ಹೊನ್ನುಟಗಿ ಮಲ್ಲಿಕಾರ್ಜುನ ದೇವಸ್ಥಾನ ಲೋಕಾರ್ಪಣೆ

KannadaprabhaNewsNetwork |  
Published : Dec 03, 2025, 03:00 AM IST
ವಿಜಯಪುರ | Kannada Prabha

ಸಾರಾಂಶ

ಶ್ರೀ ಸಿದ್ದರಾಮ ಪಂಡಿತರಾದ್ಯ ಶಿವಾಚಾರ್ಯರು ತಮ್ಮ ಅಮೃತ ಹಸ್ತದಿಂದ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನದ ಕಳಸಾರೋಹಣ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ತಾಲೂಕಿನ ಹೊನ್ನುಟಗಿ ಗ್ರಾಮದಲ್ಲಿ ನೂತನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ಮಂಗಳವಾರ ಬೆಳಗ್ಗೆ 7ಕ್ಕೆ ಹೋಮ- ಹವನ, 11ಕ್ಕೆ ಶ್ರೀಶೈಲ ಪೀಠದ ಜಗದ್ಗುರುಗಳಾದ ಶ್ರೀ ಸಿದ್ದರಾಮ ಪಂಡಿತರಾದ್ಯ ಶಿವಾಚಾರ್ಯರ ಅಡ್ಡ ಪಲ್ಲಕ್ಕಿ ಉತ್ಸವ ನಡೆಯಿತು. 1001 ಮಹಿಳೆಯರ ಭವ್ಯವಾದ ಕುಂಭಮೇಳದೊಂದಿಗೆ ಗೊಂಬೆಗಳ ಕುಣಿತ, ಡೊಳ್ಳು ಕುಣಿತ ಮೆರವಣಿಗೆ ನಗರದ ಪ್ರಮುಖ ರಸ್ತೆಯಲ್ಲಿ ಸಾಗಿ ಮರಳಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಬಂದು ತಲುಪಿತು.

ಮಧ್ಯಾಹ್ನ 1ಕ್ಕೆ 1008 ಶ್ರೀಶೈಲ ಪೀಠದ ಜಗದ್ಗುರು ಶ್ರೀ ಸಿದ್ದರಾಮ ಪಂಡಿತರಾದ್ಯ ಶಿವಾಚಾರ್ಯರು ತಮ್ಮ ಅಮೃತ ಹಸ್ತದಿಂದ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನದ ಕಳಸಾರೋಹಣ ನೆರವೇರಿಸಿದರು. ಮಧ್ಯಾಹ್ನ 2ಕ್ಕೆ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ನಡೆದ ಧರ್ಮಸಭೆಗೆ ಶ್ರೀಶೈಲ ಜಗದ್ಗುರು ಚಾಲನೆ ನೀಡಿದರು.

ಹೊನ್ನುಟಗಿ ಗ್ರಾಮದ ಬಹುದಿನಗಳ ಭಕ್ತರ ಕನಸು ಇವತ್ತು ಈಡೇರಿದೆ. ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಸುಂದರವಾಗಿ ನಿರ್ಮಾಣವಾಗಿದೆ. ಶ್ರೀಶೈಲ ಪಾದಯಾತ್ರೆಯ ಭಕ್ತರಿಗಾಗಿ ವಿಶೇಷವಾಗಿ ಕಂಬಿ ಮಂಟಪ ನಿರ್ಮಾಣವಾಗಿದೆ ಎಂದು ಶ್ರೀಶೈಲ ಶ್ರೀಗಳು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ, ಗ್ರಾಮದಲ್ಲಿ ಸುದೀರ್ಘವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಯುವುದರ ಮೂಲಕ ಗ್ರಾಮದ ಸುಖ ಶಾಂತಿ ಸಮೃದ್ಧಿ ಸಿಗಲಿದೆ. ಹೊನ್ನಟಗಿ ಗ್ರಾಮದ ಭಕ್ತರು ಸುಮಾರು ವರ್ಷಗಳಿಂದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ನಿರ್ಮಿಸುವ ಭಕ್ತರ ಕನಸು ಈಡೇರಿದೆ ಎಂದರು. ಯೋಗೇಶ್ವರ್ ಮಾತಾಜಿ ಬುರಣಾಪೂರ ಮಾತನಾಡಿದರು

ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಕೊಣ್ಣೂರ ಹಾಗೂ ಸಾರಂಗಮಠ, ಸಿಂದಗಿ ಜೈನಾಪುರ ಶ್ರೀ ರೇಣುಕಾ ಶಿವಾಚಾರ್ಯರು ಹಾಗೂ ಶಿವಾನಂದಯ್ಯ ಹಿರೇಮಠ ಸಾ. ಹೊನ್ನುಟಗಿ ದಿವ್ಯ ಸಾನ್ನಿಧ್ಯ ವಹಿಸಿದರು. ಶಿವಗೊಂಡ ಹಳ್ಳದ ಹೊನ್ನುಟಗಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಣಮಂತ ಆರ್. ನಿರಾಣಿ, ವಿಧಾನ ಪರಿಷತ್ ಸದಸ್ಯ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಸಚಿವರು ಮಲ್ಲಿಕಾರ್ಜುನ ಬೀಳಗಿ, ಎನ್ ಎಸ್ ಪಾಟೀಲ, ಮುಖಂಡರಾದ ಹೊನಮಲ್ಲ ಸಾರವಾಡ, ಮಲ್ಲಿಕಾರ್ಜುನ ಬೆಳಕೋಡ, ಸುನಿಲಗೌಡ ಬಗಲಿ, ಕಾಂತು ಕಪಾಲೆ, ರಾಜುಗೌಡ ಬಗಲಿ, ರಾಜಶೇಖರ ತೇರದಾಳ, ಮುತ್ತು ಚಿಮ್ಮಲಗಿ , ಸಕಲ ಊರಿನ ಸಮಸ್ತ ಭಕ್ತರು ಭಾಗಿಯಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆ್ಯಸಿಡ್‌ ದಾಳಿ ಸಂತ್ರಸ್ತರಿಗೆ ಮಾಸಿಕ 50 ಸಾವಿರ ಪಿಂಚಣಿ : ಪರಂ ಭರವಸೆ
5 ಪಾಲಿಕೆಗೆ ಜಿಎಸ್‌ಟಿಯಲ್ಲಿ ಪಾಲು ಕೊಡಲು ಆಯೋಗ ಶಿಫಾರಸು