ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಜಿಲ್ಲಾಡಳಿತ ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಬೆಳಗಾವಿ ಮತ್ತು ಪುರಸಭೆ ಬೈಲಹೊಂಗಲ ಸಹಯೋಗದಲ್ಲಿ ಬೈಲಹೊಂಗಲ ನಗರದ ನಂದೆಮ್ಮ ನಗರ, ಹರಳಯ್ಯ ಕಾಲೋನಿ, ಬಸವೇಶ್ವರ ಆಶ್ರಯ ನಗರ ಮತ್ತು ಗಂಗೆ ಗೌರಿ ಮಡ್ಡಿ ಸೇರಿ ಕೊಳಗೇರಿ ಪ್ರದೇಶಗಳ ಒಟ್ಟು 699 ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಿ, ಬೈಲಹೊಂಗಲ ಪುರಸಭೆಯು ನಗರಸಭೆಗೆ ಮೇಲ್ದರ್ಜೆಗೇರಿದ ಪ್ರಯುಕ್ತ ನೂತನ ನಗರಸಭೆ ಕಚೇರಿ ಫಲಕವನ್ನು ಉದ್ಘಾಟಿಸಿ ಮಾತನಾಡಿದರು. ಬೈಲಹೊಂಗಲದಲ್ಲಿ 1000 ಮನೆ ನೀಡಲು ಯೋಜನೆ ಪ್ರಾರಂಭಿಸಿದ್ದು, 780 ಮನೆಗಳು ನಿರ್ಮಾಣಗೊಂಡಿವೆ. ರಾಜ್ಯ ಸರ್ಕಾರದಿಂದ ₹ 7.50 ಲಕ್ಷ ವೆಚ್ಚದ ಮನೆ ನೀಡಲಾಗುತ್ತಿದೆ. ಹಿಂದಿನ ಸಿದ್ದರಾಮಯ್ಯ ಸರ್ಕಾರ 1,70,253 ಮನೆ ನೀಡಿತ್ತು. ಅದರಲ್ಲಿ ಬೈಲಹೊಂಗಲ 1000 ಮನೆ ಇವೆ. ಹಕ್ಕು ಪತ್ರ ವಿತರಿಸುವುದು ಮಹಾಂತೇಶ ಕೌಜಲಗಿ ಅವರ ಕನಸಾಗಿತ್ತು ಅದು ಈಡೇರುತ್ತಿದೆ ಎಂದರು.ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ನಾನು ಮಾತು ಕೊಟ್ಟಂತೆ ಹಕ್ಕು ಪತ್ರ ವಿತರಿಸುತ್ತಿದ್ದೆನೆ. ಬೈಲಹೊಂಗಲದಲ್ಲಿ 1000 ಮನೆ ನಿರ್ಮಿಸಲಾಗುತ್ತಿದೆ. ಕೇಂದ್ರ, ರಾಜ್ಯದ ತಲಾ ₹ 1.5 ಲಕ್ಷ ಅನುದಾನ ಇತ್ತು. ಉಳಿದ ಹಣ ಫಲಾನುಭವಿಗಳು ತುಂಬಬೇಕಾಗಿತ್ತು. ಆದರೆ ಸಚಿವ ಜಮೀರ್ ಅಹ್ಮದ ಅವರ ಪ್ರಯತ್ನದಿಂದ ಸರ್ಕಾರವೇ ಅದನ್ನು ತುಂಬಲು ಕ್ರಮ ಕೈಕೊಂಡಿದೆ. ಇದು ರಾಜ್ಯಾದ್ಯಂತ 68 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಿದೆ. ಸಚಿವರು ನಾನು ಕೇಳಿದ್ದೆಲ್ಲ ಮಂಜೂರಿಸಿದ್ದಾರೆ. ದೇವಸ್ಥಾನ, ಜೈನ ಬಸೀದಿ, ದರ್ಗಾ ಸೇರಿ ಅನೇಕ ಕಾರ್ಯಕ್ಕೆ ₹ 5 ಕೋಟಿ ನೀಡಿದ್ದಾರೆ ಎಂದು ತಿಳಿಸಿದರು.ಬೆಳಗಾವಿ ಉತ್ತರ ಶಾಸಕ ರಾಜು ಸೇಠ ಮಾತನಾಡಿದರು. ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಟಿ.ರಾಘವೇಂದ್ರ, ಎಸಿ ಪ್ರವೀಣ ಜೈನ್, ಪುರಸಭೆ ಆಡಳಿತಾಧಿಕಾರಿ, ಡಿವೈಎಸ್ಪಿ, ತಹಸೀಲ್ದಾರ್ ಹಣಮಂತ ಶಿರಹಟ್ಟಿ, ತಾಲೂಕಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮೀತಿ ಅಧ್ಯಕ್ಷ ಡಾ.ಮಹಾಂತೇಶ ಕಳ್ಳಿಬಡ್ಡಿ, ಇಇ ಪ್ರತೀಕ ದಳವಾಯಿ, ಅಭಿಯಂತರ ರಾಜಶೇಖರ ಚವ್ಹಾಣ, ಪುರಸಭೆ ಮಾಜಿ ಅಧ್ಯಕ್ಷ ವಿಜಯ ಬೋಳಣ್ಣವರ, ಬಾಬು ಕುಡಸೋಮಣ್ಣವರ, ಬಸವರಾಜ ಜನ್ಮಟ್ಟಿ, ಮಾಜಿ ಸದಸ್ಯರಾದ ಶಿವಬಸಪ್ಪ ಕುಡಸೋಮಣ್ಣವರ, ಕುತುಬುದ್ದೀನ ಮುಲ್ಲಾ, ಅರ್ಜುನ ಕಲಕುಟಕರ, ಉಳವಪ್ಪ ಬಡ್ಡಿಮನಿ, ಬುಡ್ಡೇಸಾಬ ಶಿರಸಂಗಿ, ಗುರಪ್ಪ ಮೆಟಗುಡ್ಡ, ಅಂಬಿಕಾ ಕೊಟಬಾಗಿ ಹಲವರು ಹಾಜರಿದ್ದರು.ಮುಖ್ಯಾಧಿಕಾರಿ ವೀರೇಶ ಹಸಬಿ ಸ್ವಾಗತಿಸಿದರು. ಶಿಕ್ಷಕಿ ಮಹಾದೇವಿ ಅಂಗಡಿ ನಿರೂಪಿಸಿದರು. ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿದ ಪ್ರಯುಕ್ತ ಸಚಿವ ಜಮೀರ್ ಅಹಮದ್ ನೂತನ ನಗರಸಭೆ ಕಚೇರಿ ಫಲಕ ಉದ್ಘಾಟಿಸಿದರು