ಕನ್ನಡಪ್ರಭ ವಾರ್ತೆ ಕಲಬುರಗಿ
ಈ ಆರೋಪಿಗಳೆಲ್ಲರ ಮೊಬೈಲ್ ಫೋನ್‌ಗಳನ್ನು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಆರೋಪಿಗಳ ಮೊಬೈಲ್, ಅವರು ಹೊಂದಿರುವ ಸಂಪರ್ಕಗಳು, ವಿಡಿಯೋ ಇತ್ಯಾದಿಗಳೇನಾದರೂ ಇವೆಯಾ? ಎಂಬುದರ ಮಾಹಿತಿ ಪತ್ತೆಗೆ ಈ ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ಈ ಪ್ರಕರಣದಲ್ಲಿ ಹೆಚ್ಚಿನ ಮಹತ್ವ ಪಡೆಯುವ ಸಾಧ್ಯತೆಗಳಿವೆ.
ಏತನ್ಮಧ್ಯೆ ಸೋಮವಾರ ರಾತ್ರಿ ಬಂಧಿತರಾಗಿರುವ ದಲಿತ ಸೇನೆಯ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ (ಎ- 3), ಶ್ರೀಕಂತ ರೆಡ್ಡಿ (ಎ - 4), ದಲಿತ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ (ಎ- 5), ಉದಯಕುಮಾರ ಖಣಗೆ (ಎ- 6), ಅರವಿಂದ ಕಮಲಾಪುರ (ಎ- 7), ಸಂತೋಷ ಪಾಳಾ (ಎ- 8) ಇವರೆಲ್ಲರನ್ನು ನ್ಯಾಯಾಧೀಶರಮುಂದೆ ಹಾಜರುಪಡಿಸಲಾಗಿದ್ದು, ಸೆ.21ರ ವರೆಗೆ ಇವರೆಲ್ಲರನ್ನ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೊಪ್ಪಿದ್ದಾರೆ.ಮುಂಬೈ ಮೂಲದ ಸಂತ್ರಸ್ತೆ ಯುವತಿ ನೀಡಿರುವ ದೂರನ್ನಾಧರಿಸಿ ಸ್ಟೇಷನ್ ಬಜಾರ್ ಠಾಣೆಯಲ್ಲಿ ರೇಪ್ ಮತ್ತು ಹನಿಟ್ರ್ಯಾಪ್ ಪ್ರಕರಣ ದಾಖಲಿಸಿದ್ದ ಪೊಲೀಸರು ಅದಾಗಲೇ ಪ್ರಕರಣದಲ್ಲ್ಲಿ ರಾಜು ಲೇಂಗಟಿ (ಎ- 1) ಹಾಗೂ ಪ್ರಭು ಹಿರೇಮಠ (ಎ- 2) ಇರಿಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೂ ಒಟ್ಟು 8 ಆರೋಪಿಗಳ ಬಂಧನವಾಗಿದೆ.
ಸಂತ್ರಸ್ತರು ಮುಂದೆ ಬಂದು ದೂರು ಕೊಡಲಿ
ಸಂತ್ರಸ್ತರು ಯುವತಿಯರಾಗಿರಲಿ, ವರ್ತಕರು, ಉದ್ದಿಮೆದಾರರಾಗಿರಲಿ, ಅಧಿಕಾರಿಗಳಿರಲಿ ಯಾರ ಇದ್ದರೂ ಇಂತಹ ಅಪರಾಧದಿಂದ ತೊಂದರೆಗೊಳಗಾಗಿದ್ದರೆ ಮುಂದೆ ಬಂದು ಮಾಹಿತಿ ಕೊಡಲಿ, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ತಪಾಸಣೆ ಮಾಡಿ ಕ್ರಮ ಕೈಗೊಳ್ಳುತ್ತೇವೆಂದರು. ಆರೋಪಿಗಳು ಕೃತ್ಯಕ್ಕೆ ಬಳಸಿರುವ ವಾಹನಗಳನ್ನ ಜಪ್ತಿ ಮಾಡಿದ್ದೇವೆ. ಆಯುಧಗಳು ಜಪ್ತಿ ಮಾಡಿಲ್ಲ. ಈ ಪ್ರಕರಣದಲ್ಲಿ ಆಯುಧ ಬಳಸಿರುವ ಸಾಧ್ಯತೆಗಳು ಕ್ಷೀಣ. ಬರುವ ದಿನಗಳಲ್ಲಿ ತನಿಖೆಯಿಂದ ಎಲ್ಲವೂ ಹೊರಬರಲಿದೆ. ತನಿಖೆಗೆ ಸ್ವಲ್ಪ ಸಮಯ ಬೇಕಾಗುತ್ತದೆ. ತನಿಖೆಯನ್ನ ವೈಜ್ಞಾನಿಕ ಹಾಗೂ ತಾಂತ್ರಿಕ ಸಾಕ್ಷ್ಯಾಧಾರಗಳನ್ನಾಧರಿಸಿ ನಡೆಸುತ್ತೇವೆಂದು ಡಾ. ಶರಣಪ್ಪ ಹೇಳಿದ್ದಾರೆ. ಪ್ರಕರಣ ಹೊರಬಿದ್ದು ವಾರ ಕಳೆದರೂ ಕೂಡಾ ಮುಂಬೈ ಮೂಲದ ಯುವತಿ ಹೊರತುಪಡಿಸಿ ಇನ್ನೂ ಯಾರೂ ಪೊಲೀಸರಿಗೆ ದೂರು ನೀಡಿಲ್ಲ, ಯಾವ ಉದ್ಯಮಿ, ವರ್ತರೂ ದೂರು ನೀಡಿಲ್ಲವೆಂದು ಕಮೀಶ್ನರ್ ಸ್ಪಷ್ಪಡಸಿದಿರು.