ಪುರಾತನ ಬಾಣಿಕಟ್ಟೆಯ ಜೀರ್ಣೋದ್ಧಾರದ ವಿಶೇಷ ಪೂಜೆ

KannadaprabhaNewsNetwork |  
Published : Dec 14, 2025, 04:00 AM IST
ಸವದತ್ತಿಯ ಗ್ರಾಮದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಅಂಬೇಡ್ಕರ ನಗರದಲ್ಲಿನ ಮಾತಂಗಿ ದೇವಸ್ಥಾನದ ಬಾನಿಕಟ್ಟೆಗೆ ಶುಕ್ರವಾರದಂದು ರೈತರು ಮತ್ತು ಸಮಾಜ ಬಾಂಧವರಿAದ ಪೂಜೆ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಸವದತ್ತಿ ೪೪ ವರ್ಷಗಳ ನಂತರ ಮುಂಬರುವ ಮೇ.೪ರಂದು ಹಮ್ಮಿಕೊಂಡಿರುವ ಗ್ರಾಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದಲ್ಲಿ ಎಲ್ಲ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಧಾರ್ಮಿಕ ವಿಧಿವಿಧಾನದಂತೆ ಅಂಬೇಡ್ಕರ ನಗರದ ಮಾತಂಗಿ ದೇವಸ್ಥಾನದ ಪುರಾತನ ಬಾಣಿಕಟ್ಟೆಯನ್ನು ಜೀರ್ಣೋದ್ದಾರಗೊಳಿಸಲಾಗಿದ್ದು, ಶುಕ್ರವಾರದಂದು ಪೂಜಾ ಕಾರ್ಯಕ್ರಮವನ್ನು ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಸವದತ್ತಿ

೪೪ ವರ್ಷಗಳ ನಂತರ ಮುಂಬರುವ ಮೇ.೪ರಂದು ಹಮ್ಮಿಕೊಂಡಿರುವ ಗ್ರಾಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದಲ್ಲಿ ಎಲ್ಲ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಧಾರ್ಮಿಕ ವಿಧಿವಿಧಾನದಂತೆ ಅಂಬೇಡ್ಕರ ನಗರದ ಮಾತಂಗಿ ದೇವಸ್ಥಾನದ ಪುರಾತನ ಬಾಣಿಕಟ್ಟೆಯನ್ನು ಜೀರ್ಣೋದ್ದಾರಗೊಳಿಸಲಾಗಿದ್ದು, ಶುಕ್ರವಾರದಂದು ಪೂಜಾ ಕಾರ್ಯಕ್ರಮವನ್ನು ನಡೆಸಲಾಯಿತು.ಬಾಣಿ ಕಟ್ಟೆಯನ್ನು ನಿರ್ಮಿಸಿದ ಅಂಬೇಡ್ಕರ ನಗರದ ಹಿರಿಯರೆಲ್ಲಾ ಸೇರಿಕೊಂಡು ವಿವಿಧ ವಾದ್ಯಗಳೊಂದಿಗೆ ಬಂಡಿ ಓಣಿಯ ಬೆಟಸೂರಮಠಕ್ಕೆ ಆಗಮಿಸಿ ಗ್ರಾಮದೇವಿಯ ಜಾತ್ರಾ ಮಹೋತ್ಸವದ ಪ್ರಮುಖ ೧೬ ಜನ ರೈತರನ್ನು ಆಹ್ವಾನಿಸಿ ಬಾಣಿಕಟ್ಟೆಯ ಪೂಜಾ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಲಾಯಿತು. ಬಾನಿಕಟ್ಟೆಗೆ ೧೬ ಜನ ರೈತ ಕುಟುಂಬದವರಿಂದ ವಿಶೇಷವಾದ ಪೂಜೆ ಸಲ್ಲಿಸಿ ಅವರೆಲ್ಲರನ್ನು ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಸನ್ಮಾನಿಸಿ ಗೌರವಿಸುವದರ ಜೊತೆಗೆ ಗ್ರಾಮ ದೇವಿಯ ಜಾತ್ರೆಯು ಸಾಂಪ್ರದಾಯಕ ಪದ್ದತಿಯಂತೆ ಯಶಸ್ವಿಯಾಗಿ ನಡೆಯಲಿ ಎಂದು ದೇವಿಯನ್ನು ಪ್ರಾರ್ಥಿಸಿ ಮಹಾಪ್ರಸಾದ ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ದೇವಿಯ ಜಾತ್ರಾ ಮಹೋತ್ಸವದ ಸಮಿತಿಯ ಅಧ್ಯಕ್ಷ ವಿರುಪಾಕ್ಷ ಮಾಮನಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಅಂಬೇಡ್ಕರ ನಗರದ ಎಲ್ಲ ಹಿರಿಯರು, ಮಹಿಳೆಯರು ಮತ್ತು ಯುವಕರು ಸೇರಿಕೊಂಡು ಗ್ರಾಮದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲು ಬಾಣಿಕಟ್ಟೆಯನ್ನು ನಿರ್ಮಿಸಿರುವುದು ಅತ್ಯಂತ ಸಂತಸ ಮೂಡಿಸಿದೆ. ಪ್ರಾರಂಭಿಕವಾಗಿ ಜಾತ್ರೆಗೂ ಮುನ್ನ ಏನೆಲ್ಲಾ ತಯಾರಿ ಮಾಡಬೇಕೆಂಬುದನ್ನು ಈ ಭಾಗದ ಜನರು ಅದ್ದೂರಿಯಾಗಿ ಹಮ್ಮಿಕದ್ಡು ಜಾತ್ರಾ ಮಹೋತ್ಸವ ಪ್ರಾರಂಭಕ್ಕೆ ಸಕಲ ಅನುಕೂಲತೆ ಒದಗಿಸಿರುವುದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸವದತ್ತಿಯ ಗ್ರಾಮದೇವಿಯ ಜಾತ್ರೆಗೆ ಎಲ್ಲ ಸಮುದಾಯದ ಮತ್ತು ಧರ್ಮದವರನ್ನು ಸೇರಿಸಿಕೊಂಡು ಅವರೆಲ್ಲರ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಅತ್ಯಂತ ವಿಜೃಂಭಣೆಯಿಂದ ಜಾತ್ರೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.ಜಾತ್ರೆಯ ಸಿದ್ಧತೆ ಕುರಿತು ಅಡಿವೆಪ್ಪ ಬೀಳಗಿ ಮಾತನಾಡಿದರು. ಈ ಸಂದರ್ಭದಲ್ಲಿ ಅಶ್ವತ್ಥ್‌ ವೈದ್ಯ, ಎಲ್.ಆರ್.ಕುಲಕರ್ಣಿ, ಸುಭಾಸ ರಜಪೂತ, ಶಿವಾನಂದ ಹೂಗಾರ, ಅಲ್ಲಮಪ್ರಭು ಪ್ರಭುನವರ, ಪುಂಡಲೀಕ ಭೀ.ಬಾಳೋಜಿ, ರಾಜಶೇಖರ ಕಾರದಗಿ, ಭರಮಪ್ಪ ಅಣ್ಣಿಗೇರಿ, ಬಿ.ಎನ್.ಪ್ರಭುನವರ, ವೈ.ವೈ.ಕಾಳಪ್ಪನವರ, ವಿರುಪಾಕ್ಷಪ್ಪ ಹೆರಕಲ್ಲ, ಅಶೋಕ ಹೊಂಗಲ, ಶಂಕರ ತುಪ್ಪದ, ಅಜ್ಜಪ್ಪ ಕೊಣ್ಣೂರ, ಮಹಾದೇವ ದೊಡ್ಡಹುಬ್ಬಳ್ಳಿ, ಸತ್ಯೆಪ್ಪ ಸೋಮನ್ನವರ, ನಿಂಗಪ್ಪ ಮೊರಬದ, ಗದಿಗೆಪ್ಪ ದಾನಗೊಂಡ, ಜೀವಪ್ಪ ಮಜ್ಜಗಿ, ಮಲ್ಲಿಕಾರ್ಜುನ ಹನಸಿ, ಚನಬಸಪ್ಪ ನವಲಗುಂದ, ಸಂತೋಷ ಮುತಗೊಂಡ, ಅಂಬೇಡ್ಕರ ನಗರದ ಪುಂಡಲೀಕ ಮಾದರ, ಸಾಬಣ್ಣ ಜಂಬುದೀಪ, ದುರ್ಗಪ್ಪ ಜಂಬುದೀಪ, ಯಲ್ಲಪ್ಪ ಜಂಬುದೀಪ, ಫಕ್ಕಿರಪ್ಪ ಮಾದರ, ವಾಸು ಜಂಬುದೀಪ, ರುದ್ರಪ್ಪ ಚಲವಾದಿ, ಚಂದ್ರು ಹಿರೇಕೆಂಚಮ್ಮನವರ, ಸುಭಾಸ ಜಂಬುದೀಪ, ವಸಂತ ಹಿರೇಮನಿ, ಮಾರುತಿ ಹಿರೇಕೆಂಚಮ್ಮನವರ, ಹನಮಂತ ಖ್ಯಾತನ್ನವರ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ