ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಹೋಬಳಿಯ ಲಿಂಗಾಪುರ ಗ್ರಾಮದಲ್ಲಿ ನಡೆದ ಸಿದ್ದಗಂಗಾ ಶಿವಕುಮಾರಸ್ವಾಮಿಗಳ 7ನೇ ಪುಣ್ಯಸ್ಮರಣೆಯಲ್ಲಿ ಮಾತನಾಡಿ, ತ್ರಿವಿಧ ದಾಸೋಹಿಗಳಾಗಿ ಅಕ್ಷರ, ಅನ್ನ, ವಸತಿ ದಾಸೋಹದ ಮೂಲಕ ಲಕ್ಷಾಂತರ ಬಡಜನರಿಗೆ ಕಾಮಧೇನುವಾಗಿದ್ದರು ಎಂದರು.
ಆಧುನಿಕ ಬಸವಣ್ಣರಾದ ಶ್ರೀಗಳಿಗೆ ಕೇಂದ್ರ ಸರ್ಕಾರ ಭಾರತರತ್ನ ನೀಡಿ ಗೌರವಿಸಬೇಕು. ಇವರ ಆಶ್ರಯದಲ್ಲಿ ಬೆಳೆದ ಸಹಸ್ರಾರು ಮಕ್ಕಳು ಉನ್ನತ ಪದವಿ, ಸಂಸ್ಕಾರವಂತರಾಗಿ ನಾಡಿನಲ್ಲಿ ಬಾಳುತ್ತಿರುವುದು ನಾಡಿನ ಸುದೈವ. ಜಾತಿ, ಮತ, ಪಂಥ ಮೀರಿ ಎಲ್ಲ ಧರ್ಮದ ದೀನ ದುರ್ಬಲರಿಗೆ ಆಶ್ರಯ ತಾಣವಾಗಿ ಮಠವನ್ನು ಬೆಳೆಸಿದ್ದರು ಎಂದರು.ಶಿಕ್ಷಣದ ಜೊತೆಯಲ್ಲಿ ಸಹಸ್ರಾರು ಮಕ್ಕಳಿಗೆ ಸಂಸ್ಕಾರದ ಬದುಕು ಕಲಿಸಿದರು. ಇವರ ಮಠದಲ್ಲಿ ಬೆಳೆದ, ಶಿಕ್ಷಣ ಪಡೆದ ಲಕ್ಷಾಂತರ ಮಕ್ಕಳು ಭವಿಷ್ಯದ ಸತ್ಪ್ರಜೆಗಳಾಗಿ ಉನ್ನತ ಹುದ್ದೆಯಲ್ಲಿದ್ದಾರೆ. ತಮ್ಮದೆ ಆದ ಸಮಾಜ ಸೇವೆ ನಾಡಿಗೆ ನೀಡುತ್ತಿದ್ದಾರೆ. ಇದು ಶ್ರೀಗಳ ಪವಾಡದಂತಹ ಶಕ್ತಿ. ಇವರ ಜೀವನ ಚರಿತ್ರೆಯನ್ನು ಭವಿಷ್ಯದ ಮಕ್ಕಳಿಗೆ ಹಿರಿಯರು, ಪೋಷಕರು ತಿಳಿಸಲು ಮುಂದಾಗಬೇಕಿದೆ ಎಂದು ವಿನಂತಿಸಿದರು.
ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷೆ ಜ್ಯೋತಿ ಹರೀಶ್, ಮುಖಂಡರಾದ ರಾಜಣ್ಣ, ರುದ್ರೇಶ್, ಹರೀಶ್, ನಾಗೇಶ್, ಮಹೇಶ್, ರಾಜು, ಸಾಗರ್, ಶಿವಣ್ಣ, ಯಡಿಯೂರಪ್ಪ, ಪ್ರಭು, ಚಂದ್ರಶೇಖರ್ ಮತ್ತಿತರರು ಭಾಗವಹಿಸಿದ್ದರು.ಖಿದ್ಮಾ ಪ್ರಶಸ್ತಿಗೆ ಸಾಹಿತಿ ಮೊಹಮ್ಮದ್ ಅಜರುದ್ದೀನ್ ಆಯ್ಕೆ
ಖಿದ್ಮಾ ಫೌಂಡೇಶನ್ ಕರ್ನಾಟಕ, ಅನ್ನದಾತ ಪ್ರಕಾಶನ ಹಾಗೂ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ನೀಡುವ 6ನೇ ವರ್ಷದ ರಾಜ್ಯಮಟ್ಟದ ಖಿದ್ಮಾ ಪ್ರಶಸ್ತಿಗೆ ತಾಲೂಕಿನ ಅಕ್ಕಿಹೆಬ್ಬಾಳಿನ ಯುವ ಸಾಹಿತಿ ಮೊಹಮ್ಮದ್ ಅಜರುದ್ದೀನ್ ಆಯ್ಕೆಯಾಗಿದ್ದಾರೆ.
ತಾಲೂಕಿನ ಅಕ್ಕಿಹೆಬ್ಬಾಳು ಅಜರುದ್ದೀನ್ ಅಕ್ಕಿ ಆಚುಕ್ಕಿ, ನನ್ನ ವಿಳಾಸ ಕವನ ಸಂಕಲನ, ಸಂಜೆ ವಿಹಾರ, ಲೇಖನ ವಿಹಾರ ಎನ್ನುವ ಲೇಖನ ಸಂಕಲನ ಹಾಗೂ ಅಕ್ಕಿಹೆಬ್ಬಾಳು ಗ್ರಾಮದ ಇತಿಹಾಸ ಸಾರುವ ಹೇಮಾವತಿ ತೀರ ಪರಿಚಯ ಕೃತಿಗಳು ಪ್ರಕಟವಾಗಿವೆ. ಇವರ ಚೊಚ್ಚಲ ಕಾದಂಬರಿ ಅವಳ ಹೆಜ್ಜೆ ಬಿಡುಗಡೆಗೆ ಸಿದ್ಧವಾಗಿದೆ. ಮೈಸೂರು ದಸರಾ ಚಿಗುರು ಕವಿಗೋಷ್ಠಿ ಸೇರಿದಂತೆ ರಾಜ್ಯದ ವಿವಿಧೆಡೆ 150ಕ್ಕೂ ಹೆಚ್ಚು ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ. ಖಿದ್ಮಾ ಪ್ರಶಸ್ತಿಗೆ ಆಯ್ಕೆಯಾದ ಮೊಹಮದ್ ಅಜರುದ್ದೀನ್ ಕಸಾಪ ತಾಲೂಕು ಅಧ್ಯಕ್ಷ ಎಚ್.ಆರ್.ಪೂರ್ಣಚಂದ್ರ ತೇಜಸ್ವಿ, ಜಾನಪದ ಪರಿಷತ್ ಅಧ್ಯಕ್ಷ ಕತ್ತರಘಟ್ಟ ವಾಸು ಅಭಿನಂದಿಸಿದ್ದಾರೆ.