- ಹೋಬಳಿ ಕೇಂದ್ರಗಳಲ್ಲಿಯೂ ಬಂದ್ । ಸರ್ಕಾರ ವಿರುದ್ಧ ಪ್ರತಿಭಟನೆ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ರಾಜ್ಯದೆಲ್ಲೆಡೆ ಹದಗೆಟ್ಟ ರಸ್ತೆಗಳು, ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಯಲ್ಲಿ ನಿರ್ಲಕ್ಷ್ಯ, ಬಡವರ ಬಿಪಿಎಲ್ ಕಾರ್ಡ್‌ಗಳ ರದ್ದು ಮುಂತಾದ ರಾಜ್ಯ ಸರ್ಕಾರದ ಎಲ್ಲ ವೈಫಲ್ಯಗಳನ್ನು ಖಂಡಿಸಿ ನ.18ರಂದು ಬಿಜೆಪಿ ವತಿಯಿಂದ ಹೊನ್ನಾಳಿ, ನ್ಯಾಮತಿ ಪಟ್ಟಣಗಳು ಹಾಗೂ ಹೋಬಳಿ ಕೇಂದ್ರಗಳಲ್ಲಿ ಬಂದ್ ನಡೆಯಲಿದೆ.ಈ ಹಿನ್ನೆಲೆ ನ.17ರಂದು ಬೆಳಗ್ಗೆ ನ್ಯಾಮತಿ ಮತ್ತು ತಾಲೂಕಿನ ಹೋಬಳಿ ಕೇಂದ್ರಗಳಲ್ಲಿ ಹಾಗೂ ಮಧ್ಯಾಹ್ನ ಹೊನ್ನಾಳಿ ಹಾಗೂ ತಾಲೂಕಿನ ಎಲ್ಲ ಹೋಬಳಿ ಕೇಂದ್ರಗಳಲ್ಲಿ ಮುಖಂಡರು, ಕಾರ್ಯಕರ್ತರ ಬೈಕ್ ರ್ಯಾಲಿಯೊಂದಿಗೆ ತೆರೆದ ವಾಹನದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಬಂದ್ ಕುರಿತು ಸಾರ್ವನಿಕರಿಗೆ ಮಾಹಿತಿ ನೀಡಿ, ಸ್ಪಂದಿಸಲು ಮನವಿ ಮಾಡಿದರು.
ಮಂಗಳವಾರ ಬಂದ್ ನಡೆಯುವ ಪ್ರಯುಕ್ತ ಎಲ್ಲ ಖಾಸಗಿ ಶಾಲೆ ಹಾಗೂ ಸರ್ಕಾರಿ ಶಾಲಾ ಕಾಲೇಜುಗಳು, ವರ್ತಕರು, ಆಟೋ ಚಾಲಕರು, ಖಾಸಗಿ ಬಸ್ ಮಾಲೀಕರು, ಹೊಟೇಲ್ ಮಾಲೀಕರು, ರೈತರು, ಕಾರ್ಮಿಕರು, ಹಾಗೂ ಸಾರ್ವನಿಕರು ಎಲ್ಲರೂ ಬಂದ್‌ಗೆ ಸಹಕರಿಸುವಂತೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮನವಿ ಮಾಡುತ್ತ ಅವಳಿ ತಾಲೂಗಳಲ್ಲಿ ಸೋಮವಾರ ಪ್ರವಾಸ ಮಾಡಿದರು.ಈ ಸಂದರ್ಭ ರೇಣುಕಾಚಾರ್ಯ ಮಾತನಾಡಿ, ನ.18ರಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಬಂದ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಸಹಕರಿಸಬೇಕು. ಸರ್ಕಾರ ಎಲ್ಲ ಬೇಡಿಕೆಗಳನ್ನು ಕೂಡಲೇ ರಾಜ್ಯ ಸರ್ಕಾರ ಈಡೇರಿಸಬೇಕು. ಈ ಹಿನ್ನೆಲೆ ನ.18ರಂದು ಮಂಗಳವಾರ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಬಂದ್ ಆಚರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಬೈಕ ರ್ಯಾಲಿಯಲ್ಲಿ ತಾಲೂಕು ಅಧ್ಯಕ್ಷ ಅಧ್ಯಕ್ಷ ಅರಕೆರೆ ನಾಗರಾಜ್, ಮಾಜಿ ಅಧ್ಯಕ್ಷ ಅಧ್ಯಕ್ಷ ಜೆ.ಕೆ. ಸುರೇಶ್, ಪ್ರಧಾನ ಕಾರ್ಯದರ್ಶಿ ಮಾರುತಿ ನಾಯ್ಕ್, ರಂಗನಾಥ್, ಕುಳಗಟ್ಟೆ ರಂಗನಾಥ್,ಮಂಜುನಾಥ್ ಕೊನಾಯಕನಹಳ್ಳಿ ಎಂ.ಎಸ್. ಪಾಲಕ್ಷಪ್ಪ, ಎಸ್.ಎಸ್.ಬೀರಪ್ಪ,ಮಂಜುನಾಥ್ ಇಂಚರ, ನವೀನ್ ಇಂಚರ, ಮಹೇಶ್ ಹುಡೇದ್, ಬಾಬು ಹೋಬಳದಾರ್, ಪೇಟೆ ಪ್ರಶಾಂತ್, ಕುಂದೂರು ಅನಿಲ್, ರಘು, ರಾಕೇಶ್, ಬೀರಗೊಂಡನಹಳ್ಳಿ ಬಸಣ್ಣ ಹಾಗೂ ಇತರರು ಇದ್ದರು.- - -
-17ಎಚ್.ಎಲ್.ಐ1ಜೆಪಿಜಿ: