ಕನ್ನಡ ಸಾಧಕರಿಗೆ ಗೌರವ ನೀಡುವುದು ನಾಡಿನ ಸೇವೆ ಮುಂದುವರಿಸಲು ಪ್ರೇರಣೆ

KannadaprabhaNewsNetwork |  
Published : Nov 01, 2026, 04:15 AM IST
ಎಸ್.ಆರ್.ನವಲಿಹಿರೇಮಠ | Kannada Prabha

ಸಾರಾಂಶ

ನಾಡಿಗಾಗಿ ಕನ್ನಡದ ಅಸ್ತಿತ್ವ ಮತ್ತು ಅಸ್ಮಿತೆಗಾಗಿ ದುಡಿದ ಮಹನೀಯರಿಗೆ ರಾಜ್ಯ ಸರ್ಕಾರ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು ಕನ್ನಡಕ್ಕಾಗಿ ದುಡಿದವರನ್ನು ಗೌರವಿಸುವುದರ ಮೂಲಕ ನಾಡಿನ ಸೇವೆ ಮುಂದುವರಿಸಲು ಇನ್ನಷ್ಟು ಪ್ರೇರಣೆ ನೀಡುತ್ತಿದೆ ಎಂದು ಎಸ್‌ಆರ್‌ಎನ್ಇ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ನವಲಿಹಿರೇಮಠ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಾಡಿಗಾಗಿ ಕನ್ನಡದ ಅಸ್ತಿತ್ವ ಮತ್ತು ಅಸ್ಮಿತೆಗಾಗಿ ದುಡಿದ ಮಹನೀಯರಿಗೆ ರಾಜ್ಯ ಸರ್ಕಾರ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು ಕನ್ನಡಕ್ಕಾಗಿ ದುಡಿದವರನ್ನು ಗೌರವಿಸುವುದರ ಮೂಲಕ ನಾಡಿನ ಸೇವೆ ಮುಂದುವರಿಸಲು ಇನ್ನಷ್ಟು ಪ್ರೇರಣೆ ನೀಡುತ್ತಿದೆ ಎಂದು ಎಸ್‌ಆರ್‌ಎನ್ಇ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ನವಲಿಹಿರೇಮಠ ಹೇಳಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಸಾಧಕರಿಗೆ ಅಭಿನಂದನೆ ಸಲ್ಲಿಸಿದ ಅವರು, ಏಕೀಕರಣವಾಗಿ 71 ವರ್ಷಗಳ ಸಂಭ್ರಮದಲ್ಲಿರುವ ನಮಗೆ ಕನ್ನಡ ರಾಜ್ಯೋತ್ಸವ ತನ್ನ ಗತ ವೈಭವದ ಇತಿಹಾಸ ಮೆಲುಕು ಹಾಕುವುದರ ಮೂಲಕ ತನ್ನ ಹಿರಿಮೆ ಹೆಚ್ಚಿಸಿಕೊಂಡಿದೆಂದರೇ ಅತಿಶಯೋಕ್ತಿಯಲ್ಲ. ಕನ್ನಡದ ಇತಿಹಾಸ, ಮಹತ್ವ, ಹೋರಾಟಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಹಾಗೂ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಮಹನೀಯರನ್ನು ಸ್ಮರಿಸುವ ಉದ್ದೇಶದಿಂದ ಕನ್ನಡ ರಾಜ್ಯೋತ್ಸವನ್ನು ಪ್ರತಿ ವರ್ಷ ಆಚರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.ಕರ್ನಾಟಕ ಸೇರಿದಂತೆ ದೇಶ, ವಿದೇಶಗಳಲ್ಲಿರುವ ಕನ್ನಡಿಗರೂ ಸಹ ಆಯಾ ಪ್ರದೇಶಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತ ಅಲ್ಲಿಯೂ ಸಹ ಕನ್ನಡದ ಕಂಪನ್ನು ಪಸರಿಸುತ್ತಿರುವುದು ಹೆಮ್ಮೆಯ ವಿಚಾರ. ಈ ವಿಚಾರದಲ್ಲಿ ಕನ್ನಡ ಸಾರಸ್ವತ ಲೋಕದ ದಿಗ್ಗಜರು ಇನ್ನಷ್ಟು ಅರ್ಥಪೂರ್ಣವಾಗಿ ಆಚರಿಸಿ ಪ್ರೇರಣೆಯಾಗುವಂತೆ ತಮ್ಮ ಬದ್ಧತೆಯನ್ನು ತೋರಿಸುವ ಕಾಲ ಈಗ ಸನ್ನಿಹಿತವಾಗಿದೆ. ಸುಮಾರು ಎರಡೂವರೆ ಸಹಸ್ರಮಾನಗಳ ಇತಿಹಾಸ ಹೊಂದಿರುವ ಶ್ರೀಮಂತ ಭಾಷೆ ನಮ್ಮದು. ವಿಶ್ವದ ಪ್ರಾಚೀನ ಭಾಷೆಗಳಲ್ಲಿಯೇ ಕನ್ನಡ ತನ್ನ ಹೆಜ್ಜೆಗುರುತನ್ನು ಮೂಡಿಸಿ, ಭಾಷಾ ಶ್ರೀಮಂತಿಕೆ ಹೆಚ್ಚಿಸಿಕೊಳ್ಳಲಿ ಎಂಬುವುದು ನನ್ನ ಮನದಾಳದ ಆಶಯ ಎಂದು ತಿಳಿಸಿದ್ದಾರೆ.ಕನ್ನಡನಾಡಿನ ಮಹತ್ವವನ್ನು ಕನ್ನಡಿಗರಾದ ನಾವು ಅರಿತಾಗ ಮಾತ್ರ ಕನ್ನಡ ರಾಜ್ಯೋತ್ಸವದ ಆಚರಣೆ ಸಾರ್ಥಕವೆನಿಸುತ್ತದೆ. ಕರ್ನಾಟಕ ಏಕೀಕರಣವಾಗಿ 71ನೇ ವರ್ಷದ ಸಂಭ್ರಮದಲ್ಲಿರುವ ನಮಗೆ ಕನ್ನಡ ರಾಜ್ಯೋತ್ಸವ ರಾಷ್ಟ್ರೀಯ ಹಬ್ಬದಂತಿದೆ. ನಾಡಿನ ಸಮಸ್ತ ಏಳು ಕೋಟಿ ಜನತೆಯ ಪರವಾಗಿ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

-ಎಸ್.ಆರ್.ನವಲಿಹಿರೇಮಠ, ಸಂಸ್ಥಾಪಕ ಅಧ್ಯಕ್ಷರು, ಎಸ್‌ಆರ್‌ಎನ್‌ಇ ಫೌಂಡೇಶನ್, ಇಳಕಲ್ಲ-ಹುನಗುಂದ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಹೋಟೆಲ್‌ ಈಜು ಕೊಳದಲ್ಲಿ 2 ವಿದೇಶಿಗರ ಸಾವು
ಪ್ರಜ್ವಲ್‌ ಜೀವಾವಧಿಗೆ ಕಾರಣ ಆದ ಮೂವರಿಗೆ ಕೇಂದ್ರ ಗೃಹ ಪ್ರಶಸ್ತಿ