ಜನಸ್ತೋಮ ಕಂಡು ನಿಬ್ಬೆರಗಾದ ಶಾಸಕ ಡಾ.ಎನ್.ಟಿ.ಶ್ರೀನಿವಾಸ್

KannadaprabhaNewsNetwork |  
Published : Nov 10, 2025, 03:00 AM IST
ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ನೀರುಣಿಸುವ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರನ್ನು ಸಿಎಂ ಸಿದ್ಧರಾಮಯ್ಯ ಹೊಗಳುವ ಮೂಲಕ ಯುವ ಉತ್ಸಾಹಿ ಶಾಸಕರಿಗೆ ಹುರುಪು ತುಂಬಿದರು.  | Kannada Prabha

ಸಾರಾಂಶ

ಸಂಸದ ಈ.ತುಕಾರಾಂ ನೀರನ್ನು ತೆಗೆದುಕೊಂಡು ಹೋಗಿ ಕೊಟ್ಟರು.

ಕೂಡ್ಲಿಗಿ: ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಲೋಕಾರ್ಪಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಹಾಗೂ ಅಪಾರ ಜನಸ್ತೋಮದ ಮುಂದೆ ಮಾತನಾಡುವಾಗ ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಗದ್ಗದಿತರಾದರು.

ಏನು ಮಾತನಾಡಬೇಕು ಎಂದು ತೋಚದೇ ಆವೇಶಕ್ಕೆ ಒಳಗಾದರು. ಆಗ ಸಂಸದ ಈ.ತುಕಾರಾಂ ನೀರನ್ನು ತೆಗೆದುಕೊಂಡು ಹೋಗಿ ಕೊಟ್ಟರು. ಅಪಾರ ಜನಸ್ತೋಮ ಕಂಡು ಇಂತಹ ಸಂದರ್ಭದಲ್ಲಿ ನಮ್ಮ ತಂದೆ ಎನ್.ಟಿ. ಬೊಮ್ಮಣ್ಣ ಇರಬೇಕಿತ್ತು ಎಂದು ತಂದೆಯ ರಾಜಕೀಯ ಹಾದಿಯನ್ನು ನೆನಪು ಮಾಡಿಕೊಂಡರು.

ಅಪ್ಪ ಜೀವನದ ಕೊನೆಯ ಸಂದರ್ಭದಲ್ಲಿ ಮೂರು ಬಾರಿ ಸೋತಿದ್ದನ್ನು ಕಣ್ಣಾರೆ ಕಂಡ ಮಗ ಡಾ. ಎನ್.ಟಿ. ಶ್ರೀನಿವಾಸ್, ಅವರ ಅಪ್ಪನ ಮೂರು ಸೋಲನ್ನು ನಾಚಿಸುವಂತೆ ಇಡೀ ಕಲ್ಯಾಣ ಕರ್ನಾಟಕದಲ್ಲಿಯೇ ಅತೀ ಹೆಚ್ಚು ಮತಗಳನ್ನು ಪಡೆದು ಅಪ್ಪನ ಗೆಲುವಿನ ಆಸೆಯನ್ನು ಈಡೇರಿಸಿದ್ದು ನೆರೆದಿದ್ದ ಜನತೆ ನೆನಪು ಮಾಡಿಕೊಂಡರು.

₹1250 ಕೋಟಿಗೂ ಹೆಚ್ಚು ಹಣ ತಂದು ಕೂಡ್ಲಿಗಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದಲ್ಲದೇ 74 ಕೆರೆಗಳಿಗೆ ಇವರ ಅವಧಿಯಲ್ಲಿ ನೀರು ತುಂಬಿದ್ದರಿಂದ ಇಂತಹ ಸುವರ್ಣ ಅಕ್ಷರಗಳಲ್ಲಿ ಬರೆಯುವ ದಿನವನ್ನು ಅಪ್ಪ ನೋಡಿದ್ದರೆ ನನ್ನ ಜನ್ಮ ಸಾರ್ಥಕವಾಗುತಿತ್ತು ಎಂಬುದನ್ನು ಶಾಸಕರು ನೆನಪು ಮಾಡಿಕೊಂಡು ಇಡೀ ಭಾಷಣದ ತುಂಬ ಭಾವುಕರಾದರು.

ಸಿಎಂ ಹೊಗಳಿಕೆ:

ಮುಖ್ಯಮಂತ್ರಿ ಸಿದ್ಧರಾಮಯ್ಯ ಪದೇಪದೇ ಎನ್.ಟಿ.ಶ್ರೀನಿವಾಸ್ ಅಭಿವೃದ್ಧಿ ಕಾರ್ಯ ಹೊಗಳಿದರು. ಅವರು ಅನುದಾನ ಕೇಳುವ ರೀತಿ ಎಲ್ಲರಿಗೂ ಬರುವುದಿಲ್ಲ. ನಾನು ಯಾವತ್ತೂ ಎನ್.ಟಿ. ಶ್ರೀನಿವಾಸ್ ಅವರಿಗೆ ಅನುದಾನ ನೀಡಿದ್ದೇನೆ. ಬರಿಗೈಯಲ್ಲಿ ಎಂದೂ ವಾಪಸ್ಸು ಕಳಿಸಿಲ್ಲ. ಹೀಗಾಗಿಯೇ ಸಾವಿರಾರು ಕೋಟಿ ಅನುದಾನ ಕೂಡ್ಲಿಗಿಗೆ ಬಂದಿದೆ. ಬಿಜೆಪಿಯವರು ಸುಮ್ಮನೆ ಗ್ಯಾರಂಟಿಗೆ ಹಣ ಸಾಕಾಗಲ್ಲ; ಅಭಿವೃದ್ಧಿ ಇನ್ನೆಲ್ಲಿ ಎಂದು ಜನತೆಗೆ ಸುಳ್ಳು ಹೇಳುತ್ತಿದ್ದಾರೆ. ಅಭಿವೃದ್ಧಿಗೆ ಎನ್.ಟಿ.ಶ್ರೀನಿವಾಸ್ ಅವರಿಗೆ ಎಲ್ಲಿಂದ ಹಣ ಬಂತು ಹೇಳಿ ಎಂದು ಬಿಜೆಪಿಗರಿಗೆ ತಿರುಗೇಟು ನೀಡಿದರು.

ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ನೀರುಣಿಸುವ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರನ್ನು ಸಿಎಂ ಸಿದ್ಧರಾಮಯ್ಯ ಹೊಗಳುವ ಮೂಲಕ ಯುವ ಉತ್ಸಾಹಿ ಶಾಸಕರಿಗೆ ಹುರುಪು ತುಂಬಿದರು.

PREV

Recommended Stories

ಸುಸಜ್ಜಿತ ಕ್ರೀಡಾಂಗಣ, ರಂಗಮಂದಿರ ನಿರ್ಮಿಸುವೆ: ಸಂಸದ ತುಕಾರಾಂ
ಕನ್ನಡ ಹೋರಾಟಗಾರರ ಕೇಸ್‌ ಕುರಿತು ಪರಿಶೀಲನೆ: ಡಾ। ಪರಂ