ತೊಗರಿಹಂಕಲ್ ಗ್ರಾಮದಲ್ಲಿ ಭೂಮಿ ಸಂರಕ್ಷಣೆ ಕುರಿತ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪ್ರಾಕೃತಿಕ ಹಾನಿ, ಧೂಮಕೇತು ಅಪ್ಪಳಿಸುವ ಅಥವಾ ಜ್ವಾಲಾಮುಖಿಗಳಿಂದ ವಿಶಾಲ ಭೂಮಿಗೆ ಹಾನಿ ಸಂಭವಿಸುತ್ತಿಲ್ಲ. ಮಾನವನ ದುರಾಸೆ ಹಾಗೂ ಯಂತ್ರೀಕರಣ ಜೀವನ ಶೈಲಿಯಿಂದ ಪ್ರಕೃತಿ ಮಲೀನಗೊಂಡು ಹಂತ ಹಂತವಾಗಿ ಕುಗ್ಗುತ್ತಿದೆ ಎಂದು ಪರಿಸರವಾದಿ ಡಾ. ಸಂಜೀವ್ ಕುಲಕರ್ಣಿ ಹೇಳಿದರು.
ತಾಲೂಕಿನ ತೊಗರಿಹಂಕಲ್ ಗ್ರಾಮದಲ್ಲಿ ಅಂತಾರಾಷ್ಟ್ರೀಯ ರೋಟರಿ ಜಿಲ್ಲೆ- 3182 ಹಾಗೂ ರೋಟರಿ ಕಾಫಿಲ್ಯಾಂಡ್ ನಿಂದ ಭಾನುವಾರ ಹಮ್ಮಿಕೊಂಡಿದ್ಧ ಭೂಮಿ ಸಂರಕ್ಷಿಸುವ ಕುರಿತು ಜಿಲ್ಲಾ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ ದರು. ವಿಶಾಲ ಬ್ರಹ್ಮಾಂಡದ ಭೂಗರ್ಭದಲ್ಲಿ ಮಾತ್ರ ಜೀವಸಂಕುಲ ಸೃಷ್ಟಿ ಮತ್ತು ವಿಕಸನ ಹೊಂದಿವೆ. ಕಾಲ ಕ್ರಮೇಣ ಮನುಷ್ಯ ಪ್ರಬೇಧಗಳು ಶುರುವಾದರೂ ಪ್ರಾಕೃತಿಕ ಸಂಪತ್ತು ಏರುಪೇರಾಗಿಲ್ಲ. ಆದರೆ ಕಳೆದ ಮೂನ್ನೂರು ವರ್ಷಗಳಿಂದ ಮಾನವ ಆಧುನಿಕತೆಗೆ ಶರಣಾಗಿ ಅರಣ್ಯ ಸಂಪತ್ತನ್ನು ಸರ್ವ ನಾಶಗೊಳಿಸಿ ವಿಶ್ವನ್ನು ಅಳಿನಂಚಿನತ್ತ ಕೊಂಡೊಯ್ಯುತ್ತಿದ್ದಾನೆ ಎಂದು ಹೇಳಿದರು.ಮೊಟ್ಟ ಮೊದಲು ಪ್ರಪಂಚದಲ್ಲಿ ಮಾನವ 2 ಕಾಲಿನಿಂದ ನಿಯಂತ್ರಣ ಕಂಡುಕೊಂಡನು, ಪ್ರಾಣಿ ಪ್ರಬೇಧಗಳು ಕಾಣಿಸಿದವು. ಒತ್ತಡವಿರದ ಪರಿಸರಸ್ನೇಹಿ ವಾತಾವರಣ ನಿರ್ಮಾಣವಾಯಿತು. ಕಾಲ ಉರುಳಿದಂತೆ ಮಾನವ ಯಾಂತ್ರೀಕರಣ ಸೃಷ್ಟಿಸಿ, ಕೆಲವೇ ಸಮಯದಲ್ಲಿ ತಂತ್ರಜ್ಞಾನ ಇಡೀ ಪ್ರಪಂಚವನ್ನು ಅತಿ ವೇಗವಾಗಿ ಆವರಿಸಿಕೊಂಡು ಭೂಗರ್ಭವನ್ನು ಸುಡು ವಂತಾಯಿತು ಎಂದರು.ವಿಪರೀತ ಪ್ಲಾಸ್ಟಿಕ್ ಬಳಕೆ, ವೈಯಕ್ತಿಕ ಲಾಭದ ಉದ್ದೇಶದಿಂದ ಅರಣ್ಯ ಸಂಪತ್ತು ನಾಶಮಾಡಿ ವಾಣಿಜ್ಯೀಕರಣಗೊಳಿಸಿ ಮನುಷ್ಯ ಭೂಸಿರಿಯನ್ನು ಅಲ್ಲಗೆಳೆದನು. ಯಾವುದೇ ತಂತ್ರಜ್ಞಾನ ಅಥವಾ ರಾಜಕೀಯದಿಂದ ಪರಿಸರ ಸರಿಪಡಿಸಲು ಸಾಧ್ಯ ವಿಲ್ಲ. ಪ್ರತಿಯೊಬ್ಬ ನಾಗರಿಕರ ಕೈನಲ್ಲಿದೆ. ಹಚ್ಚ ಹಸಿರಿನಿಂದ ಪರಿಸರ ಕಾಪಾಡುವುದು, ಜಲಮೂಲ ಉಳಿಸುವ ಕಾರ್ಯವಾಗಬೇಕಿದೆ ಎಂದು ಹೇಳಿದರು.ದೈನಂದಿನ ಸೇವಿಸುವ ಆಹಾರ ಉತ್ಪನ್ನಗಳು ಎಲ್ಲಿಂದ ಬರಲಿವೆ ಎಂಬ ಆತ್ಮಾವಲೋಕನ ಮಾಡಿಕೊಳ್ಳಬೇಕು. ಫಲವತ್ತತೆ ಮಣ್ಣನ್ನು ಕಲುಷಿತಗೊಳಿಸುವ ಹಕ್ಕು ಯಾರಿಗೂ ಇಲ್ಲ. ಪರಿಸರ ಕಾಳಜಿ ಪ್ರತಿಯೊಬ್ಬರ ಹಕ್ಕು ಎಂಬ ಧ್ಯೇಯ ಸೂತ್ರಗಳನ್ನು ನಾಗರಿಕರು ಬದುಕಿನಲ್ಲಿ ಅಳವಡಿಸಿಕೊಂಡಾಗ ವಿಶಾಲ ಭೂಮಂಡಲ ಸುರಕ್ಷಿತವಾಗಿ ರಕ್ಷಿಸಬಹುದು ಎಂದು ಸಲಹೆ ಮಾಡಿದರು.ಭೂರಕ್ಷಿಸುವ ಸಂಬಂಧ ರೋಟರಿ ಕಾಫಿಲ್ಯಾಂಡ್ ವಿಶೇಷ ಉಪನ್ಯಾಸ ಹಮ್ಮಿಕೊಂಡು ಕಾರ್ಯೋನ್ಮು ಖವಾಗಿವೆ. ಮಲೆನಾಡು ಪ್ರದೇಶ ಜಿಲ್ಲೆ ವಿಶಿಷ್ಟ ತಾಣವಾಗಿದ್ದು, ನೈಸರ್ಗಿಕವಾಗಿ ಸಂಪತ್ಪರಿತ ಭೌಗೋಳಿಕವಾ ಗಿ ವಿಶಾಲ ವಿಸ್ತೀರ್ಣ ಹೊಂದಿದೆ. ಪಂಚನದಿಗಳ ಉಗಮ ಸ್ಥಾನವಾಗಿದ್ದು ಇಡೀ ರಾಜ್ಯಕ್ಕೆ ಜೀವ ಜಲದ ನೆಲೆಯಾಗಿರುವುದು ಹೆಮ್ಮೆಯ ಸಂಗತಿ ಎಂದರು.ರೋಟರಿ ಜಿಲ್ಲಾ ಗವರ್ನರ್ ಸಿ.ಎ.ದೇವಾನಂದ್ ಮಾತನಾಡಿ, ಭೂಸಿರಿ ಪ್ರಾಮುಖ್ಯತೆ, ಜವಾಬ್ದಾರಿ ಪ್ರತಿಯೊಬ್ಬ ಕರ್ತವ್ಯ ಪರಿಚಯಿಸುವ ಕಾರ್ಯಕ್ರಮ. ಹಸಿರು, ಮಣ್ಣು ಸಮಗ್ರವಾಗಿ ಬಳಸಿಕೊಳ್ಳಲು ರೋಟರಿ ಪ್ರೇರೇಪಿಸುತ್ತಿದೆ. ಸಂಪದ್ಭರಿತ ಭೂಮಿಯನ್ನು ಸಂರಕ್ಷಿಸುವ ಕುರಿತು ಎಲ್ಲರು ಕೈಜೋಡಿಸಬೇಕು ಎಂದು ಕಿವಿಮಾತು ಹೇಳಿದರು.ಈಗಾಗಲೇ ರೋಟರಿ 400ಕ್ಕೂ ಹೆಚ್ಚು ಸದಸ್ಯರನ್ನು ಹೊಸದಾಗಿ ಸೇರ್ಪಡೆಗೊಳಿಸಿ ಮುನ್ನಡೆ ಸಾಧಿಸುತ್ತಿರುವುದು ಸಂತೋಷದ ವಿಷಯ. ಈ ಶ್ರಮದ ಹಿಂದೆ ಪ್ರತಿಯೊಬ್ಬರ ಬಹಳಷ್ಟು ಕೆಲಸವಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಸದಸ್ಯರನ್ನು ನೋಂದಾಯಿಸಿ ಸಾಮಾಜಿಕ ಕಾರ್ಯಗಳತ್ತ ಹೆಜ್ಜೆಹಾಕಬೇಕಿದೆ ಎಂದರು.ಈ ಸಂದರ್ಭದಲ್ಲಿ ಮಂಗಳೂರು ಮೀನುಗಾರಿಕೆ ಕಾಲೇಜು ಮಾಜಿ ಡೀನ್ ಡಾ. ಶಿವಕುಮಾರ್ ಮಗಲ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ರವೀಶ್ ಕ್ಯಾತನಬೀಡು, ರೋಟರಿ ಜಿಲ್ಲಾ ಸಲಹೆಗಾರ ಅಭಿನಂದನ್ ಎ.ಶೆಟ್ಟಿ, ಕಲಿಕೆ ಸಹಾಯಕ ಬಿ.ರಾಜರಾಂ ಭಟ್, ಸಹಾಯಕ ಗವರ್ನರ್ ನಾಸೀರ್ ಹುಸೇನ್, ರೋಟರಿ ಕಾಫಿಲ್ಯಾಂಡ್ ಅಧ್ಯಕ್ಷ ಪಿ.ತನೋಜ್‌ಕುಮಾರ್, ಕಾರ್ಯದರ್ಶಿ ನಾಗೇಶ್ ಕೆಂಜಿಗೆ, ಭೂಸಂರಕ್ಷ ಅಧ್ಯಕ್ಷ ಕೆ.ಬಿ.ಪ್ರಸನ್ನ, ಪದಾಧಿಕಾರಿ ರಾಮದೇವ್ ಕಾಮತ್, ಎಂ.ಆನಂದ್ ಉಪಸ್ಥಿತರಿದ್ದರು. 27 ಕೆಸಿಕೆಎಂ 1
ಚಿಕ್ಕಮಗಳೂರು ತಾಲೂಕಿನ ತೊಗರಿಹಂಕಲ್ ಗ್ರಾಮದಲ್ಲಿ ರೋಟರಿ ಕಾಫಿಲ್ಯಾಂಡ್ ನಿಂದ ಭಾನುವಾರ ಹಮ್ಮಿಕೊಂಡಿದ್ಧ ಭೂಮಿ ಸಂರಕ್ಷಿಸುವ ಕುರಿತ ಜಿಲ್ಲಾ ವಿಚಾರ ಸಂಕಿರಣವನ್ನು ಪರಿಸರವಾದಿ ಡಾ. ಸಂಜೀವ್ ಕುಲಕರ್ಣಿ ಉದ್ಘಾಟಿಸಿದರು.