ರಾಸುಗಳ ಜಾತ್ರೆಯಲ್ಲಿ ದೇಸಿ ತಳಿಗಳಿಗೆ ಭಾರಿ ಬೇಡಿಕೆ

KannadaprabhaNewsNetwork |  
Published : Jan 19, 2026, 02:00 AM IST
ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಫೆ. ೨೫ ಬ್ರಹ್ಮರಥೋತ್ಸವ | Kannada Prabha

ಸಾರಾಂಶ

ರಾಜ್ಯದ ಮೂಲೆ ಮೂಲೆಗಳಿಂದ ರೈತರ ಆಗಮಿಸಿ ವಿವಿಧ ತಳಿಯ ರಾಸುಗಳ ಖರೀದಿ ಬಲು ಜೋರಾಗಿದ್ದು, ಕಮನೀಯ ಕ್ಷೇತ್ರದಲ್ಲಿ ಕಾಮಧೇನುಗಳ ಜಾತ್ರೆಯ ಹಬ್ಬದ ಅತ್ಯಂತ ಸಡಗರದಿಂದ ನಡೆಯುತ್ತಿದೆ.

ಎಚ್.ಎನ್. ನಾಗರಾಜು ಕನ್ನಡಪ್ರಭ ವಾರ್ತೆ ಕೊರಟಗೆರೆ ಕಲ್ಪತರು ನಾಡಿನ ಇತಿಹಾಸ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಅವರಣದಲ್ಲಿ ಬಾರಿ ರಾಸುಗಳ ಜಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ರೈತರ ಆಗಮಿಸಿ ವಿವಿಧ ತಳಿಯ ರಾಸುಗಳ ಖರೀದಿ ಬಲು ಜೋರಾಗಿದ್ದು, ಕಮನೀಯ ಕ್ಷೇತ್ರದಲ್ಲಿ ಕಾಮಧೇನುಗಳ ಜಾತ್ರೆಯ ಹಬ್ಬದ ಅತ್ಯಂತ ಸಡಗರದಿಂದ ನಡೆಯುತ್ತಿದೆ.

ಪ್ರತಿವರ್ಷದಂತೆ ಸಂಕ್ರಾಂತಿ ಹಬ್ಬದ ಮಾರನೇ ದಿನದಿಂದ ರಾಸುಗಳ ಜಾತ್ರೆ ಪ್ರಾರಂಭವಾಗಿದ್ದು ರಾಸುಗಳನ್ನು ಕೊಳ್ಳಲು ಮಾರಲು ರಾಜ್ಯದ ಬಳ್ಳಾರಿ, ರಾಯಚೂರು, ಹಾಸನ, ಬೀದರ್, ಹಾವೇರಿ, ಸೇರಿದಂತೆ ರಾಜ್ಯದ ಮೂಲೆ ಮೂಲೆಯಿಂದ ರೈತರು ಆಗಮಿಸಿ ಭರ್ಜರಿ ವಹಿವಾಟು ನಡೆಸುತ್ತಿದ್ದಾರೆ.

ಈ ವರ್ಷದ ರಾಸುಗಳ ಜಾತ್ರೆಯಲ್ಲಿ ರಾಸುಗಳನ್ನು ೫೦ ಸಾವಿರದಿಂದ ೫ ಲಕ್ಷದವರೆಗೆ ರೈತರು ಖರೀದಿಸುತ್ತಿದ್ದು, ಹೊಲ ಉಳುಮೆಗೆ ಯೋಗ್ಯವಾದ ರಾಸುಗಳನ್ನು ಹೆಚ್ಚಿನ ಬೇಡಿಕೆಯಿದೆ. ಹಳ್ಳಿಕಾರ್, ಗೀರ್, ಅಮೃತ್ ಮಹಲ್, ರಾಸುಗಳಿಗೆ ಹೆಚ್ಚು ಬೇಡಿಕೆಯಾಗಿದ್ದು, ರೈತರು ರಾಸುಗಳನ್ನು ಕೊಳ್ಳಲು ದೂರದ ಊರಿನಿಂದ ಆಗಮಿಸುತ್ತಿದ್ದಾರೆ. ಕೋಟ್ 1

ನಮ್ಮ ಭಾಗದಲ್ಲಿರುವ ಪುರಾತನ ಕಾಲದ ಕಮನೀಯ ಕ್ಷೇತ್ರ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ರಾಸುಗಳ ಜಾತ್ರೆಗೆ ರಾಜ್ಯ ಸೇರಿದಂತೆ ಹೊರ ರಾಜ್ಯದ ರೈತರು ಪಾಲ್ಗೊಂಡು ರಾಸುಗಳನ್ನು ಮಾರಾಟ ಮಾಡಿ ಖರೀದಿ ಮಾಡುತ್ತಿದ್ದಾರೆ.

- ಭೀಮರಾಜು, ಅಧ್ಯಕ್ಷ ಹಂಚಿಹಳ್ಳಿ ಗ್ರಾಪಂ

ಕೋಟ್‌ 2

ಪುರಾಣ ಪ್ರಸಿದ್ಧವಾದ ಕಮನೀಯ ಕ್ಷೇತ್ರದಲ್ಲಿ ತನ್ನದೇ ಆದ ಶಕ್ತಿಶಾಲಿ ಆಂಜನೇಯ ನೆಲೆಸಿದ್ದು, ಇಲ್ಲಿಗೆ ಬರುವ ಭಕ್ತರ ಕಷ್ಟಗಳನ್ನ ಈಡೇರಿಸುವ ಶಕ್ತಿ ಈ ಹನುಮನಿಗೆ ಇದ್ದು, ಜ.೨೫ರ ರಥ ಸಪ್ತಮಿಯಂದು ಶ್ರೀಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ಜರುಗಲಿದೆ.

- ರಾಮಾಚಾರ್, ಪ್ರಧಾನ ಅರ್ಚಕ

ಕ್ಯಾಮೇನಹಳ್ಳಿ ದನಗಳ ಜಾತ್ರೆಗೆ ಸುಮಾರು ೩೫ ವರ್ಷದಿಂದ ಆಗಮಿಸಿ ರಾಸುಗಳನ್ನು ಖರೀದಿಸುತ್ತೇವೆ. ಕಳೆದ ವರ್ಷಕ್ಕಿಂತ ಈ ವರ್ಷ ರಾಸುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ನಾವು ೨ ರಾಸುಗಳನ್ನು ಖರೀದಿ ಮಾಡಿದ್ದೇವೆ. ರಾಜ್ಯದ ಮೂಲೆ ಮೂಲೆಗಳಿಂದ ರೈತರು ಆಗಮಿಸುವ ಹಿನ್ನಲೆ ಬಹು ಬೇಡಿಕೆಯ ರಾಸುಗಳು ದೊರೆಯುತ್ತವೆ.

- ಮಂಜಣ್ಣ ರೈತ, ಶಿವಮೊಗ್ಗ ಜಿಲ್ಲೆ

------------------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮೂಹಿಕ ವಿವಾಹದಿಂದ ಬಡವರಿಗೆ ಅನುಕೂಲ
ಇ-ಆಫೀಸ್ ಬಳಕೆ ರಾಜ್ಯದಲ್ಲೇ ಕಲಬುರಗಿ ನಂಬರ್-1