ಉತ್ತಮ ಆರೋಗ್ಯ, ಚಿಂತನೆಗೆ ಕ್ರೀಡೆ ಸಹಕಾರಿ

KannadaprabhaNewsNetwork |  
Published : Dec 12, 2025, 01:00 AM IST
4 | Kannada Prabha

ಸಾರಾಂಶ

ಇಂದಿನ ಶಿಕ್ಷಣದಲ್ಲಿ ತೋಟಗಾರಿಗೆ ಶಿಕ್ಷಣ ತೋಟಗಾರಿಕೆಗೆ ಸೀಮಿತವಾಗದೇ ವಿವಿಧ ಶಿಕ್ಷಣದಲ್ಲಿ ಬಹುಮುಖ ಅಧ್ಯಯನ ಮಾಡಬೇಕು

ಕನ್ನಡಪ್ರಭ ವಾರ್ತೆ ಮೈಸೂರುಉತ್ತಮ ಆರೋಗ್ಯ, ಚಿಂತನೆ ಹಾಗೂ ಉತ್ತಮ ಮಾರ್ಗದರ್ಶಕರಾಗಲು ಕ್ರೀಡೆಯಲ್ಲಿ ಭಾಗವಹಿಸುವಿಕೆ ಬಹಳ ಮುಖ್ಯ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಶಕ್ತಿಯುತರಾಗಿ ಆರೋಗ್ಯವಂತರಾಗಿರಬಹುದು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಹೇಳಿದರುತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 16ನೇ ಅಂತರ ಮಹಾವಿದ್ಯಾಲಯಗಳ ಗೇಮ್ಸ್ ಮತ್ತು ಅಥ್ಲೆಟಿಕ್ಸ್ ಕ್ರೀಡಾಕೂಟ ವತಿಯಿಂದ ಓವಲ್ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕ್ರೀಡೋತ್ಕರ್ಷ-2025 ನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ಶಿಕ್ಷಣದಲ್ಲಿ ತೋಟಗಾರಿಗೆ ಶಿಕ್ಷಣ ತೋಟಗಾರಿಕೆಗೆ ಸೀಮಿತವಾಗದೇ ವಿವಿಧ ಶಿಕ್ಷಣದಲ್ಲಿ ಬಹುಮುಖ ಅಧ್ಯಯನ ಮಾಡಬೇಕು ಎಂಬುದು ನನ್ನ ಆಶಯ. ಕ್ರೀಡೆಯಲ್ಲಿ ಸೋಲು- ಗೆಲುವು ಸಹಜ, ಆದರೆ ಭಾಗವಹಿಸುವಿಕೆ ಎಂಬುದು ಬಹಳ ಮುಖ್ಯ. ಆದ್ದರಿಂದ ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾಂತರವಾಗಿ ತೆಗೆದುಕೊಳ್ಳುವ ಸ್ಪೂರ್ತಿ ವಿದ್ಯಾರ್ಥಿಗಳಲ್ಲಿ ಬರಬೇಕು ಎಂದು ತಿಳಿಸಿದರು.ಕ್ರೀಡೆ ಎಂದರೆ ಎಲ್ಲರೂ ಒಟ್ಟಿಗೆ ಸೇರಿ ಆಟ ಆಡುವುದು. ಎಲ್ಲರೂ ಒಟ್ಟಿಗೆ ಸೇರುವುದೇ ಒಂದು ನಿಜವಾದ ಗೆಲುವು. ಆದ್ದರಿಂದ ಎಲ್ಲರೂ ಕೂಡ ಒಟ್ಟಿಗೆ ಸೇರಿ ಸಂತೋಷದಿಂದ ಒಗ್ಗಟಿನಿಂದ ಕೂಡಿ ಈ ನಾಲ್ಕು ದಿನಗಳ ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಕ್ರೀಡೆಯನ್ನು ಯಶಸ್ವಿಗೊಳಿಸಿ ಎಂದು ಅವರು ಹೇಳಿದರು.ದಕ್ಷಿಣ ವಲಯದ ಡಿಐಜಿ ಡಾ.ಎಂ.ಬಿ. ಬೋರಲಿಂಗಯ್ಯ ಮಾತನಾಡಿ, ಕ್ರೀಡೆ ಎಂಬುದು ಪ್ರತಿಯೊಬ್ಬರಿಗೂ ಬಹಳ ಅತ್ಯವಶ್ಯಕ. ಕ್ರೀಡೆಯಲ್ಲಿ ಏಳು - ಬೀಳು, ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ಜನರ ಆರೋಗ್ಯ ಸಮಸ್ಯೆ ನಿವಾರಿಸಲು ಕ್ರೀಡೆ ಸಹಕಾರಿಯಾಗಿದೆ. ಪ್ರತಿಯೊಬ್ಬರು ಜೀವನದಲ್ಲಿ ಕ್ರೀಡೆಯನ್ನು ಅಳವಡಿಸಿಕೊಳ್ಳಬೇಕು. ಕ್ರೀಡೆ ಕಡೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಕ್ರೀಡೆ ದೈಹಿಕ ಸಾಮರ್ಥ್ಯಕ್ಕೆ ಒಂದು ಸಾಧನವಾಗಿದೆ. ಆದ್ದರಿಂದ ಎಲ್ಲರೂ ಕೂಡ ದೈಹಿಕ ಸಾಮರ್ಥ್ಯದ ಕಡೆಗೆ ಹೆಚ್ಚು ಗಮನ ನೀಡಬೇಕು ಎಂದು ಅವರು ತಿಳಿಸಿದರು.ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ರಾಷ್ಟ್ರೀಯ ಬಾಸ್ಕೆಟ್ ಬಾಲ್ ಆಟಗಾರ ಡಾ.ಸಿ. ವೆಂಕಟೇಶ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗಿರಲು ಹಾಗೂ ಭಾವನೆಗಳ ಸಮತೋಲನಕ್ಕೆ ಕ್ರೀಡೆ ಎಂಬುದು ಅತ್ಯವಶ್ಯಕವಾಗಿದೆ. ಸತತ ಪ್ರಯತ್ನವೇ ಯಶಸ್ಸಿಗೆ ಮೂಲ ಕಾರಣ ಎಂಬುವ ಆಗೆ ಕ್ರೀಡೆಯಲ್ಲಿ ನಾವು ಹೆಚ್ಚು ಶ್ರಮಪಟ್ಟರೆ ಯಶಸ್ಸು ಕಂಡಿದ ನಮ್ಮದಾಗುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ತೋಟಗಾರಿಕೆ ಕಾಲೇಜಿನ ಕ್ರೀಡಾಕೂಟ ಸಂಘಟನಾ ನಿರ್ದೇಶಕ ಡೀನ್ ಡಾ.ಸಿ.ಎನ್. ಹಂಚಿಮನೆ ಮಾತನಾಡಿ, ಕ್ರೀಡೆಗಳು ವಿದ್ಯಾರ್ಥಿಗಳ ಜೀವನದಲ್ಲಿ ದೈಹಿಕ ಚಟುವಟಿಕೆಗಳ ಮೌಲ್ಯವನ್ನು ಅರ್ಥ ಮಾಡಿಕೊಳ್ಳಲು ಪ್ರೋತ್ಸಾಹ ನೀಡುತ್ತವೆ. ಶಿಸ್ತು ಮತ್ತು ಆರೋಗ್ಯ ಜೀವನ ಶೈಲಿಯನ್ನು ಕಲ್ಪಿಸುತ್ತದೆ. ದೇಹವನ್ನು ಬಲ ಪಡಿಸುವುದರ ಜೊತೆಗೆ ಮನಸ್ಸನ್ನು ಒಂದುಗೂಡಿಸುತ್ತದೆ. ಕ್ರೀಡೆಯಿಂದ ಶಿಸ್ತಿನ ನಾಯಕತ್ವ, ಒಳ್ಳೆಯ ಗುಣಗಳು ಬರುತ್ತವೆ. ಆದ್ದರಿಂದ ಎಲ್ಲರೂ ಕೂಡ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.ಕುರುಬೂರು ಮಹಿಳಾ ಖೋ- ಖೋ ವಿಶ್ವಕಪ್ ವಿಜೇತೆ ಚೈತ್ರಾ ಅವರು ಕ್ರೀಡೋತ್ಕರ್ಷ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ವಿ. ಸುನೀಲ್, ನಗರ ವಿಭಾಗದ ಉಪ ಪರಿಸರ ಅಧಿಕಾರಿ ಎಂ.ಜೆ. ಜಯಲಕ್ಷ್ಮೀ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್‌.ಎಚ್‌. ನಿರ್ಮಲಾ, ಬಾಗಲಕೋಟೆ ತೋಟಗಾರಿಗೆ ವಿಜ್ಞಾನ ವಿವಿಯ ಡಾ.ಎಸ್‌.ಎನ್‌. ವಾಸುದೇವನ್‌, ವ್ಯವಸ್ಥಾಪನ ಮಂಡಳಿ ಸದಸ್ಯರಾದ ಎಚ್.ಜೆ. ಮನೋಹರ, ತೋಟಗಾರಿಕೆ ಕಾಲೇಜಿನ ಕ್ರೀಡಾಕೂಟದ ಸಂಘಟನಾ ಕಾರ್ಯದರ್ಶಿ ಡಾ.ಎಚ್‌.ಎನ್‌. ರಾಜೀವ್, ತೋಟಗಾರಿಕೆ ಕಾಲೇಜಿನ ವಿದ್ಯಾರ್ಥಿ ಕಲ್ಯಾಣದ ಕ್ರೀಡಾಕೂಟ ಸಂಘಟನಾಧ್ಯಕ್ಷ ಹಾಗೂ ಡೀನ್ ಡಾ.ಎಂ.ಜಿ. ಕೆರೂಟಗಿ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ