ಹೊಸಂಗಡಿ ದೇವಸ್ಥಾನ: ಎಕ್ಸಲೆಂಟ್ ವಿದ್ಯಾಸಂಸ್ಥೆ ಸಸ್ಯಶ್ಯಾಮಲಾ ಅಭಿಯಾನ

KannadaprabhaNewsNetwork |  
Published : Aug 20, 2026, 02:45 AM IST
ಎಕ್ಸಲೆಂಟ್ ವಿದ್ಯಾಸಂಸ್ಥೆಯ ಸಸ್ಯಶ್ಯಾಮಲಾ ಅಭಿಯಾನ: ಹೊಸಂಗಡಿ ದೇವಸ್ಥಾನದಲ್ಲಿ ಸಸಿಗಳ ವಿತರಣೆ | Kannada Prabha

ಸಾರಾಂಶ

ಕಲ್ಲಬೆಟ್ಟು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆ ಯೋಜನೆ ವರ್ಷಕ್ಕೆ 1000 ಗಿಡಗಳನ್ನು ನೆಟ್ಟು ಪೋಷಿಸುವ ಸಸ್ಯಶ್ಯಾಮಲ ಅಭಿಯಾನದಡಿ ಸಿಂಹ ಸಂಕ್ರಮಣದಂದು ಮಾರೂರು ಹೊಸಂಗಡಿ ಗೋಪಾಲಕೃಷ್ಣ ದೇವಸ್ಥಾ

ಮೂಡುಬಿದಿರೆ: ಕಲ್ಲಬೆಟ್ಟು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆ ಯೋಜನೆ ವರ್ಷಕ್ಕೆ 1000 ಗಿಡಗಳನ್ನು ನೆಟ್ಟು ಪೋಷಿಸುವ ಸಸ್ಯಶ್ಯಾಮಲ ಅಭಿಯಾನದಡಿ ಸಿಂಹ ಸಂಕ್ರಮಣದಂದು ಮಾರೂರು ಹೊಸಂಗಡಿ ಗೋಪಾಲಕೃಷ್ಣ ದೇವಸ್ಥಾನದಲ್ಲಿ 100ಕ್ಕೂ ಹೆಚ್ಚು ಭಕ್ತಾದಿಗಳಿಗೆ ವಿವಿಧ ಜಾತಿಯ ಹಣ್ಣಿನ ಸಸಿಗಳನ್ನು ವಿತರಿಸಲಾಯಿತು.

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ದಂಪತಿ ಹಾಗೂ ಅವರ ಪುತ್ರಿ ಮೌಲ್ಯಾ ಯುವರಾಜ್ ಸಸಿಗಳನ್ನು ವಿತರಿಸಿದರು.

ಎಕ್ಸಲೆಂಟ್ ವಿದ್ಯಾಸಂಸ್ಥೆ ಮೂಲಕ ಸಸ್ಯಶ್ಯಾಮಲಾ ಅಭಿಯಾನವನ್ನು ಆಂದೋಲನದ ರೀತಿಯಲ್ಲಿ ಎಲ್ಲೆಡೆ ಸಸಿಗಳನ್ನು ವಿತರಿಸುವ ಮೂಲಕ ನಡೆಸಲಾಗುತ್ತಿದೆ. ಹಣ್ಣಿನ ಗಿಡಗಳನ್ನು ಪಡೆದ ಭಕ್ತಾದಿಗಳು ಅವುಗಳನ್ನು ನೆಟ್ಟು ಪೋಷಿಸಿ ಫಲ ಪಡೆಯುವ ಮೂಲಕ ಈ ಅಭಿಯಾನಕ್ಕೆ ಶಕ್ತಿ ತುಂಬಬೇಕು ಎಂದು ರಶ್ಮಿತಾ ಯುವರಾಜ್ ಜೈನ್ ಭಕ್ತಾದಿಗಳಲ್ಲಿ ವಿನಂತಿಸಿದರು.ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಂಭು ಎನ್. ಶೆಟ್ಟಿ ಮತ್ತು ಪ್ರಧಾನ ಅರ್ಚಕ ವೇದಮೂರ್ತಿ ವೆಂಕಟರಾಜ ಆಸ್ರಣ್ಣರು ಭಕ್ತಾದಿಗಳಿಗೆ ಉಚಿತವಾಗಿ ಸಸಿಗಳನ್ನು ವಿತರಿಸಿದ ಯುವರಾಜ್ ಜೈನ್ ಮತ್ತು ರಶ್ಮಿತಾ ಯುವರಾಜ್ ಜೈನ್ ದಂಪತಿಯನ್ನು ಗೌರವಿಸಿದರು. ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸ್ವರೂಪ್ ಜೈನ್, ಶಿಕ್ಷಕ ಭಾಸ್ಕರ ನೆಲ್ಯಾಡಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಖಾಸಗಿ ಬಸ್‌ ಪಲ್ಟಿಯಾಗಿ ಬೈಕ್‌ ಸವಾರ ಸಾವು
ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಮುಂದುವರೆದ ಧರಣಿ