- ಉಪಾಧ್ಯಕ್ಷ ಶಾತವೀರಪ್ಪ, ಖಜಾಂಚಿ ಮಂಜುಳಾ ಅವಿರೋಧ ಆಯ್ಕೆ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕು ವಕೀಲರ ಸಂಘಕ್ಕೆ 2025-2026 ಮತ್ತು 2026-2027 ಎರಡು ವರ್ಷಗಳ ಅವಧಿಗೆ ಸೋಮವಾರ ಚುನಾವಣೆ ನಡೆದಿದ್ದು, ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯಾಯಿತು. ಚುನಾವಣಾಧಿಕಾರಿಯಾಗಿ ಎಸ್.ಎಚ್.ಈಶ್ವರನ್ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ದೊರೈಸ್ವಾಮಿ ಕರ್ತವ್ಯ ನಿರ್ವಹಿಸಿದರು.ಸಂಘದ ಉಪಾಧ್ಯಕ್ಷ ಸ್ಥಾನಕ್ಕೆ ಎಸ್.ಶಾತವೀರಪ್ಪ, ಮಹಿಳಾ ಮೀಸಲು ಖಜಾಂಚಿ ಸ್ಥಾನಕ್ಕೆ ಟಿ.ಆರ್.ಮಂಜುಳಾ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಇಬ್ಬರೂ ಅವಿರೋಧ ಆಯ್ಕೆಯಾದರು.
ಸಂಘದ ಅಧ್ಯಕ್ಷ ಸ್ಥಾನಕ್ಕೆ ಗುಡ್ಡಪ್ಪ ಎಂ. ಹಾಗೂ ಎಚ್.ಎಂ. ಶ್ರಿನಿವಾಸ ಮೂರ್ತಿ ಸ್ಪರ್ಧಿಸಿದ್ದರು. ಗುಡ್ಡಪ್ಪ ಎಂ. 40 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಇವರ ಪ್ರತಿಸ್ಪರ್ಧಿ ಎಚ್.ಎಂ. ಶ್ರಿನಿವಾಸ ಮೂರ್ತಿ ಅವರಿಗೆ 29 ಮತಗಳು ಲಭಿಸಿ ಪರಾಭವಗೊಂಡರು ಎಂದು ಚುನಾವಣಾಧಿಕಾರಿ ಮಾಹಿತಿ ನೀಡಿದರು.ಇನ್ನು ಸಂಘದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಎ.ಬಿ. ಜಗದೀಶ್ ಹಾಗೂ ವೈ.ಜೆ. ರಾಮಚಂದ್ರಪ್ಪ ಸ್ಪರ್ಧಿಸಿದ್ದು, ಎ.ಬಿ., ಜಗದೀಶ್ 39 ಮತ ಪಡೆದು ಗೆದ್ದರು. ಪ್ರತಿಸ್ಪರ್ಧಿ ವೈ.ಜೆ.ರಾಮಚಂದ್ರಪ್ಪ 32 ಮತಗಳು ಲಭಿಸಿದೆ. ಸಹ ಕಾರ್ಯದರ್ಶಿ ಸ್ಥಾನಕ್ಕೆ ಎಚ್. ಸಂಜೀವಪ್ಪ ಹಾಗೂ ಸಿ.ಎಲ್. ರಾಜಶೇಖರ ಸ್ಪರ್ಧಿಸಿದ್ದು, ಈ ಪೈಕಿ ಎಚ್.ಸಂಜೀವಪ್ಪ 35 ಮತಗಳನ್ನು ಪಡದು ಗೆದ್ದರು. ಇವರ ಪ್ರತಿಸ್ಪರ್ಧಿ ರಾಜಶೇಖರ್ ಸಿ.ಎಲ್. 34 ಮತಗಳು ಪಡೆದರು. ಒಟ್ಟು 73 ಮತಗಳಿದ್ದು, ಈ ಪೈಕಿ ಚುನಾವಣೆಯಲ್ಲಿ 71 ಮತಗಳು ಚಲಾವಣೆಯಾಗಿ 2 ಮತಗಳು ತಿರಸ್ಕೃತಗೊಂಡಿವೆ ಎಂದು ಚುನಾವಣಾಧಿಕಾರಿ ಹೇಳಿದರು.
ಕೆ.ಎಲ್. ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಪದಾಧಿಕಾರಿಗಳು ಹಾಗೂ ವಕೀಲರು ಇದ್ದರು. ವಕೀಲ ಎಸ್.ಎನ್. ಪ್ರಕಾಶ್ ಸ್ವಾಗತಿಸಿದರು. ವಕೀಲ ಉಮೇಶ್ ವಂದಿಸಿದರು.- - -
-24ಎಚ್.ಎಲ್.ಐ1.ಜೆಪಿಜಿ:ಹೊನ್ನಾಳಿ ತಾಲೂಕು ವಕೀಲರ ಸಂಘಕ್ಕೆ ಚುನಾವಣೆ ಮೂಲಕ ನೂತನ ಪದಾಧಿಕಾರಿಗಳ ಆಯ್ಕೆಯಾಯಿತು. ಪದಾಧಿಕಾರಿಗಳು ಹಾಗೂ ವಕೀಲರು ಇದ್ದರು.