ಕನ್ನಡಪ್ರಭ ವಾರ್ತೆ ಕೊಪ್ಪಳ
ನಗರದ ಇಂದಿರಾ ಕ್ಯಾಂಟೀನ್ ಮುಂಭಾಗದಿಂದ ತಹಶೀಲ್ದಾರ ಕಚೇರಿಯವರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ ಕಚೇರಿ ತಲುಪಿ, ಶಿರಸ್ತೇದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
2O23ರ ವಿಧಾನಸಭೆ ಚುನಾವಣೆ ಸಂದರ್ಭ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬಿಸಿಯೂಟ ನೌಕರರ ಗೌರವಧನವನ್ನು 6000 ರೂಪಾಯಿಗೆ ಹೆಚ್ಚಿಸುವುದಾಗಿ ಹೇಳಿದ್ದರು. 6ನೇ ಗ್ಯಾರಂಟಿ ಜಾರಿ ಮಾಡುವುದಾಗಿ ಭರವಸೆ ನೀಡಿದ್ದು, ತಕ್ಷಣ ಜಾರಿಯಾಗಲಿ ಆಗ್ರಹಿಸಿದರು.ಬೇಸಿಗೆ ರಜೆಯಲ್ಲಿ ನೌಕರರು ಎರಡು ತಿಂಗಳು ಕೆಲಸ ಮಾಡಿದ್ದು, ಆ ಎರಡು ತಿಂಗಳ ಗೌರವಧನವನ್ನು ತಕ್ಷಣ ಪಾವತಿಸಬೇಕು.
ಶಾಲಾ ಮುಖ್ಯೋಪಾಧ್ಯಾಯರು ಮತ್ತು ಮುಖ್ಯ ಅಡುಗೆಯವರ ಹೆಸರಲ್ಲಿ ಜಂಟಿ ಬ್ಯಾಂಕ್ ಇತ್ತು. ಈಗ ಮುಖ್ಯ ಅಡುಗೆಯವರನ್ನು ಕೈಬಿಟ್ಟು ಎಸ್‌ಡಿಎಂಸಿ ಅವರನ್ನು ಸೇರಿಸಿ ಆದೇಶ ಹೊರಡಿಸಿದ್ದಾರೆ. ಈ ಹೊಸ ಆದೇಶ ಕೈಬಿಟ್ಟು ಸರ್ಕಾರ ಮೊದಲಿದ್ದಂತೆ ಮುಖ್ಯ ಅಡುಗೆಯವರ ಜೊತೆಗಿನ ಜಂಟಿ ಖಾತೆಯನ್ನೇ ಮುಂದುವರಿಸಬೇಕು. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನೇಮಕಾತಿ ನಡೆಯಬೇಕು. ಬಳಸಲು ಯೋಗ್ಯವಲ್ಲದ ಒಲೆ, ಅಡುಗೆ ಸಾಮಗ್ರಿಗಳನ್ನು ತಕ್ಷಣ ಬದಲಾಯಿಸಲು ಕ್ರಮವಹಿಸಬೇಕು. ನೌಕರರಿಂದ ಅಡುಗೆ ಕೆಲಸವನ್ನು ಬಿಟ್ಟು ಬೇರೆ ಯಾವುದೇ ಕೆಲಸ ಹಚ್ಚಬಾರದು.
ಬಸವರಾಜ ಶೀಲವಂತರ, ಗಾಳೆಪ್ಪ ಮುಂಗೋಲಿ, ಸಂಜಯದಾಸ್, ರಾಮಲಿಂಗಾ ಶಾಸ್ತ್ರಿ, ಮುತ್ತು ಹಡಪದ, ಮಕ್ಬೂಲ್ ರಾಯಚೂರು, ಶೇಖಪ್ಪ ಬೇಟಗೇರಿ, ಪುಷ್ಪಾ ಮೇಸ್ತ್ರಿ, ಸುಮಂಗಲಾ ಕೊತಬಾಳ, ನೀಲಮ್ಮ ಕಾರಟಗಿ, ತಾಹೇರಾ ಗಂಗಾವತಿ, ರೇಣುಕಾ ಕಾರಟಗಿ, ನಿರ್ಮಲಾ, ಪ್ರೇಮಾ, ದುರ್ಗಮ್ಮ, ಶರಣಮ್ಮ ಮುಂತಾದವರು ಇದ್ದರು.