ಅಂಬೇಡ್ಕರ್ ಸಂವಿಧಾನದಿಂದ ಇಂದು ಸರ್ವರಿಗೂ ಶಿಕ್ಷಣದ ವ್ಯವಸ್ಥೆ: ಶಾಸಕ ಡಿ. ರವಿಶಂಕರ್

KannadaprabhaNewsNetwork | Updated : Feb 13 2024, 04:22 PM IST

ಸಾರಾಂಶ

ಈ ದೇಶದಲ್ಲಿ ಸರ್ವರಿಗೂ ಸಮಪಾಲು, ಸಮಬಾಳು ಎಂಬ ಸಂವಿಧಾನವನ್ನು ರಚಿಸಲಾಗಿದೆ, ದೀನ ದಲಿತರ ಪರವಾಗಿ ನಿರಂತರ ಹೋರಾಟ ನಡೆಸಿದ್ದಾರೆ, ಪ್ರಸ್ತುತ ದಿನಗಳಲ್ಲಿ ಅವರ ಸಿದ್ದಂತಾ ಮತ್ತು ಆದರ್ಶಗಳನ್ನು ನೈಜ್ಯತೆಯಲ್ಲಿ ಪಾಲಿಸಿ ನಡೆದರೆ ಮಾತ್ರ ಇಂತ ಮಹನೀಯರಿಗೆ ನಾವು ಗೌರವ ನೀಡಿದಂತಾಗುವುದು

ಕನ್ನಡಪ್ರಭ ವಾರ್ತೆ ಸಾಲಿಗ್ರಾಮ

ಶಿಕ್ಷಣವನ್ನು ಸಂವಿಧಾನದಲ್ಲಿ ಅಳವಡಿಸಿದ್ದರಿಂದ ಇಂದು ಸರ್ವರಿಗೂ ಶಿಕ್ಷಣದ ವ್ಯವಸ್ಥೆಯನ್ನು ಡಾ.ಬಿ.ಆರ್. ಅಂಬೇಡ್ಕರ್ ಕಲ್ಪಿಸಿದ್ದಾರೆ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.

ಚುಂಚನಕಟ್ಟೆ ಸಮೀಪದ ಹೊನ್ನೇನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ಅನಾವರಣ ಮಾಡಿದ ನಂತರ ಮಾತನಾಡಿದ ಅವರು, ಶಿಕ್ಷಣ ಪಡೆದ ಪ್ರತಿಯೊಬ್ಬರಿಗೂ ಅಧಿಕಾರ, ಗೌರವ ಹಾಗೂ ಸ್ವಾಭಿಮಾನದ ಬದುಕನ್ನು ಸಂವಿಧಾನ ನೀಡಿ. ಜಾತಿ ಧರ್ಮಕ್ಕೆ ಸೀಮಿತವಾಗಿರದೆ ಸರ್ವರಿಗೂ ಸಮಬಾಳು-ಸಮಪಾಲನ್ನು ನೀಡಿದೆ ಎಂದರು.

ಈ ದೇಶದಲ್ಲಿ ಸರ್ವರಿಗೂ ಸಮಪಾಲು, ಸಮಬಾಳು ಎಂಬ ಸಂವಿಧಾನವನ್ನು ರಚಿಸಲಾಗಿದೆ, ದೀನ ದಲಿತರ ಪರವಾಗಿ ನಿರಂತರ ಹೋರಾಟ ನಡೆಸಿದ್ದಾರೆ.

ಪ್ರಸ್ತುತ ದಿನಗಳಲ್ಲಿ ಅವರ ಸಿದ್ದಂತಾ ಮತ್ತು ಆದರ್ಶಗಳನ್ನು ನೈಜ್ಯತೆಯಲ್ಲಿ ಪಾಲಿಸಿ ನಡೆದರೆ ಮಾತ್ರ ಇಂತ ಮಹನೀಯರಿಗೆ ನಾವು ಗೌರವ ನೀಡಿದಂತಾಗುವುದು ಎಂದು ಅವರು ತಿಳಿಸಿದರು.

ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ಹಿಂದುಳಿದ ವರ್ಗ, ಶೋಷಿತರು, ದಲಿತರು, ಸಂವಿಧಾನದ ಮೂಲಕ ಹಕ್ಕುಗಳನ್ನು ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು.

ಗ್ರಾಮದಲ್ಲಿ ಮೌಢ್ಯ ಕಂದಾಚಾರ ಮೂಢನಂಬಿಕೆ ಬಿಟ್ಟು ಬದುಕಬೇಕು, ಅಂಬೇಡ್ಕರ್ ಅವರ ಆದರ್ಶಗಳಾದ ಶಿಕ್ಷಣ ಸಂಘಟನೆ ಹೋರಾಟ ಮೈಗೂಡಿಸಿಕೊಳ್ಳಬೇಕು ಹಾಗೂ ಬುದ್ಧ ಬಸವಣ್ಣಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಎಲ್ಲರೂ ಪಾಲಿಸಿಕೊಂಡು ಹೋಗುಬೇಕು ಎಂದು ತಿಳಿಸಿದರು.

ಗ್ರಾಪಂ ಮಾಜಿ ಸದಸ್ಯ ಜವರಯ್ಯ ಮಾತನಾಡಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಯ ದಾನಿಗಳಾದ ವಿ.ಆರ್. ಷರೀಫ್ ಅವರನ್ನು ಸನ್ಮಾನಿಸಿತು.

ಜರಾರ್ ಷರೀಫ್, ಕಾಂಗ್ರೆಸ್ ಕೆಪಿಸಿಸಿ ಸದಸ್ಯರಾದ ದೊಡ್ಡಸ್ವಾಮಿಗೌಡ, ಸಿಪಿಐ ಕೃಷ್ಣರಾಜ್, ಗ್ರಾಪಂ ಅಧ್ಯಕ್ಷ ಶಿವು, ಸದಸ್ಯರಾದ ಲತಾ, ದೇವೇಂದ್ರ, ಸಿಡಿಸಿ ಸದಸ್ಯ ಸಂತೋಷ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್, ನಗರ ಅಧ್ಯಕ್ಷರ ಪ್ರಭಾಕರ್, ತಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರ್, ಸಾಲಿಗ್ರಾಮ ಗ್ರಾಪಂ ಸದಸ್ಯ ಹೇಮಂತ್.

 ಮಾಜಿ ಸದಸ್ಯ ಗುಣಪಾಲ್ ಜೈನ್, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ನಟರಾಜ್, ಮುಖಂಡರಾದ ಮನುಗನಹಳ್ಳಿ, ದೇವರಾಜ್, ಪುರಿ ಗೋವಿಂದರಾಜು, ಅಖಿಲ ಕರ್ನಾಟಕ ಜನಶಕ್ತಿ ವೇದಿಕೆ ಅಧ್ಯಕ್ಷೆ ಶಾಂತಿರಾಜ್, ಬಿ.ಎನ್. ಹರೀಶ್ ಇದ್ದರು.

Share this article