ ಕಟ್ಟಡ ನಿರ್ಮಾಣಕ್ಕೆ ₹50 ಲಕ್ಷ ಒದಗಿಸಿದ್ದೇನೆ. ₹16 ಲಕ್ಷ ಸಿಮೆಂಟ್ ಕೊಡಿಸಿದ್ದೇನೆ. ಅಕ್ಟೋಬರ್ ನಂತರ ಬಳಿಕ ಭವನಕ್ಕೆ ಹಣ ಕೊಡುವ ಬಗ್ಗೆ ತಿಳಿಸುತ್ತೇನೆ. ನನ್ನ ಉಸಿರು ಇರುವತನಕ ನಿಮ್ಮ ಜೊತೆ ಇರುತ್ತೇನೆ ಎಂದರು. ವಿಪ ಸದಸ್ಯ ಸಿ ಟಿ ರವಿ ಮಾತನಾಡಿ, ಭಗೀರಥ ಗಂಗೆಯನ್ನು ಭೂಮಿಗೆ ಕರೆತಂದರು, ಸಮಾಜ ಆತ್ಮ ವಿಶ್ವಾಸದಿಂದ ವೃತ್ತಿಗಳ ಮೂಲಕ ಜಾತಿ ಆದರೂ ಸಂಸ್ಕಾರದಲ್ಲಿ ನಾವೆಲ್ಲ ಹಿಂದೂಗಳು. ನಾವೆಲ್ಲ ಉಪ್ಪಾರ ಸಮಾಜ ಹಿಂದೂಗಳ ಒಂದು ಭಾಗ ಎಂದು ಅರಿಯಬೇಕು ಎಂದರು. ಸಾನಿಧ್ಯ ವಹಿಸಿದ್ದ ಉಪ್ಪಾರ ಸಮಾಜದ ಶ್ರೀ ಪುರುಷೋತ್ತಮಾನಂದಪುರಿ ಶ್ರೀಗಳು ಮಾತನಾಡಿ, ಕಾಲ ಬದಲಾಗುತ್ತಿದೆ.. ಶಿಕ್ಷಣ ಪಡೆದು ಸಂಘಟಿತರಾಗುತ್ತಿರುವುದು ಉತ್ತಮ ಬೆಳೆವಣಿಗೆ. ಸಂಸ್ಕಾರವಿಲ್ಲದಿದ್ದರೆ ರಾಕ್ಷಸ ಪ್ರವೃತ್ತಿ ಬರುತ್ತದೆ ಎನ್ನುತ್ತಾರೆ. ಹಬ್ಬ ಹರಿದಿನಗಳಿಗೆ ಲಕ್ಷಾಂತರ ಖರ್ಚು ಮಾಡಿ ಹಬ್ಬ ಮಾಡುವ ಬದಲು ಸಾಲ ಮಾಡದಂತೆ ಸರಳವಾಗಿ ಬದುಕಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಮತ್ತು ಸಾಧಕರನ್ನು ಗೌರವಿಸಲಾಯಿತು. ಸಮಾಜದ ಸರಕಾರಿ ನೌಕರರ ಸಂಘದ ಮುಖಂಡರಾದ ಸತೀಶ್, ವೈ ಎಂ ತಿಪ್ಪೇಶ್, ಉಪ್ಪಾರ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್ ಬಾಬು, ಸಮಾಜದ ಜಿಲ್ಲಾಧ್ಯಕ್ಷ ಮಲೆನಾಡು ನಾಗರಾಜ್, ವಿಶ್ರಾಂತ ನ್ಯಾಯಾಧೀಶರಾದ ಬಿಲ್ಲಪ್ಪ, ಲೋಕೇಶಬಾಬು, ಬಾವಿಮನೆ ಮಧು, ವೈ.ಎಂ ತಿಪ್ಪೇಶ್, ಜಿಗಣೇಹಳ್ಳಿ ನೀಲಕಂಠಪ್ಪ, ವಿಶ್ರಾಂತ ಕುಲಪತಿ ನಾಗರಾಜ್, ಟಿ ಆರ್ .ಲಕ್ಕಪ್ಪ, ಸಪ್ತಕೋಟಿ ಧನಂಜಯ, ತೋಟದಮನೆ ಮೋಹನ್, ದೇವರಾಜ್, ಭಾವಿಮನೆ ಮಧುಸ ಮೋಹನ್,

ಆಂಜನಪ್ಪ, ಚೌ ಡಪ್ಪ, ,ಸೇರಿದಂತೆ ಮತ್ತಿತರರು ಸಮಾಜ ಭಾಂಧವರು ಇದ್ದರು. 22ಕೆಕೆಡಿಯು1 , 1ಎ.

ಶು್ಕ್ರವಾರ ಕಡೂರು ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಮುದಾಯ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಭಗೀರಥ ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಆನಂದ್ ಉಧ್ಘಾಟಿಸಿ ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾನುಬಾಳಿನಲ್ಲಿ ಎರಡು ದಿನಗಳ ಕಾರ್‌ ರೇಸ್ ಸ್ಪರ್ಧೆ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸೇವೆ ಮಾದರಿ ಕಾರ್ಯ