ಎಸ್ಸೆಸ್ಸೆಲ್ಸಿ ಕನ್ನಡ ವಿಷಯದಲ್ಲಿ ಶೇ.100 ಅಂಕ ಪಡೆದ 825 ವಿದ್ಯಾರ್ಥಿಗಳಿಗೆ ಗೌರವ

KannadaprabhaNewsNetwork |  
Published : Jun 23, 2025, 11:48 PM IST
 23ದಾಂಡೇಲಿ1:ಬಿ.ಎನ್. ವಾಸರೆ ಪೋಟೊ  | Kannada Prabha

ಸಾರಾಂಶ

2022ರಲ್ಲಿ 1250 ವಿದ್ಯಾರ್ಥಿಗಳನ್ನು, 2023ರಲ್ಲಿ 1100, 2024ರಲ್ಲಿ 900 ವಿದ್ಯಾರ್ಥಿಗಳನ್ನು ಅಭಿನಂದಿಸಲಾಗಿದೆ.

ದಾಂಡೇಲಿ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಪ್ರತಿಶತ ನೂರರಷ್ಟು ಅಂಕ ಪಡೆದ ಜಿಲ್ಲೆಯ ಸುಮಾರು 8೨೫ ವಿದ್ಯಾರ್ಥಿಗಳನ್ನು ಅಭಿನಂದಿಸಿ ಗೌರವಿಸುವ ಸರಣಿ ಕಾರ್ಯಕ್ರಮ ಜಿಲ್ಲೆಯಾದ್ಯಂತ ತಾಲೂಕುವಾರು ಜೂ.25ರಿಂದ ನಡೆಯಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, 2022ರಲ್ಲಿ 1250 ವಿದ್ಯಾರ್ಥಿಗಳನ್ನು, 2023ರಲ್ಲಿ 1100, 2024ರಲ್ಲಿ 900 ವಿದ್ಯಾರ್ಥಿಗಳನ್ನು ಅಭಿನಂದಿಸಲಾಗಿದೆ. ಈ ಬಾರಿ 2024ರಲ್ಲಿಯೂ ಸುಮಾರು 825 ವಿದ್ಯಾರ್ಥಿಗಳನ್ನು ಜಿಲ್ಲೆಯಾದ್ಯಂತ ತಾಲೂಕುವಾರು ಅಭಿನಂದಿಸಲಿದ್ದೇವೆ. ಕಸಾಪ ತಾಲೂಕು ಘಟಕಗಳ ಸಹಕಾರ ಹಾಗೂ ಸ್ಥಳೀಯ ಸಂಪನ್ಮೂಲಗಳ ನೆರವಿನೊಂದಿಗೆ ಈ ಕಾರ್ಯಕ್ರಮವನ್ನು ಸಂಘಟಿಸಲಾಗುತ್ತಿದೆ ಎಂದು ವಾಸರೆ ತಿಳಿಸಿದ್ದಾರೆ.

ತಾಲೂಕುವಾರು ನಡೆಯುವ ಕಾರ್ಯಕ್ರಮದ ಮಾಹಿತಿ:

ಜೂ.25ರಂದು ಮುಂಜಾನೆ 10.30 ಗಂಟೆಗೆ ಅಂಕೋಲಾದ ಪಿ.ಎಂ. ಹೈಸ್ಕೂಲಿನ ರೈತ ಭವನದಲ್ಲಿ, ಮಧ್ಯಾಹ್ನ 2.30ಕ್ಕೆ ಕುಮಟಾದ ಪುರಭವನದಲ್ಲಿ, ಜೂ.26ರಂದು ಮುಂಜಾನೆ 10.30 ಗಂಟೆಗೆ ಹೊನ್ನಾವರದ ಕರ್ಕಿಯ ಚೆನ್ನಕೇಶವ ಪ್ರೌಢಶಾಲೆಯಲ್ಲಿ, ಮಧ್ಯಾಹ್ನ 2.30ಕ್ಕೆ ಭಟ್ಕಳದ ಆನಂದಾಶ್ರಮ ಪ್ರೌಡಶಾಲೆಯಲ್ಲಿ, ಜು.2ರಂದು ಮದ್ಯಾಹ್ನ 2.30ಕ್ಕೆ ಹಳಿಯಾಳದ ಕಾರ್ಮೆಲ್ ಪ್ರೌಢಶಾಲೆಯಲ್ಲಿ, ಜು.3ರಂದು ಮುಂಜಾನೆ 10.30ಕ್ಕೆ ದಾಂಡೇಲಿಯ ಜನತಾ ವಿದ್ಯಾಲಯದಲ್ಲಿ, ಜು.4ರಂದು ಮುಂಜಾನೆ 10.30ಕ್ಕೆ ಯಲ್ಲಾಪುರದ ಟಿ.ಎಂ.ಎಸ್. ಸಭಾಂಗಣದಲ್ಲಿ, ಮಧ್ಯಾಹ್ನ 2.30ಕ್ಕೆ ಮುಂಡಗೋಡದ ಅಂದಲಗೆಯ ಸರ್ಕಾರಿ ಪ್ರೌಢಶಾಲೆಯಲ್ಲಿ, ಜು.7ರಂದು ಮುಂಜಾನೆ 10.30ಕ್ಕೆ ಸಿದ್ದಾಪುರದ ಪ್ರಶಾಂತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಮದ್ಯಾಹ್ನ 2.30ಕ್ಕೆ ಶಿರಸಿಯ ರಂಗಧಾಮದಲ್ಲಿ, ಜು.8ರಂದು ಮುಂಜಾನೆ 10.30ಕ್ಕೆ ಕಾರವಾರದ ಹಿಂದೂ ಹೈಸ್ಕೂಲ್ ನಲ್ಲಿ, ಜು.12ರಂದು ಮುಂಜಾನೆ 10.30ಕ್ಕೆ ಜೋಯಿಡಾದ ಶ್ರೀರಾಮ ಪ್ರೌಢಶಾಲೆಯಲ್ಲಿ ಅಭಿನಂದನಾ ಕಾರ್ಯಕ್ರಮಗಳು ನಡೆಯಲಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ