- ದಾವಣಗೆರೆ ಮಾತೃತ್ವ ಆರೈಕೆಗೆ ಹೊಸ ಅಧ್ಯಾಯ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಿಡ್ ವೈಫರಿ ಲೆಡ್ ಕೇರ್ ಯೂನಿಟ್ (ಎಂಎಲ್‌ಸಿಯು) ಅನ್ನು ನಗರದ ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ಉದ್ಘಾಟನೆ ಮೂಲಕ ಜಿಲ್ಲೆಯಲ್ಲಿ ಮಾತೃತ್ವ ಆರೈಕೆಗೆ ಹೊಸ ಅಧ್ಯಾಯ ಬರೆಯಲಾಗಿದೆ.

ಕರ್ನಾಟಕ ಸರ್ಕಾರ ಹಾಗೂ ಬೆಂಗಳೂರಿನ ಆಸ್ಟ್ರಿಕಾ ಫೌಂಡೇಷನ್ ಸಹಯೋಗದಲ್ಲಿ ಜಾರಿಗೊಳ್ಳುತ್ತಿರುವ ಮಹತ್ವದ ಮಾತೃತ್ವ ಆರೈಕೆ ಉಪ ಕ್ರಮವಾದ ಮಿಡ್ ವೈಫರಿ ಲೆಕ್ ಡೇರ್ ಯುನಿಟ್‌ ಅನ್ನು ಜಿಲ್ಲಾ ಆಸ್ಪತ್ರೆಯ ಅಧೀಕ್ಷಕ, ಜಿಲ್ಲಾ ಸರ್ಜನ್‌ ಡಾ.ನಾಗೇಂದ್ರಪ್ಪ ಉದ್ಘಾಟಿಸಿದರು.

ಡಾ.ನಾಗೇಂದ್ರಪ್ಪ ಮಾತನಾಡಿ, ಮಾತೃತ್ವ ಆರೋಗ್ಯ ಸೇವೆಯಲ್ಲಿ ಗುಣಮಟ್ಟದ ಆರೈಕೆ, ಗೌರವಾನ್ವಿತ ಪ್ರಸವ ಅನುಭವ ಮತ್ತು ಸುರಕ್ಷಿತ ಸಾಮಾನ್ಯ ಹೆರಿಗೆಗಳಿಗೆ ಈ ಘಟಕ ವಿಶೇಷ ಮಹತ್ವ ಹೊಂದಿದೆ. ಮಿಡ್‌ವೈಫರಿ ಮಾದರಿ ಸೇವೆಯಿಂದ ಗರ್ಭಿಣಿಯರಿಗೆ ಸಮಗ್ರ ಆರೈಕೆ ಲಭ್ಯವಾಗಲಿದೆ ಎಂದರು.


ಕರ್ನಾಟಕದಲ್ಲಿ ಮಾತೃ ಆರೋಗ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ– ಮಾತೃ ಆರೋಗ್ಯ ವಿಭಾಗವು ಆಸ್ಟ್ರಿಕಾ ಫೌಂಡೇಶನ್ ಸಹಯೋಗದೊಂದಿಗೆ ನರ್ಸ್ ಪ್ರಾಕ್ಟೀಷನರ್ ಮಿಡ್‌ವೈಫರಿ (ಎನ್‌ಪಿಎಂ) ತರಬೇತಿ ಕಾರ್ಯಕ್ರಮ ಜಾರಿಗೆ ತರಲು ಒಪ್ಪಂದ ಮಾಡಿಕೊಂಡಿದೆ. ಅದರಂತೆ ತರಬೇತಿ ನೀಡಿ, ಪರಿಣಿತ ಮಿಡ್‌ ವೈಫರ್‌ ರೂಪಿಸಿ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸುರಕ್ಷಿತ ಮತ್ತು ಸಾಮಾನ್ಯ ಹೆರಿಗೆಗೆ ಅನುಕೂಲಕರ ವಾತಾವರಣ ಕಲ್ಪಿಸುವ ಗುರಿ ಇದೆ ಎಂದು ತಿಳಿಸಿದರು.

ಈಗಾಗಲೇ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ 100ಕ್ಕೂ ಅಧಿಕ ಸಾಮಾನ್ಯ ಹೆರಿಗೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಗರ್ಭಿಣಿಯರ ಆರೈಕೆ, ಪ್ರಸವಪೂರ್ವ ಮಾರ್ಗದರ್ಶನದಿಂದ ಸಾಮಾನ್ಯ ಹೆರಿಗೆಗೆ ಉತ್ತೇಜನ ನೀಡಲಾಗುತ್ತಿದೆ. ಎನ್‌ಪಿಎಂಗಳು ಹಾಗೂ ಹೆರಿಗೆ ವಿಭಾಗದ ವೈದ್ಯರು ಸಮನ್ವಯಿತ ಕಾರ್ಯಕ್ಷಮತೆ ಪ್ರಶಂಸನೀಯ. ಸಾರ್ವಜನಿಕರು ಈ ಸೇವೆಯ ಸಂಪೂರ್ಣ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.

ಜಿಲ್ಲಾಸ್ಪತ್ರೆಯ ಡಾ.ರಮೇಶ, ಒಬಿಜಿ ವಿಭಾಗ ಮುಖ್ಯಸ್ಥೆ ಡಾ.ನಾಗವೇಣಿ, ಸರ್ಜನ್ ಡಾ.ರವೀಂದ್ರ, ನರ್ಸಿಂಗ್ ಅಧಿಕಾರಿ ತ್ರಿವೇಣಿ, ನರ್ಸಿಂಗ್ ಮೆಂಟರ್ ವರಮಹಾಲಕ್ಷ್ಮೀ, ಆರ್‌ಎಂಒ ನಾಗವೇಣಿ, ಹಿರಿಯ ನರ್ಸಿಂಗ್ ಅಧಿಕಾರಿ ಜಯಮ್ಮ, ಎನ್‌ಎಸ್‌ಯು ಇನ್‌ಚಾರ್ಜ್ ದೇವಕಿ, ಅನು, ಮಂಜಮ್ಮ, ಸಂಗಮೇಶ, ಐವರು ಎನ್‌ಪಿಎಂಗಳಾದ ಬಿ.ಸಿ. ವನಿತಾ, ಸರಿತಾ, ಜಿ.ಬಿ.ಸುಮ, ಎಸ್.ಕವಿತಾ, ನೇತ್ರಾವತಿ, ಶುಶ್ರೂಷಕರು, ಒಬಿವಿ ವಿಭಾಗದ ವೈದ್ಯರು, ಸಿಬ್ಬಂದಿ ಆಸ್ಟ್ರಿಕಾ ಫೌಂಡೇಷನ್ ಸಿಬ್ಬಂದಿ ಇದ್ದರು.

- - -

(* -ಫೋಟೋ ಇದೆ.)

-13ಕೆಡಿವಿಜಿ10.ಜೆಪಿಜಿ:

ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಮಿಡ್ ವೈಫರಿ ಲೆಡ್ ಕೇರ್ ಯೂನಿಟ್ (ಎಂಎಲ್‌ಸಿಯು) ಅನ್ನು ಆಸ್ಪತ್ರೆ ಅಧೀಕ್ಷಕ, ಜಿಲ್ಲಾ ಸರ್ಜನ್ ಡಾ.ನಾಗೇಂದ್ರಪ್ಪ ಉದ್ಘಾಟಿಸಿದರು.