ಶೌಚಕ್ಕೆ ಜಾಗ ಬೇಕೆಂದು ಆಸ್ಪತ್ರೆಗೆ ವಿರೋಧ

KannadaprabhaNewsNetwork |  
Published : Nov 10, 2025, 03:00 AM IST
ತಾಳಿಕೋಟೆ 1 | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ಬಯಲು ಶೌಚಮುಕ್ತ ಗ್ರಾಮ ಮಾಡಲು ಸರ್ಕಾರಗಳು ಸಾಕಷ್ಟು ಅನುದಾನ ನೀಡುವ ಜೊತೆಗೆ ಹಲವಾರು ಯೋಜನೆ ರೂಪಿಸಿದ್ದರೂ ಬಯಲು ಶೌಚಾಲಯ ಬೇಕು, ಮಂಜೂರಾದ ನೂತನ ಆಸ್ಪತ್ರೆ ನಮಗೆ ಬೇಡಾ ಎಂಬ ಹಠಕ್ಕೆ ಬಿದ್ದವರಿಗೆ ಪೊಲೀಸ್‌ರ ಮಧ್ಯಸ್ಥಿಕೆಯಲ್ಲಿ ಅಧಿಕಾರಿಗಳು ಬುದ್ದಿ ಹೇಳಿದ ಘಟನೆ ತಾಲೂಕಿನ ಗಡಿ ಸೋಮನಾಳ ಗ್ರಾಮದಲ್ಲಿ ರವಿವಾರ ನಡೆಯಿತು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಬಯಲು ಶೌಚಮುಕ್ತ ಗ್ರಾಮ ಮಾಡಲು ಸರ್ಕಾರಗಳು ಸಾಕಷ್ಟು ಅನುದಾನ ನೀಡುವ ಜೊತೆಗೆ ಹಲವಾರು ಯೋಜನೆ ರೂಪಿಸಿದ್ದರೂ ಬಯಲು ಶೌಚಾಲಯ ಬೇಕು, ಮಂಜೂರಾದ ನೂತನ ಆಸ್ಪತ್ರೆ ನಮಗೆ ಬೇಡಾ ಎಂಬ ಹಠಕ್ಕೆ ಬಿದ್ದವರಿಗೆ ಪೊಲೀಸ್‌ರ ಮಧ್ಯಸ್ಥಿಕೆಯಲ್ಲಿ ಅಧಿಕಾರಿಗಳು ಬುದ್ದಿ ಹೇಳಿದ ಘಟನೆ ತಾಲೂಕಿನ ಗಡಿ ಸೋಮನಾಳ ಗ್ರಾಮದಲ್ಲಿ ರವಿವಾರ ನಡೆಯಿತು.

ತಾಳಿಕೋಟೆ ತಾಲೂಕು ಅತೀ ಹಿಂದುಳಿದ ತಾಲೂಕು ಪಟ್ಟಿಯಲ್ಲಿ ಸೇರಿದ್ದರಿಂದ ಶಾಸಕ ರಾಜುಗೌಡ ಪಾಟೀಲ ತಮ್ಮ ಕ್ಷೇತ್ರದ ಗ್ರಾಮಗಳಿಗೆ ಅವಶ್ಯವಿರುವ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಪ್ರಾಥಮಿಕ ಚಿಕಿತ್ಸಾಲವನ್ನು ಮಂಜೂರಾತಿ ಮಾಡಿಸಿದ್ದರು. ಆಸ್ಪತ್ರೆ ಕಟ್ಟಲು ಅನುಮೋದನೆಗೊಂಡ ಸರ್ಕಾರಿ ಖುಲ್ಲಾ ಜಾಗೆಯನ್ನು ಇತ್ತೀಚೆಗೆ ಸ್ವಚ್ಛಗೊಳಿಸಿದರು. ಸದರಿ ಜಾಗೆ ಕಬಳಿಕೆಯಾಗುವದನ್ನು ತಪ್ಪಿಸಲು ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ ಬೆನ್ನಲ್ಲೆ ಕೆಲವರು ಆಸ್ಪತ್ರೆ ನಿರ್ಮಾಣಕ್ಕೆ ಅಡ್ಡಿ ಪಡಿಸಲು ಯತ್ನಿಸಿದರು. ಪರಿಣಾಮ ಪಿಎಸ್‌ಐಜ್ಯೋತಿ ಖೋತ್ ಸಮ್ಮುಖದಲ್ಲಿ ಗ್ರಾಪಂ ಅಭಿವೃದ್ದಿ ಅಧಿಕಾರಿ ಬಡಿಗೇರ ಮತ್ತು ತಹಸೀಲ್ದಾರ್‌ ಡಾ.ವಿನಯಾ ಹೂಗಾರ ಬಯಲು ಶೌಚಕ್ಕೆ ಬೇಡಿಕೆ ಇಟ್ಟವರಿಗೆ ಶಾಂತಿಯುತವಾಗಿ ತಿಳುವಳಿಕೆ ನೀಡುವ ಜೊತೆಗೆ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾದರು.ಈ ಸಮಯದಲ್ಲಿ ಗ್ರಾಮದ ಮುಖಂಡ ಮಡುಸಾಹುಕಾರ ಬಿರಾದಾರ ಮಾತನಾಡಿ, ಗ್ರಾಮವು ಅಭಿವೃದ್ದಿ ಹೊಂದಬೇಕಾದರೆ ಎಲ್ಲ ಜನರ ಸಹಕಾರ ಮುಖ್ಯ. ಗ್ರಾಮದಲ್ಲಿ ಸಣ್ಣ ಪುಟ್ಟ ಕಾಯಿಲೆಗಳು ಬಂದರೂ ತಾಳಿಕೋಟೆ ಪಟ್ಟಣಕ್ಕೆ ಹೋಗಬೇಕಾದ ಸಂದರ್ಭವಿತ್ತು. ಆದರೆ, ಈಗ ಶಾಸಕರು ಗಡಿಸೋಮನಾಳದಲ್ಲಿ ಆಸ್ಪತ್ರೆ ಮಂಜೂರಾತಿ ಮಾಡಿಸಿದ್ದಾರೆ. ಈ ಸ್ಥಳದಲ್ಲಿ ಕೆಲವರು ಬಯಲು ಶೌಚ ಬಯಸುತ್ತಿರುವುದು ಖೇದಕರ ಸಂಗತಿ. ಬೇರೆ ಕಡೆ ಮಹಿಳೆಯರ ಅನುಕೂಲಕ್ಕಾಗಿ ಹೈಟೆಕ್ ಸಾಮೂಹಿಕ ಸೌಚಾಲಯ ನಿರ್ಮಾಣ ಮಾಡೋಣ. ಈ ಆಸ್ಪತ್ರೆ ನಿರ್ಮಾಣಕ್ಕೆ ಅಡ್ಡಿಪಡಿಸಬೇಡಿ ಎಂದು ಮನವಿ ಮಾಡಿದರು.ಮಹಿಳೆಯರಿಗೆ ಬುದ್ದಿವಾದ

ಈ ಸಮಯದಲ್ಲಿ ಎರಡ್ಮೂರು ಜನ ಮಹಿಳೆಯರು ಆಸ್ಪತ್ರೆ ಎಲ್ಲೆಯಾದರೂ ಕಟ್ಟಿ ನಮಗೆ ಬಯಲು ಶೌಚಕ್ಕೆ ಇದೇ ಜಾಗ ಕೊಡಿ ಎಂದು ಕೂಗಾಡಿದರು. ಅಲ್ಲದೇ, ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು. ಆಗ ಪಿಡಿಒ ಬಯಲು ಶೌಚಕ್ಕೆ ಎಲ್ಲಯೂ ಅವಕಾಶವಿಲ್ಲ. ನಿಷೇದಿತ ಬಯಲು ಶೌಚಾಲಯವನ್ನು ಬಿಟ್ಟು ಬಿಡಿ ಜಾಗದ ಕೊರತೆಯಿಂದ ಕೆಲವು ಜನರಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಆಗಿರದಿದ್ದರೆ ಅಂತವರ ಅನುಕೂಲಕ್ಕೆ ಸರ್ಕಾರದ ಅನುಮತಿಯೊಂದಿಗೆ ಹೈಟೆಕ್ ಶೌಚಾಲಯ ಕಟ್ಟಲು ಅವಕಾಶವಿದೆ. ಅದನ್ನು ಮುಂದಿನ ದಿನಗಳಲ್ಲಿ ಮಾಡೋಣ ಎಂದು ಮನವಿ ಮಾಡಿದರು. ಆದರೂ, ವಾಗ್ವಾದಕ್ಕಿಳಿದವರಿಗೆ ಪಿಎಸ್‌ಐ ಜ್ಯೋತಿ ಖೋತ್ ಕಾನೂನು ವಿರುದ್ಧವಾಗಿ ನಡೆದುಕೊಂಡರೆ ಕ್ರಮಕೈಗೊಳ್ಳಲಾಗುವುದು. ಇಲ್ಲಿ ಅನುಕೂಲಕ್ಕಾಗಿ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದು ಎಚ್ಚರಿಕೆ ನೀಡಿದರು.ಅಧಿಕಾರಿಗಳ ಬಂಬಲಕ್ಕೆ ನಿಂತ ಜನ:

ಎರಡ್ಮೂರು ಜನ ಮಹಿಳೆಯರ ವಿರೋಧದ ಮಧ್ಯೆಯೂ ಸ್ಥಳೀಯರು ಆಸ್ಪತ್ರೆ ಬೇಕು ಎಂದು ಮನವಿ ಮಾಡಿದರು. ಅಧಿಕಾರಿಗಳು ಆಸ್ಪತ್ರೆ ಬೇಕೋ, ಬಯಲು ಶೌಚಾಲಯ ಬೇಕೋ ಎಂಬ ಅಭಿಪ್ರಾಯ ಸಂಗ್ರಹಿಸಲು ಜನರಿಗೆ ಕೈ ಎತ್ತಲು ಕೇಳಿದಾಗ ಬೆರಳಣಿಕೆಯಷ್ಟು ಜನರನ್ನು ಹೊರತು ಪಡಿಸಿ ಮಹಿಳೆಯರು, ಗ್ರಾಮದ ಜನರು ಆಸ್ಪತ್ರೆ ನಿರ್ಮಾಣಕ್ಕೆ ಬೆಂಬಲ ನೀಡಿದರು. ಕೊನೆಗೆ ಜನರ ಅಭಿಪ್ರಾಯದ ಮೇರೆಗೆ ಸರ್ಕಾರದ ಸೂಚನೆಯಂತೆ ಸದರಿ ಸ್ಥಳದಲ್ಲಿ ಆಸ್ಪತ್ರೆ ನಿರ್ಮಾಣವಾಗಲಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದೆಂದು ಅಧಿಕಾರಿಗಳು ತಿಳಿಸಿದರು.ಈ ಸಮಯದಲ್ಲಿ ಗ್ರಾಮದ ಮುಖಂಡರಾದ ನಿಂಗನಗೌಡ ಬಿರಾದಾರ, ಭೀಮನಗೌಡ ತಂಗಡಗಿ, ಶೇಖರಗೌಡ ಸಾಸನೂರ, ತಿಪ್ಪಣ್ಣ ಪೂಜಾರಿ, ಮುತ್ತು ಧೂಳೇಕರ, ಸುರೇಶ ಕಂಗಳ, ಜಯಪ್ಪ ಹರಿಜನ, ಅನ್ವರ ಅವಟಿ, ಪ್ರಭುಗೌಡ ಬಿರಾದಾರ ಸೇರಿ ಹಲವರು ಇದ್ದರು.ಕೋಟ್‌ಗಡಿಸೋಮನಾಳ ಬಡ ಜನರ ಕಷ್ಟಕ್ಕೆ ನೆರವಾಗುವ ನಿಟ್ಟಿನಲ್ಲಿ ಶಾಸಕ ರಾಜುಗೌಡರು ಆಸ್ಪತ್ರೆ ಮಂಜೂರು ಮಾಡಿಸಿದ್ದಾರೆ. ಕೆಲವರು ಅಭಿವೃದ್ಧಿ ವಿಷಯದಲ್ಲೂ ರಾಜಕಾರಣ ಮಾಡಲು ಹೊರಟಿರುವದು ಸರಿಯಲ್ಲ. ರಾಜುಗೌಡರು ವಿರೋಧ ಪಕ್ಷದಲ್ಲಿದ್ದರೂ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಎರಡ್ಮೂರು ದಿನದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಶಾಸಕರು ಆಗಮಿಸಲಿದ್ದಾರೆ.ಮಡುಸಾಹುಕಾರ ಬಿರಾದಾರ, ಜೆಡಿಎಸ್ ತಾಲೂಕಾಧ್ಯಕ್ಷ

PREV

Recommended Stories

ಕಟೀಲು ನುಡಿಹಬ್ಬದಲ್ಲಿ ರಂಜಿಸಿದ ಸಿನಿಮಾ ತಾರೆಯರು
ಜಗತ್ತಿನ ಎಲ್ಲಾ ಕ್ರಾಂತಿಗಳಿಗೂ ಬರವಣಿಗೆಯೇ ಪ್ರೇರಣೆ