ಹುಬ್ಬಳ್ಳಿ ನಾಗರಿಕ ಧ್ವನಿ ಶೀಘ್ರ ಅಸ್ತಿತ್ವಕ್ಕೆ

KannadaprabhaNewsNetwork |  
Published : Nov 19, 2026, 02:00 AM IST
ಹುಬ್ಬಳ್ಳಿ ನಾಗರಿಕ ಧ್ವನಿ ಶೀಘ್ರ ಅಸ್ತಿತ್ವಕ್ಕೆ | Kannada Prabha

ಸಾರಾಂಶ

ಹುಬ್ಬಳ್ಳಿ ನಗರದ ಸಮಗ್ರ ಅಭಿವೃದ್ಧಿ, ಮೂಲಸೌಕರ್ಯಗಳ ಸುಧಾರಣೆ ಹಾಗೂ ನಾಗರಿಕರ ಸಮಸ್ಯೆಗಳಿಗೆ ಧ್ವನಿಯಾಗುವ ಉದ್ದೇಶದಿಂದ ‘ಹುಬ್ಬಳ್ಳಿ ನಾಗರಿಕ ಧ್ವನಿ’ ಟ್ರಸ್ಟ್ ಎಂಬ ಸಂಘಟನೆಯನ್ನು ಹುಟ್ಟು ಹಾಕಲು ನಿರ್ಧರಿಸಲಾಗಿದೆ.

ಹುಬ್ಬಳ್ಳಿ:

ಹುಬ್ಬಳ್ಳಿ ನಗರದ ಸಮಗ್ರ ಅಭಿವೃದ್ಧಿ, ಮೂಲಸೌಕರ್ಯಗಳ ಸುಧಾರಣೆ ಹಾಗೂ ನಾಗರಿಕರ ಸಮಸ್ಯೆಗಳಿಗೆ ಧ್ವನಿಯಾಗುವ ಉದ್ದೇಶದಿಂದ ‘ಹುಬ್ಬಳ್ಳಿ ನಾಗರಿಕ ಧ್ವನಿ’ ಟ್ರಸ್ಟ್ ಎಂಬ ಸಂಘಟನೆಯನ್ನು ಹುಟ್ಟು ಹಾಕಲು ನಿರ್ಧರಿಸಲಾಗಿದೆ.ಮಜೇಥಿಯಾ ಫೌಂಡೇಶನ್ ಕಚೇರಿಯಲ್ಲಿ ಇತ್ತೀಚೆಗೆ ಮಜೇಥಿಯಾ ಫೌಂಡೇಶನ್ ಅಧ್ಯಕ್ಷ ಜಿತೇಂದ್ರ ಮಜೇಥಿಯಾ ಅಧ್ಯಕ್ಷತೆಯಲ್ಲಿ ಉದ್ಯಮಿಗಳಾದ ಡಾ. ಚಿಗರುಪಾಟಿ ವಿ.ಎಸ್.ವಿ. ಪ್ರಸಾದ, ವಿಕ್ರಂ ಶಿರೂರ, ಡಾ. ರವಿ ಕಲಘಟಗಿ, ಡಾ. ಎ.ವಿ. ಕಲಮದಾನಿ ಸಹಿತ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆ, ರಸ್ತೆ ಸಮಸ್ಯೆಗಳು, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಧೂಳಿನ ಮಜ್ಜನ, ಸ್ವಚ್ಛತೆ ಸೇರಿದಂತೆ ಸಾರ್ವಜನಿಕರಿಗೆ ಎದುರಾಗುತ್ತಿರುವ ಹಲವು ಸಮಸ್ಯೆಗಳ ಕುರಿತು ಸಂಬಂಧಪಟ್ಟ ಜಿಲ್ಲಾ, ಪಾಲಿಕೆ ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯುವುದು ಈ ಸಂಘಟನೆಯ ಪ್ರಮುಖ ಉದ್ದೇಶವಾಗಿದೆ.

ಹುಬ್ಬಳ್ಳಿ ನಗರದ ಅಭಿವೃದ್ಧಿಗೆ ಸಂಬಂಧಿಸಿದ ಜನರ ಅಭಿಪ್ರಾಯಗಳು, ಸಲಹೆಗಳು ಮತ್ತು ನ್ಯಾಯಯುತ ಬೇಡಿಕೆಗಳನ್ನು ಒಗ್ಗೂಡಿಸಿ, ಅವುಗಳ ಈಡೇರಿಕೆಗಾಗಿ ಸಂಘಟಿತವಾಗಿ ಧ್ವನಿ ಎತ್ತಲು ಈ ವೇದಿಕೆ ಮುಂದಾಗಿದ್ದು, ‘ನಗರದ ಅಭಿವೃದ್ಧಿ ನಮ್ಮೆಲ್ಲರ ಜವಾಬ್ದಾರಿ, ನಾಗರಿಕರ ಧ್ವನಿಯೇ ಅಭಿವೃದ್ಧಿಯ ಶಕ್ತಿ’ ಎಂಬ ಆಶಯದೊಂದಿಗೆ ಈ ಸಂಘಟನೆ ಮುಂದಿನ ದಿನಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಡಾ. ಆರ್.ಎನ್. ಹಿಟ್ಟಣಗಿ, ರಾಜೇಂದ್ರ ಹರ್ದಿ, ತುಳಜಪ್ಪಾ ಕಲಬುರ್ಗಿ, ಮೋಹನ ವಾಲಿ, ಗಣಪತಿ ಗಂಗೊಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂಚಾಲಕ ಶಾಂತರಾಜ ಪೋಳ ಆರಂಭದಲ್ಲಿ ಸ್ವಾಗತಿಸಿ ಉದ್ದೇಶ ವಿವರಿಸಿದರು. ಶಿವಪ್ರಸಾದ ಬೇಕಲ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶರಾಬಿ ಹೊಳೆಗೆ ಒಳಚರಂಡಿ ನೀರು: ಅಧಿಕಾರಿಗಳ ಪರಿಶೀಲನೆ
ಸಾಂಪ್ರದಾಯಿಕ ದಿರಿಸು ಸಂಸ್ಕೃತಿಯ ಪ್ರತಿಬಿಂಬ: ರಿತಿಕಾ ಕಿಣಿ