ವಿ.ಎಂ. ನಾಗಭೂಷಣ
ಸಂಡೂರು ಸೇರಿದಂತೆ ತಾಲೂಕಿನ ಯಶವಂತನಗರ, ಕೃಷ್ಣಾನಗರ, ಅಂಕಮನಾಳ್, ತೋರಣಗಲ್ಲು, ಧರ್ಮಾಪುರ ಮುಂತಾದೆಡೆ ಒಟ್ಟು 90 ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ತೋಪುಗಳಿವೆ. ಹಿಂದಿನ ವರ್ಷದಿಂದ ನಬಾರ್ಡ್ ಸ್ಕೀಂನಲ್ಲಿ ನಿಡಗುರ್ತಿ ಮುಂತಾದೆಡೆ ಸುಮಾರು 100 ಎಕರೆ ಪ್ರದೇಶದಲ್ಲಿ ಹೊಸದಾಗಿ ಮಾವಿನ ಗಿಡಗಳನ್ನು ಬೆಳೆಸಲಾಗುತ್ತಿದೆ.
ತಾಲೂಕಿನಲ್ಲಿ ಪ್ರಮುಖವಾಗಿ ರಸಪುರಿ, ಮಲಗೋಬ, ತೋತಾಪುರಿ, ಜಹಂಗೀರ್, ದಿಲ್ ಪಸಂದ್, ಬಾದಾಮಿ, ಬೇನೆಸಾನ್, ಬೆಳ್ಳಿಗುಂಡು, ಲಾಂಗ್ರ ಮುಂತಾದ ತಳಿಯ ಮಾವನ್ನು ಬೆಳೆಯುತ್ತಾರೆ. ಮಾವಿನ ಉಪ್ಪಿನ ಕಾಯಿ ತಯಾರಿಗಾಗಿ ಅಗತ್ಯವಾಗಿರುವ ಕಾಯಿಯನ್ನು ಬೆಳೆಯಲಾಗುತ್ತಿದೆ.ಕಾಯಿ ಉದುರುವಿಕೆ
ಇನ್ನೂ ಒಂದು ತಿಂಗಳು ಬೇಕು ಮಾವಿನ ತೋಟದ ಗುತ್ತಿಗೆದಾರ ಕೆ. ಮಂಜುನಾಥ್ ಕನ್ನಡಪ್ರಭದೊಂದಿಗೆ ಮಾತನಾಡಿ, ನಮ್ಮ ತಾತನ ಕಾಲದಿಂದಲೂ ನಾವು ಮಾವಿನ ಸೀಜನ್‌ನಲ್ಲಿ ಮಾವಿನ ತೋಟಗಳನ್ನು ಗುತ್ತಿಗೆ ಹಿಡಿಯುತ್ತೇವೆ. ಈ ವರ್ಷವೂ ಎರಡು ತೋಟಗಳನ್ನು ಗುತ್ತಿಗೆ ಹಿಡಿದಿದ್ದೇವೆ. ಈ ವರ್ಷ ಮಾವಿನ ಕಾಪು ಚೆನ್ನಾಗಿದೆ. ಆದರೆ, ಬಿಸಿಲಿನ ತಾಪಮಾನ ಹೆಚ್ಚುತ್ತಿರುವುದರಿಂದ ಕೆಲ ಕಾಯಿಗಳು ಉದುರುತ್ತಿವೆ. ಪೂರ್ಣ ಪ್ರಮಾಣದಲ್ಲಿ ಹಣ್ಣಿನ ರೂಪದಲ್ಲಿ ಮಾವು ಮಾರುಕಟ್ಟೆಗೆ ಬರಲು ಇನ್ನೂ ಒಂದು ತಿಂಗಳು ಬೇಕಾಗುತ್ತದೆ ಎಂದರು.
ಒಟ್ಟಿನಲ್ಲಿ ಹಣ್ಣುಗಳ ರಾಜ ಮಾವು ಈಗಾಗಲೆ ಮಾವಿನ ತೋಟಗಳಲ್ಲಿ ತೊನೆದಾಡುತ್ತಿದ್ದು, ಮಾರುಕಟ್ಟೆಯ ಮೇಲೆ ತನ್ನ ಅಧಿಪತ್ಯವನ್ನು ಸಾಧಿಸಲು ಸಿದ್ಧವಾಗುತ್ತಿವೆ. ಮಾವಿನ ಪ್ರಿಯರು ತರಹೆವಾರಿ ಹಣ್ಣುಗಳನ್ನು ಸವಿಯಲು ಎದುರು ನೋಡುತ್ತಿದ್ದಾರೆ. ಪ್ರಕೃತಿ ಮತ್ತು ಮಾರುಕಟ್ಟೆ ಹಣ್ಣಿನ ತೋಟಗಳ ಮಾಲೀಕರಿಗೂ, ತೋಟಗಳ ಗುತ್ತಿಗೆದಾರರಿಗೂ ಹಾಗೂ ಗ್ರಾಹಕರಿಗೂ ಅನುಕೂಲವಾಗುವಂತೆ ವರ್ತಿಸಬೇಕಿದೆ.