ರೈತನ ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆ

KannadaprabhaNewsNetwork |  
Published : Jun 28, 2025, 12:20 AM IST
27ಕೆಎಂಎನ್ ಡಿ18 | Kannada Prabha

ಸಾರಾಂಶ

ಸಿದ್ದೇಗೌಡರ ಪುತ್ರ ಜಮೀನಿನಲ್ಲಿ ಹಸುಗಳಿಗೆ ಸೀಮೆ ಹುಲ್ಲು ಕುಯ್ಯಲು ಹೋಗಿದ್ದಾಗ ಸೀಮೆ ಹುಲ್ಲಿನ ನಡುವೆ ಕಾಣಿಸಿಕೊಂಡ ಭಾರೀ ಗಾತ್ರದ ಹೆಬ್ಬಾವನ್ನು ಕಂಡು ತೀವ್ರ ಭಯಗೊಂಡಿದ್ದಾನೆ. ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಧನಗೂರು ಅರಣ್ಯ ವ್ಯಾಪ್ತಿಯ ಗಸ್ತು ಪಾಲಕ ಪುನೀತ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.

ಕನ್ನಡಪ್ರಭ ವಾರ್ತೆ ಹಲಗೂರು

ಸಮೀಪದ ಡಿ.ಹಲಸಹಳ್ಳಿ ಹೊರವಲಯದ ರೈತ ಸಿದ್ದೇಗೌಡರ ಜಮೀನಿನಲ್ಲಿ ಶುಕ್ರವಾರ ಬೆಳಿಗ್ಗೆ ಭಾರೀ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ.

ಸಿದ್ದೇಗೌಡರ ಪುತ್ರ ಜಮೀನಿನಲ್ಲಿ ಹಸುಗಳಿಗೆ ಸೀಮೆ ಹುಲ್ಲು ಕುಯ್ಯಲು ಹೋಗಿದ್ದಾಗ ಸೀಮೆ ಹುಲ್ಲಿನ ನಡುವೆ ಕಾಣಿಸಿಕೊಂಡ ಭಾರೀ ಗಾತ್ರದ ಹೆಬ್ಬಾವನ್ನು ಕಂಡು ತೀವ್ರ ಭಯಗೊಂಡಿದ್ದಾನೆ. ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಧನಗೂರು ಅರಣ್ಯ ವ್ಯಾಪ್ತಿಯ ಗಸ್ತು ಪಾಲಕ ಪುನೀತ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.

ಹಲಗೂರು ಗ್ರಾಮದ ಸ್ನೇಕ್ ಜಗದೀಶ್ ಸ್ಥಳಕ್ಕೆ ಆಗಮಿಸಿ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಯಿತು. ಸೆರೆಹಿಡಿದ ಹಾವನ್ನು ಶಿಂಷಾ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ಗಸ್ತು ಅರಣ್ಯ ಪಾಲಕ ಪುನೀತ್ ತಿಳಿಸಿದರು.

ಜನ ವಸತಿ ಪ್ರದೇಶ, ಜಮೀನು ಪ್ರದೇಶಗಳಲ್ಲಿ ಯಾವುದೇ ಬಗೆಯ ಹಾವುಗಳು ಕಂಡು ಬಂದರೇ ಮೊ-8431500189 ಕರೆ ಮಾಡಿದರೆ ಎಲ್ಲಾ ಬಗೆಯ ಹಾವುಗಳನ್ನು ಸುರಕ್ಷಿತವಾಗಿ ಸೆರೆ ಹಿಡಿದು ಸಂರಕ್ಷಿತ ಪ್ರದೇಶಕ್ಕೆ ಬಿಡಲಾಗುವುದು ಎಂದು ಸ್ನೇಕ್ ಜಗದೀಶ್ ತಿಳಿಸಿದರು.

ಇಂದು ಹಲವೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಮದ್ದೂರು:

66/11 ಕೆವಿ ಮದ್ದೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ 11 ಕೆವಿ ಪರಿವರ್ತಕ, ಲೈನ್ ಮತ್ತು ಈ ವಿತರಣ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆಜಿ ಮಾರ್ಗಗಳ ತ್ರೈಮಾಸಿಕ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ಜೂ.28ರಂದು ಹಲವೆಡೆ ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಫೀಡರ್‌ಗಳಾದ ಎಫ್ 1 ಮದ್ದೂರು, ಎಫ್ 2 ಎಚ್ ಕೆವಿ ನಗರ, ಎಫ್ 3 ವಿವೇಕಾನಂದ ನಗರ (ಮದ್ದೂರು ಟೌನ್ ), ಎಫ್ 6 ಬೆಸಗರಹಳ್ಳಿ, ಎಫ್ 7 ಕೆಐಎಡಿಬಿ, ಎಫ್ 8 ಸಿ.ಎ.ಕೆರೆ, ಎಫ್ 9 ಕ್ಯಾತಘಟ್ಟ, ಎಫ್ 10 ಮಠದ ದೊಡ್ಡಿ, ಎಫ್ 11 ಕ್ಲೀನ್ ಪ್ಯಾಕ್ಸ್ , ಎಫ್ 12 ಛದ್ರದ ಹೊಸಹಳ್ಳಿ, ಎಫ್ 13 ವಳಗೆರೆಹಳ್ಳಿ, ಎಫ್ 14 ಸಾದೊಳಲು ಐಪಿ, ಎಫ್ 15 ಗುರುದೇವರಹಳ್ಳಿ ಎನ್ ಜಿವೈ , ಎಫ್ 16 ಬಸವಪುರ, ಎಫ್ 17 ಗೆಜ್ಜಲಗೆರೆ ಡೇರಿ ಮತ್ತು ಎಫ್ 18 ಕ್ಯಾತಘಟ್ಟ ಫೀಡರಗಳು ಹಾಗೂ ಸೋಮನಹಳ್ಳಿ ಕೈಗಾರಿಕ ಪ್ರದೇಶದ 66/11 ಕೆವಿ ಮಾರ್ಗಗಳ ತ್ರೈ ಮಾಸಿಕ ನಿರ್ವಹಣೆ ಹಿನ್ನೆಲೆಯಲ್ಲಿ 11 ಕೆವಿ ಎಫ್ 1 ಎನ್ ಜಿವೈ ಫೀಡರ್ (ರುದ್ರಾಕ್ಷಿಪುರ, ನಿಡಘಟ್ಟ, ಮಾದಪುರದೊಡ್ಡಿ, ಕೆ.ಬಿ.ದೊಡ್ಡಿ, ಹೊಟ್ಟೇಗೌಡನದೊಡ್ಡಿ, ಎನ್.ಕೋಡಹಳ್ಳಿ, ಹುಣಸೇಮರದದೊಡ್ಡಿ, ತಿಪ್ಪೂರು, ಮಾದನಾಯಕನಹಳ್ಳಿ, ಅಗರಲಿಂಗನದೊಡ್ಡಿ) ಎಫ್ 5 ಮೇ. ಬಾಲಜಿ ಮಾಲ್ಟ್ ಫೀಡರ್ ಸೋಮನಹಳ್ಳಿ, ಎಫ್ 4 ಸೋಮನಹಳ್ಳಿ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಕಾರ್ಯ ನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

PREV

Recommended Stories

ಮುಸುಕುಧಾರಿ ಯಾರು ? ಸ್ನೇಹಿತನಿಂದ ವಿವರ ಸಂಗ್ರಹಿಸಿದ ಎಸ್‌ಐಟಿ
ಅನನ್ಯಾ ಭಟ್‌ ನಾಪತ್ತೆ ಆಗಿದ್ದಾಳೆಂಬ ಪ್ರಕರಣಕ್ಕೆ ಬಹುದೊಡ್ಡ ತಿರುವು ..!