ಕಲಬರುಗಿ ರೊಟ್ಟಿಗೆ ಸಹಕಾರ ಸಂಘ ಹುಟ್ಟಿದ್ಹೇಗೆ?

KannadaprabhaNewsNetwork |  
Published : Jun 30, 2025, 12:34 AM ISTUpdated : Jun 30, 2025, 11:01 AM IST
ಫೋಟೋ- ಜೋಳದ ರೊಟ್ಟಿ 2ಕಲಬುರಗಿ ಜೋಳದ ರೊಟ್ಟಿ | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿಯವರ ಭಾನುವಾರದ ಮನ್‌ ಕಿ ಬಾತ್‌ನಲ್ಲಿ ಕಲಬುರಗಿ ಖಡಕ್‌ ಜೋಳದ ರೊಟ್ಟಿ ವಿಚಾರ ಪ್ರಸ್ತಾಪವಾಗಿದ್ದು, ಈ ಭಾಗದಲ್ಲಿ ಇದು ಭಾರಿ ಸದ್ದು ಮಾಡಿದೆ.

 ಕಲಬುರಗಿ :  ಪ್ರಧಾನಿ ನರೇಂದ್ರ ಮೋದಿಯವರ ಭಾನುವಾರದ ಮನ್‌ ಕಿ ಬಾತ್‌ನಲ್ಲಿ ಕಲಬುರಗಿ ಖಡಕ್‌ ಜೋಳದ ರೊಟ್ಟಿ ವಿಚಾರ ಪ್ರಸ್ತಾಪವಾಗಿದ್ದು, ಈ ಭಾಗದಲ್ಲಿ ಇದು ಭಾರಿ ಸದ್ದು ಮಾಡಿದೆ.

ಕಲಬುರಗಿ ರೊಟ್ಟಿ ಉತ್ಪಾದಕರ ಸಂಘವು ಕಲಬುರಗಿ ಜಿಲ್ಲೆಯಲ್ಲಿ ರೊಟ್ಟಿ ತಯಾರಿಸುವ ಮಹಿಳಾ ಸ್ವ-ಸಹಾಯ ಗುಂಪುಗಳನ್ನು ಸಂಘಟಿಸಿ, ರೊಟ್ಟಿ ಉತ್ಪಾದನೆ ಮತ್ತು ಮಾರಾಟದಲ್ಲಿ ತೊಡಗಿರುವ ಒಂದು ಸಹಕಾರಿ ಸಂಘವಾಗಿದೆ. ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಒಂದೂವರೆ ವರ್ಷದ ಹಿಂದೆ ಪ್ರಾರಂಭವಾದ ಈ ಯೋಜನೆ, ನೂರಾರು ಮಹಿಳೆಯರನ್ನು ಆತ್ಮವಿಶ್ವಾಸದ ಉದ್ಯಮಿಗಳನ್ನಾಗಿ ಮಾಡಿದೆ. ಅವರ ಜೀವನಕ್ಕೆ ಬೆನ್ನೆಲುಬಾಗಿ ನಿಂತಿದೆ.

ಇಲ್ಲಿನ ಡಿಸಿ ಫೌಜಿಯಾ ತರನ್ನುಮ್‌ ಅವರ ಶ್ರಮ ಹಾಗೂ ಪರಿಕಲ್ಪನೆಯಿಂದ ಇಲ್ಲಿನ ಮುಖ್ಯ ಆಹಾರವಾಗಿರುವ ಜೋಳದ ರೊಟ್ಟಿಗೊಂದು ಬ್ಯ್ರಾಂಡಿಂಗ್‌ ಮಾಡಲು ಅವಕಾಶ ಸಿಕ್ಕಿದೆ. ಈ ರೊಟ್ಟಿ ಉತ್ಪಾದಕರ ಸಂಘ ಸುಮಾರು 150 ಮಹಿಳಾ ಸ್ವ-ಸಹಾಯ ಗುಂಪುಗಳನ್ನು ಒಳಗೊಂಡಿದ್ದು, ಕಲಬುರಗಿ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ರೊಟ್ಟಿಗಳನ್ನು ತಯಾರಿಸಿ ಮಾರಾಟ ಮಾಡುತ್ತದೆ. ಕಲಬುರಗಿ ರೊಟ್ಟಿ ಉತ್ಪಾದಕರ ಸಹಕಾರ ಸಂಘವು ಪ್ರತಿದಿನ ಸುಮಾರು 3,000 ರೊಟ್ಟಿಗಳನ್ನು ಮಾರಾಟ ಮಾಡುತ್ತದೆ. ಜೊತೆಗೆ, ಚಟ್ನಿಯನ್ನು ಸಹ ನೀಡುತ್ತದೆ.

ಈ ಸಂಘ ಮಹಿಳೆಯರಿಗೆ ರೊಟ್ಟಿ ತಯಾರಿಸುವ ಯಂತ್ರಗಳನ್ನು ಒದಗಿಸುವುದು, ಪ್ಯಾಕಿಂಗ್ ಮತ್ತು ಸಾರಿಗೆ ವ್ಯವಸ್ಥೆಗಳನ್ನು ಮಾಡುವುದು ಮುಂತಾದ ಸೌಲಭ್ಯಗಳನ್ನು ಒದಗಿಸುತ್ತದೆ. ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ, ರೊಟ್ಟಿ ತಯಾರಿಸಲಾಗುತ್ತದೆ.ನಿತ್ಯ 25 ಸಾವಿರ ರೊಟ್ಟಿ ಬೇಡಿಕೆ:

ದೊಡ್ಡ ಶಹರಗಳಿಂದ ಹಾಗೂ ಆನ್‌ಲೈನ್‌ನಲ್ಲಿ ನಿತ್ಯ 25 ಸಾವಿರ ರೊಟ್ಟಿಗೆ ಬೇಡಿಕೆ ಇದೆ. 5 ರುಪಾಯಿಗೆ ಸ್ವಸಹಾಯ ಸಂಘದಿಂದ ಖರೀದಿಸುವ ರೊಟ್ಟಿಗೆ 7 ರು ನಂತೆ ಉತ್ಪಾದಕರಿಗೆ ನೀಡಲಾಗುತ್ತದೆ. ಅವರು 10 ರೊಟ್ಟಿಗಳ ಪೊಟ್ಟಣ ಮಾಡಿ 110 ರು. ಗೆ ಮಾರುತ್ತಾರೆ. ಝೋಮ್ಯಾಟೋ, ಸ್ವಿಗ್ಗಿಯಲ್ಲಿಯೂ ಕಲಬುರಗಿ ರೊಟ್ಟಿ ಲಭ್ಯ. ಅಮೆಜಾನ್‌ ಆನ್‌ಲೈನ್‌ ಮಾರುಕಟ್ಟೆಯಲ್ಲಿಯೂ ರೊಟ್ಟಿ ನೋಂದಣಿಯಾಗಿದೆ. ಬೆಂಗಳೂರಲ್ಲಿ ಭಾರಿ ಬೇಡಿಕೆ ಇರೋದರಿಂದ ಅಲ್ಲೊಂದು ಕೌಂಟರ್‌ ತೆರೆಯಲಾಗಿದೆ. ಕಲಬುರಗಿ ರೊಟ್ಟಿ ಹೆಸರಲ್ಲೇ ಪ್ರತ್ಯೇಕ ವೆಬ್‌ಸೈಟ್‌ (www.kalaburagirotti.com) ಕೂಡಾ ರಚನೆಯಾಗಿದೆ. ಆನ್‌ಲೈನ್‌ ಕೌಂಟರ್‌ನಲ್ಲಿ ಮಾರುಕಟ್ಟೆ ಒದಗಿಸುವಲ್ಲಿ ಜಿಲ್ಲಾಡಳಿತ ಯಶ ಕಂಡಿದ್ದರಿಂದ ಬೆಂಗಳೂರು, ದೆಹಲಿ, ಮುಂಬೈ, ಹೈದ್ರಾಬಾದ್‌, ತೆಲಂಗಾಣ, ಆಂಧ್ರ, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಪ್ರಮುಖ ನಗರಗಳಲ್ಲಿ ಕಲಬುರಗಿ ರೊಟ್ಟಿ ಮೋಡಿ ಮಾಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ