ಮಾಜಿ ಸಚಿವ ಎಚ್‌ಎಸ್‌ಎಂ ಕೆಲಸ ಶಾಶ್ವತ: ಶಾಸಕ ಗಣೇಶ್‌

KannadaprabhaNewsNetwork |  
Published : Aug 06, 2026, 01:45 AM IST
ಎಚ್‌ಎಸ್‌ಎಂ ಕಾಲದ | Kannada Prabha

ಸಾರಾಂಶ

ಮಾಜಿ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ಅವರ ಜೀವಿತಾವಧಿಯಲ್ಲಿ ಜಿಲ್ಲೆ ಹಾಗೂ ಕ್ಷೇತ್ರಕ್ಕೆ ಮಾಡಿದ ಜನಪರ ಕೆಲಸಗಳು ಇಂದಿಗೂ ಶಾಶ್ವತವಾಗಿ ಉಳಿದಿವೆ ಎಂದು ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಹೇಳಿದರು.

ಗುಂಡ್ಲುಪೇಟೆಯಲ್ಲಿ ಮಾಜಿ ಸಚಿವ, ದಿ। ಎಚ್‌ಎಸ್‌ ಮಹದೇವ ಪ್ರಸಾದ್‌ ಜಯಂತಿ ಆಚರಣೆ । ಮಕ್ಕಳಿಗೆ ನೋಟ್‌ ಪುಸ್ತಕ, ಬ್ಯಾಗ್‌ ವಿತರಣೆ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಮಾಜಿ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ಅವರ ಜೀವಿತಾವಧಿಯಲ್ಲಿ ಜಿಲ್ಲೆ ಹಾಗೂ ಕ್ಷೇತ್ರಕ್ಕೆ ಮಾಡಿದ ಜನಪರ ಕೆಲಸಗಳು ಇಂದಿಗೂ ಶಾಶ್ವತವಾಗಿ ಉಳಿದಿವೆ ಎಂದು ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಹೇಳಿದರು.ಪಟ್ಟಣದಲ್ಲಿ ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಅಭಿಮಾನಿಗಳು ಮಾಜಿ ಸಚಿವ ದಿ। ಎಚ್.ಎಸ್. ಮಹದೇವ ಪ್ರಸಾದ್‌ರ ಹುಟ್ಟು ದಿನದ ಅಂಗವಾಗಿ ಪಟ್ಟಣದ ಎಂಸಿ ಡಿಸಿಸಿ ಸರ್ಕಲ್‌ ಬಳಿ ಅಭಿಮಾನಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹದೇವ ಪ್ರಸಾದ್‌ರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ, ಅಭಿಮಾನಿಗಳಿಗೆ ಉಪಹಾರ ವಿತರಿಸಿದ ಬಳಿಕ ಮಾತನಾಡಿದರು.ಮಹದೇವ ಪ್ರಸಾದ್‌ರು ಕ್ಷೇತ್ರ ಹಾಗೂ ಜಿಲ್ಲೆಯ ಜನರಿಗಾಗಿ ಮಾಡಿದ ಕೆಲಸಗಳೇ ಪ್ರಸ್ತುತ ಅವರನ್ನು ಜೀವಂತವಾಗಿಟ್ಟಿವೆ. ಇಂದು ಸಹ ಮಹದೇವ್ ಪ್ರಸಾದ್‌ರನ್ನು ಸಾಕಷ್ಟು ಜನ ಜ್ಞಾಪಿಸಿಕೊಳ್ಳುತ್ತಿದ್ದಾರೆ ಎಂದರು.

ಈ ಸಮಯದಲ್ಲಿ ಮಹದೇವ ಪ್ರಸಾದ್‌ ಹಾಗೂ ಗಣೇಶ್‌ ಪ್ರಸಾದ್‌ ಅವರ ಅಭಿಮಾನಿಗಳು, ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.---೫ಜಿಪಿಟಿ೪ಗುಂಡ್ಲುಪೇಟೆಯಲ್ಲಿ ದಿವಂಗತ ಎಚ್.ಎಸ್.ಮಹದೇವ ಪ್ರಸಾದ್‌ ಜನ್ಮ ದಿನದಂದು ಅಭಿಮಾನಿಗಳಿಗೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಉಪಹಾರ ಬಡಿಸಿದರು.---

ಬ್ಯಾಗ್‌, ಪುಸ್ತಕ ವಿತರಣೆಗುಂಡ್ಲುಪೇಟೆ: ಮಾಜಿ ಸಚಿವ ದಿ। ಎಚ್.ಎಸ್. ಮಹದೇವ ಪ್ರಸಾದ್‌ ಜನ್ಮ ದಿನದ ಅಂಗವಾಗಿ ತಾಲೂಕಿನ ಕುರುಬರಹುಂಡಿ ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್‌ ಹಾಗೂ ನೋಟ್‌ ಪುಸ್ತಕಗಳನ್ನು ಕೋಟೆಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ. ಮಹದೇವಸ್ವಾಮಿ ವಿತರಿಸಿದರು.ವಿತರಿಸಿದ ಬಳಿಕ ಮಾತನಾಡಿದ ಅವರು, ಮಹದೇವ ಪ್ರಸಾದ್‌ ಸಾಧನೆ ಹಾಗೂ ಅವರು ಜಿಲ್ಲೆ ಹಾಗೂ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಎಂದರು.ಈ ಸಮಯದಲ್ಲಿ ಗ್ರಾಪಂ ಮಾಜಿ ಸದಸ್ಯ ಕೆ.ಜಿ. ಮಹೇಶ್, ಗೌಡಿಕೆ ಚನ್ನಬಸಪ್ಪ, ಮಾಜಿ ಗೌಡಿಕೆ ಕೆ.ಪಿ. ಕುಮಾರ್‌, ಪ್ಯಾಕ್ಸ್‌ ನಿರ್ದೇಶಕ ಶೇಖರ್‌, ಎಸ್‌ಡಿಎಂಸಿ ಅಧ್ಯಕ್ಷ ಕೆ.ಎಸ್. ಮಹೇಶ್, ಮುಖಂಡರಾದ ಪುಟ್ಟಸ್ವಾಮಿ, ನಿಂಗರಾಜು, ಕೆ.ಜಿ. ರಾಜಶೇಖರ್‌, ರಾಮಲಿಂಗಪ್ಪ, ಡಿ. ಮಹೇಶ್, ಶಿಕ್ಷಕ ವೆಂಕಟೇಶ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

---೫ಜಿಪಿಟಿ೫ಗುಂಡ್ಲುಪೇಟೆ ತಾಲೂಕಿನ ಕುರುಬರಹುಂಡಿ ಸರ್ಕಾರಿ ಶಾಲಾ ಮಕ್ಕಳಿಗೆ ಫ್ಯಾಕ್ಸ್‌ ಅಧ್ಯಕ್ಷ ಕೆ.ಎಂ.ಮಹದೇವಪ್ರಸಾದ್‌ ಬ್ಯಾಗ್‌ ವಿತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಬ್ಬಾರೆಡ್ಡಿಗೆ ಸಿಗದ ಸಚಿವ ಸ್ಥಾನ: ಗುಡಿಬಂಡೆ ಬಂದ್ ಯಶಸ್ವಿ
ಪ್ರಮುಖ 4 ರೈಲ್ವೆ ಬೇಡಿಕೆ ಈಡೇರಿಸಲು ಕೇಂದ್ರಕ್ಕೆ ಸಂಸದೆ ಮನವಿ