ಶಿರಹಟ್ಟಿಯಲ್ಲಿ ನವೆಂಬರ್ 8ರಂದು ಬೃಹತ್‌ ಹಿಂದೂ ಸಮಾವೇಶ

KannadaprabhaNewsNetwork |  
Published : Oct 30, 2025, 02:15 AM IST
ಪೋಟೊ-೨೯ ಎಸ್.ಎಚ್.ಟಿ. ೩ಕೆ- ಹಿಂದೂ ಸಮಾವೇಶ ಜರುಗಲಿರುವ ನಿಮಿತ್ಯ ಸಂಘಟನೆಯವರು ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು. | Kannada Prabha

ಸಾರಾಂಶ

ನ. ೮ರಂದು ಸಾಯಂಕಾಲ ೫ ಗಂಟೆಗೆ ಪಟ್ಟಣದ ಎಫ್.ಎಂ. ಡಬಾಲಿ ಹೈಸ್ಕೂಲ್ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ.

ಶಿರಹಟ್ಟಿ: ಹಿಂದೂಗಳು ಜಾಗೃತರಾಗಬೇಕು. ಪ್ರತಿಯೊಬ್ಬ ಹಿಂದೂವಿನಲ್ಲಿ ಧಾರ್ಮಿಕ ಚಿಂತನೆಗಳು ಜಾಗೃತವಾಗಬೇಕು. ಧರ್ಮ ಉಳಿಸಿ ಬೆಳೆಸುವ ಕಾರ್ಯದಲ್ಲಿ ಆಸಕ್ತಿ ಹೆಚ್ಚಾಗಬೇಕು. ಹಿಂದೆಂದಿಗಿಂತಲೂ ಸಧ್ಯದ ಪರಿಸ್ಥಿತಿಯಲ್ಲಿ ಹಿಂದೂ ಜಾಗೃತಿ ಮೂಡಿಸುವುದು ಹೆಚ್ಚು ಅಗತ್ಯವಾಗಿದೆ ಎಂದು ಹಿಂದೂಪರ ಸಂಘಟನೆಗಳ ಒಕ್ಕೂಟದ ಮುಖಂಡ ಸಂತೋಷ ಕುರಿ ತಿಳಿಸಿದರು.ನ. ೮ರಂದು ಪಟ್ಟಣದಲ್ಲಿ ನಡೆಯಲಿರುವ ದಾಸಶ್ರೇಷ್ಠ ಕನಕದಾಸರ ಹಾಗೂ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತ್ಯುತ್ಸವ ಕಾರ್ಯಕ್ರಮದ ಪ್ರಯುಕ್ತ ಜರುಗಲಿರುವ ಬೃಹತ್ ಹಿಂದೂ ಸಮಾವೇಶ ಕಾರ್ಯಕ್ರಮದ ಕರಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

ನ. ೮ರಂದು ಸಾಯಂಕಾಲ ೫ ಗಂಟೆಗೆ ಪಟ್ಟಣದ ಎಫ್.ಎಂ. ಡಬಾಲಿ ಹೈಸ್ಕೂಲ್ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಹಾಗೂ ತಾಲೂಕಿನಿಂದ ಹಿಂದೂಗಳು ಸೇರಬೇಕು ಎಂದು ಮನವಿ ಮಾಡಿದರು.ಅಂದು ಬೆಳ್ಳಟ್ಟಿ ರಸ್ತೆಯಲ್ಲಿರುವ ವೀರರಾಣಿ ಕಿತ್ತೂರು ಚೆನ್ನಮ್ಮ ವನದಿಂದ ಹಿಂದೂ ಜಾಗೃತಿಗಾಗಿ ವೇದಿಕೆ ಕಾರ್ಯಕ್ರಮ ನಡೆಯುವ ಸ್ಥಳದವರೆಗೂ ಬೃಹತ್ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಕೋಮು ಸೌಹಾರ್ಧತೆಗೆ ಹೆಸರಾಗಿರುವ ಶಿರಹಟ್ಟಿ ತಾಲೂಕು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಹಿಂದೂಗಳ ಮೇಲೆ ನಿರಂತರ ಹಲ್ಲೆಗಳು, ಮತಾಂತರ ಮಾಡುವ ಕಾರ್ಯಗಳು ನಡೆಯುತ್ತಿವೆ. ಇದೆಲ್ಲವನ್ನೂ ಗಮನಿಸಿದಾಗ ಹಿಂದೂಗಳಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಈ ದೆಸೆಯಲ್ಲಿ ಬೃಹತ್ ಹಿಂದೂ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್, ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗಮಿಸಲಿದ್ದಾರೆ. ಹಿಂದುಗಳು ಜಾತಿ, ಪಕ್ಷದ ಹೆಸರಿನಲ್ಲಿ ಬೇರೆ ಬೇರೆ ಆಗುವ ಬದಲು ನಾನೊಬ್ಬ ಹಿಂದೂ ಎಂದು ಒಂದಾಗಬೇಕು. ಹಿಂದೂಗಳಲ್ಲಿ ಜಾಗೃತಿ ಅನಿವಾರ್ಯ. ಪ್ರತಿಯೊಬ್ಬರೂ ಹಿಂದೂ ಧರ್ಮ ಪಾಲನೆ, ದೇಶದ ಸಂಸ್ಕೃತಿ ಉಳಿಸಲು ಪಣ ತೊಡಬೇಕು ಎಂದರು.ಈ ವೇಳೆ ಯಲ್ಲಪ್ಪ ಇಂಗಳಗಿ, ಪರಶುರಾಮ ಡೊಂಕಬಳ್ಳಿ, ದೇವಪ್ಪ ಪೂಜಾರ, ಶಶಿ ಪೂಜಾರ, ರಾಜೀವರಡ್ಡಿ ಬಮ್ಮನಕಟ್ಟಿ, ಮಂಜುನಾಥ ಸೊಂಟನೂರ, ನಾಗರಾಜ ಇಂಗಳಗಿ, ಆನಂದ ಸತ್ಯಮ್ಮನವರ, ಮುತ್ತು ಬೂದಿಹಾಳ, ನೀಲಪ್ಪ ಖಾನಾಪೂರ, ದೇವಪ್ಪ ಬಟ್ಟೂರ, ಪ್ರಕಾಶ ಕಲ್ಯಾಣಿ ಇತರರು ಇದ್ದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು