ಯಮನೂರ ಉರೂಸ್‌ಗೆ ಚಾಲನೆ

KannadaprabhaNewsNetwork |  
Published : Mar 31, 2024, 02:12 AM IST
ಹೂವಿನಹಡಗಲಿಯಲ್ಲಿ ಯಮನೂರ ಸ್ವಾಮಿ ಉರೂಸ್‌ ಅಂಗವಾಗಿ ಗಂಧ ಮಹೋತ್ಸವದ ನಂತರ ಮುಜವರರು ನೀರಿನಲ್ಲಿ ದೀಪ ಉರಿಸುತ್ತಿರುವುದು.ಹೂವಿನಹಡಗಲಿಯ ಯಮನೂರ ಸ್ವಾಮಿ ದರ್ಗಾ ಮುಂದೆ ಸಕ್ಕರೆಯನ್ನು ದೇವರಿಗೆ ಅರ್ಪಿಸಲು ನೆರೆದಿದ್ದ ಭಕ್ತರು. ಉಪ್ಪು ಅರ್ಪಿಸಿ ಹರಕೆ ತೀರಿಸಿದ ಭಕ್ತರು. | Kannada Prabha

ಸಾರಾಂಶ

ಸಾವಿರಾರು ವರ್ಷಗಳ ಹಿಂದೆ ಹಜರತ್ ಸೈಯದ್‌ ತಾಜುದ್ದೀನ್ ಬಾಬಾ (ಯಮನೂರು ಸ್ವಾಮಿ) ಕೈಗೊಂಡಿದ್ದ ಸೌಹಾರ್ದ ಯಾತ್ರೆಯ ಸಂದರ್ಭದಲ್ಲಿ ಪಟ್ಟಣದ ದರ್ಗಾ ಬಳಿ ಉಳಿದುಕೊಂಡಿದ್ದ ಪುಣ್ಯದ ಭೂಮಿಯಾಗಿದೆ.

ಹೂವಿನಹಡಗಲಿ: ಭಾವೈಕ್ಯತೆಯ ಯಮನೂರು ರಾಜಭಾಗ್ ಸವಾರ್ ಉರೂಸ್ ಶುಕ್ರವಾರ ರಾತ್ರಿ ಗಂಧ ಮಹೋತ್ಸವವು ಸಡಗರ ಸಂಭ್ರಮದಿಂದ ಜರುಗಿತು.

ಗಂಧ ಮಹೋತ್ಸವ ಕಾರ್ಯಕ್ರಮಕ್ಕೆ ಶಾಸಕ ಕೃಷ್ಣನಾಯ್ಕ ಚಾಲನೆ ನೀಡಿ ಮಾತನಾಡಿ, ಯಮನೂರ ಉರೂಸ್‌ನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆಯಲ್ಲಿದ್ದೆವು. ಆದರೆ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ. ಉರೂಸ್‌ ಪ್ರತಿಯೊಂದು ಕಾರ್ಯಕ್ರಮಕ್ಕೂ ತಾವು ಸಹಕಾರ ನೀಡುತ್ತೇವೆಂದು ಹೇಳಿದರು.

ಸಾವಿರಾರು ವರ್ಷಗಳ ಹಿಂದೆ ಹಜರತ್ ಸೈಯದ್‌ ತಾಜುದ್ದೀನ್ ಬಾಬಾ (ಯಮನೂರು ಸ್ವಾಮಿ) ಕೈಗೊಂಡಿದ್ದ ಸೌಹಾರ್ದ ಯಾತ್ರೆಯ ಸಂದರ್ಭದಲ್ಲಿ ಪಟ್ಟಣದ ದರ್ಗಾ ಬಳಿ ಉಳಿದುಕೊಂಡಿದ್ದ ಪುಣ್ಯದ ಭೂಮಿಯಾಗಿದೆ. ಸರ್ವರೂ ಒಂದಾಗಿ ಕೋಮು ಭಾವನೆ ಕಿತ್ತು ಹಾಕಿ ಸೌಹಾರ್ದಯುತವಾಗಿ, ನಡೆದುಕೊಂಡಾಗ ಉರೂಸ್ ಕಾರ್ಯಕ್ರಮಕ್ಕೆ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು.

ಗಂಧ ಮಹೋತ್ಸವ ಮೆರವಣಿಗೆಯ ನಂತರದಲ್ಲಿ ದರ್ಗಾ ಮುಂದೆ ಗಂಧ ಮಹೋತ್ಸವ ದಿನದಂದು ಸಾಮರಸ್ಯ ಬೋಧಿಸುವ ನೀರಿನಲ್ಲಿ ದೀಪ ಉರಿಸುವ, ಕಾರ್ಯಕ್ರಮವನ್ನು ಮುಜಾವರರು ನೀರಿನಲ್ಲಿ ದೀಪ ಉರಿಸಿದರು. ನೀರಿನಲ್ಲಿ ದೀಪ ಉರಿಯುವ ಪವಾಡ ನೋಡಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಇದಕ್ಕೂ ಮುನ್ನ ಕುಂಬಾರ ಮನೆಗೆ ಹೋಗಿ ಹೊಸ ಮಡಿಕೆ ತೆಗೆದುಕೊಂಡು, ಮುಖ್ಯ ರಸ್ತೆಗಳಲ್ಲಿ ಸಕಲ ವಾದ್ಯಗಳೊಂದಿಗೆ ಮೆರವಣಿಗೆ ಮಾಡಿದರು.

ಗಂಧ ಮಹೋತ್ಸವ ಮೆರವಣಿಗೆಯಲ್ಲಿ ಗವಿ ಮಠದ ಡಾ.ಹಿರಿಶಾಂತವೀರ ಸ್ವಾಮೀಜಿ, ಬಸವ ಕಲ್ಯಾಣದ ಹಜರತ್ ಖಾಜ ಜಿಯಾ ಉಲ್ ಹಸ್ಸನ್ ಜಾಗಿರ್ದಾರ್ ನಿಜಾಮಿ ಚಿಕ್ತಿ ಶೇರ್-ಏ-ಸವಾರ್ ಸಜ್ಜಾದ ನಶೀನ್, ಬೆಳಗಟ್ಟಿಯ ಹಜರತ್‌ ಸಯ್ಯದ್‌ ಶಾ-ಸಯ್ಯದ್‌ ಮುಸ್ತಫಾ ಖಾದ್ರಿ ಅಲಿಂ ಸಜ್ಜಾರೆ ನಶೀನ್‌, ರಾಮದೇವರ ದೇವಸ್ಥಾನದ ಧರ್ಮಕರ್ತರಾದ ರಾಕೇಶಯ್ಯ ರಾಮಸ್ವಾಮಿ, ಚೌಕಿ ಮಠದ ಗಾಡಿತಾತಾ, ಉರೂಸ್‌ ಸಮಿತಿ ಅಧ್ಯಕ್ಷ ಸರ್ಜಪ್ಪನವರ್‌ ಶೆಫಿ, ಕೆ.ಗೌಸ್‌ ಮೋಹಿದ್ದೀನ್‌, ವಾರದ ಗೌಸ್‌ ಮೋಹಿದ್ದೀನ್‌, ಎಸ್‌.ಎಚ್‌.ಛಬ್ಬಿ ಸೇರಿದಂತೆ ಇತರರಿದ್ದರು.

PREV

Recommended Stories

ಬ್ರೇಕ್‌ ಫೇಲಾದ ಬಸ್‌ ಹಿಮ್ಮುಖ ಚಲಿಸಿದ್ದರಿಂದ 6 ಜನರ ಸಾವು
ಬಿಜೆಪಿಗಿಂತ 1 ದಿನ ಮೊದಲೇ ಜೆಡಿಎಸ್‌ ಧರ್ಮಸ್ಥಳ ಯಾತ್ರೆ