ಹೊನ್ನಾಳಿ: ಹೊನ್ನಾಳಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ. ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ನ.2ರಂದು ಚುನಾವಣೆ ನಡೆಯಲಿದೆ. ಸೊಸೈಟಿ ಕಚೇರಿ ಕಟ್ಟಡದಲ್ಲಿ ಬೆಳಗ್ಗೆ 9 ರಿಂದ ಸಂಜೆ 4 ಯವರೆಗೆ ಮತದಾನ ನಡೆಯಲಿದೆ ಎಂದು ಚುನಾವಣಾಧಿಕಾರಿ ಸಹಕಾರಿ ಸಂಘಗಳ ನಿಬಂಧಕ ನವೀನ್ ಕುಮಾರ್ ತಿಳಿಸಿದರು.
ಬಿ ವರ್ಗದ 2 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅನುಸೂಚಿತ ಜಾತಿ ಮೀಸಲಾತಿಗೆ ಜಿ.ಎಚ್.ತಮ್ಮಣ್ಣ ಮತ್ತು ಎಲ್.ಎಚ್. ಶಂಕರನಾಯ್ಕ ಸ್ಪರ್ಧೆ ಮಾಡಿದ್ದಾರೆ. ಹಿಂದುಳಿದ ಅ ವರ್ಗದ ಸ್ಥಾನಕ್ಕೆ ಬಿ.ಎಲ್. ಕುಮಾರ ಸ್ವಾಮಿ, ಚಂದ್ರಪ್ಪ ಮಡಿವಾಳ ಮತ್ತು ಬಿ. ಮಂಜುನಾಥ ಸ್ಪರ್ಧೆ ಮಾಡಿದ್ದಾರೆ ಎಂದು ತಿಳಿಸಿದರು.
ಅವಿರೋಧ ಆಯ್ಕೆಯಾದವರು:ಕೆ.ಜಿ.ರೇವಣಸಿದ್ದಪ್ಪ ಕೂಲಂಬಿ (ಸಾಮಾನ್ಯ), ಜಿ.ಎನ್. ಶಿವನಗೌಡ ಬೀರಗೊಂಡನಹಳ್ಳಿ, (ಸಾಮಾನ್ಯ), ಕೆ.ಜಿ.ರವಿಕುಮಾರ್ ಕುಂದೂರು (ಸಾಮಾನ್ಯ), ಎನ್. ಜಿ. ಮರುಳಸಿದ್ದಪ್ಪ ಮುಕ್ತೇನಹಳ್ಳಿ (ಸಾಮಾನ್ಯ), ಎಸ್.ಜಿ.ಮನು ಅರಕೆರೆ (ಸಾಮಾನ್ಯ), ಟಿ.ಜಿ.ರಮೇಶ್ ಗೌಡ ತರಗನಹಳ್ಳಿ (ಸಾಮಾನ್ಯ), ಡಿ.ಜಿ.ಶಾಂತನಗೌಡ ಗೊಲ್ಲರಹಳ್ಳಿ (ಸಾಮಾನ್ಯ), ಕೆ.ಎಲ್. ರಂಗನಾಥ ಕುಳಗಟ್ಟೆ (ಪರಿಶಿಷ್ಟ ಪಂಗಡ), ಜಿ.ಪಿ.ಶೋಭಾ ಹನಗವಾಡಿ (ಮಹಿಳಾ ಮಿಸಲು),ಎಂ.ಆರ್. ನಾಗರತ್ನ ಮಾಸಡಿ (ಮಹಿಳಾ ಮೀಸಲು), ಬಿ.ಬಸವರಾಜಪ್ಪ ಬೀರಗೊಂಡನಹಳ್ಳಿ ( ಹಿಂದುಳಿದ ಬ ವರ್ಗ).
- - --28ಎಚ್.ಎಲ್.ಐ1: