ಶಿವಾನಂದ ಗೊಂಬಿ
ಎಪಿಎಂಸಿಯು ಬರೋಬ್ಬರಿ 434 ಎಕರೆ ಪ್ರದೇಶದಲ್ಲಿ ವಿಸ್ತರಿಸಿದೆ. ಬರೋಬ್ಬರಿ 1200 ಖಾಸಗಿ ಒಡೆತನದಲ್ಲಿರುವ ಮಳಿಗೆಗಳಿದ್ದರೆ, 43 ಎಪಿಎಂಸಿ ಆಡಳಿತಕ್ಕೊಳಪಟ್ಟಿವೆ. ಪ್ರತಿನಿತ್ಯ ಸಾವಿರಾರು ಜನ ಬಂದು ಹೋಗುತ್ತಾರೆ. ಬೆಳಗಿನಜಾವ ಶುರುವಾಗುವ ತರಕಾರಿ ಮಾರುಕಟ್ಟೆಗೆ ಸುತ್ತಮುತ್ತಲಿನ ಜಿಲ್ಲೆಗಳಿಂದ ರಾತ್ರಿಯೇ ಬಂದಿರುತ್ತಾರೆ ರೈತರು.
ಇನ್ನು ಇತ್ತ ತರಕಾರಿ ಹೋಲ್‌ಸೆಲ್ ಮಾರುಕಟ್ಟೆ ಮುಗಿಯುತ್ತಿದ್ದಂತೆ, ಅಲ್ಲೇ ಚಿಲ್ಲರೆ ವ್ಯಾಪಾರವೂ ಶುರುವಾಗುತ್ತದೆ. ಪಕ್ಕದಲ್ಲೇ ಆಲೂಗಡ್ಡೆ, ಒಣಮೆಣಸಿನಕಾಯಿ, ಈರುಳ್ಳಿ, ಕಾಳು ಕಡಿ ಸೇರಿದಂತೆ ಮತ್ತಿತರರ ಕೃಷಿ ಉತ್ಪನ್ನಗಳ ವಹಿವಾಟುವೂ 10ರ ನಂತರ ಶುರುವಾಗುತ್ತದೆ. ಇದರೊಂದಿಗೆ ಬೆಳಗ್ಗೆಯೇ ಹೂವು ಹಣ್ಣುಗಳ ಹೋಲ್‌ಸೆಲ್ ಮಾರಾಟ ನಡೆಯುತ್ತದೆ. ಇನ್ನು ವಾರಕ್ಕೊಮ್ಮೆ ಜಾನುವಾರು ಸಂತೆಯೂ ಇರುತ್ತದೆ. ರೈತರು, ಕೃಷಿ ಉತ್ಪನ್ನಗಳನ್ನು ಹೊತ್ತು ತರುವ ಲಾರಿ, ಟೆಂಪೋ, ಟಾಟಾ ಏಸ್, ಟ್ಯ್ರಾಕ್ಟರ್ ಸೇರಿದಂತೆ ನೂರಾರು ವಾಹನಗಳು ಬರುತ್ತಲೇ ಇರುತ್ತವೆ. ಅವುಗಳಲ್ಲಿನ ಡ್ರೈವರ್, ಕ್ಲಿನರ್, ಇನ್ನು ವ್ಯಾಪಾರಕ್ಕೆ ಬರುವ ಚಿಲ್ಲರೆ ವ್ಯಾಪಾರಸ್ಥರು, ಮಧ್ಯವರ್ತಿಗಳು, ವರ್ತಕರು, ಸಾರ್ವಜನಿಕರು ಹೀಗೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನತೆಯ ಆಗಮನ ಇದ್ದೇ ಇರುತ್ತದೆ. ಆದರೆ, ಇವರಿಗೆ ನೈಸರ್ಗಿಕ ಕರೆಗೆ ನಿಸರ್ಗದ ಮೊರೆ ಹೋಗುವುದು ಅನಿವಾರ್ಯವಾಗಿದೆ.ಹಾಗಂತ ಎಪಿಎಂಸಿ ಆಡಳಿತ ಮಂಡಳಿ ಏನೂ ಮಾಡಿಯೇ ಇಲ್ಲ ಅಂತೇನೂ ಇಲ್ಲ. ಬರೋಬ್ಬರಿ 8 ಕಡೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿದೆ. ಹೊರಗುತ್ತಿಗೆ ಸಿಬ್ಬಂದಿಯಿಂದ ಅವುಗಳ ನಿರ್ವಹಣೆಯನ್ನೂ ಮಾಡಲಾಗುತ್ತಿದೆ.
ಹೀಗಾಗಿ ಯಾರಪ್ಪ ಅಲ್ಲಿಗೆ ಹೋಗುತ್ತಾರೆ ಎಂದುಕೊಂಡು ಸಾರ್ವಜನಿಕರೆಲ್ಲರೂ ಬಯಲು ಶೌಚಾಲಯಕ್ಕೆ ಹೋಗುವುದೇ ಜಾಸ್ತಿ. ಹೀಗಾಗಿ ರಾತ್ರಿಯೇ ಬಂದಿರುವ ರೈತರು, ವಿವಿಧ ವಾಹನಗಳ ಸವಾರರು ಬೆಳಗ್ಗೆ ಬಯಲು ಶೌಚಾಲಯಕ್ಕೆ ಹೋಗುತ್ತಿರುವುದು ಕಣ್ಣಿಗೆ ರಾಚುತ್ತದೆ. ಎಲ್ಲಿಯಾದರೂ ಖುಲ್ಲಾ ಜಾಗೆಯಲ್ಲೋ, ಗಿಡಗಂಟೆಗಳು ಬೆಳೆದಿರುವ ಜಾಗೆಗಳು ಬಯಲು ಶೌಚಕ್ಕೆ ಬಳಕೆಯಾಗುತ್ತಿದೆ.
ಕುಡಿಯುವ ನೀರು: ಇನ್ನು ಕುಡಿಯುವ ನೀರಿನ ಸೌಲಭ್ಯವೂ ಅಷ್ಟಕಷ್ಟೆ. ಅಲ್ಲಲ್ಲಿ ಕುಡಿಯುವ ನೀರಿನ ಅರವಟಿಗೆ, ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಿಸಬೇಕು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂಬ ಒತ್ತಾಯ ಕೇಳಿ ಬರುತ್ತದೆ. ಒಟ್ಟಿನಲ್ಲಿ ಎಪಿಎಂಸಿಯಲ್ಲಿ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಸಾರ್ವಜನಿಕರದ್ದು.