ದಾಬಸ್‌ಪೇಟೆ: ಸೋಂಪುರ ಹೋಬಳಿಯ ದಕ್ಷಿಣ ಕಾಶಿ ಶಿವಗಂಗೆಯ ಶ್ರೀ ಹೊನ್ನಾದೇವಿ ಅಮ್ಮನವರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಭಕ್ತರು ಶ್ರದ್ಧಾಭಕ್ತಿಯಿಂದ ಜಯಘೋಷ ಹಾಕಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಥ ಮುಂದೆ ಸಾಗುತ್ತಿದ್ದಂತೆ ಭಕ್ತರು ರಥೋತ್ಸವದ ಮೇಲೆ ಸೂರು ಬಾಳೆ ತೂರಿ ಹರಕೆ ತೀರಿಸಿದರು. ರಥೋತ್ಸವದಲ್ಲಿ ಜಾನಪದ ಕಲಾತಂಡಗಳಾದ ವೀರಗಾಸೆ, ನಂದಿಧ್ವಜ ಸೇರಿದಂತೆ ಕರಡಿ ವಾದ್ಯ ಕಲಾತಂಡಗಳು, ಬೃಹತ್ ಗೊಂಬೆಗಳ ಕುಣಿತ ರಥೋತ್ಸವಕ್ಕೆ ಮೆರಗು ತಂದಿತ್ತು.
ಅನ್ನಸಂತರ್ಪಣೆ, ಪಾನಕ ವಿತರಣೆ: ಶ್ರೀ ಹೊನ್ನಾದೇವಿ ಅಮ್ಮನವರ ಬೇಸಿಗೆಯ ಬಿಸಿಗೆ ಭಕ್ತಾಗಳು ತಂಪಾಗಿರಲು ಆಗಮಿಸಿದ್ದ ಭಕ್ತರಿಗೆ ಸ್ಥಳೀಯರು ಅರವಂಟಿಕೆಗಳನ್ನು ಹಾಕಿಕೊಂಡು ಮಜ್ಜಿಗೆ ಸಿಹಿಪಾನಕ ಸೇರಿದಂತೆ ಹೆಸರುಬೇಳೆ ವಿತರಿಸಲಾಯಿತು. ದೇವಾಲಯದ ಸಮಿತಿಯಿಂದ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.