ಮಾನವ ಕಳ್ಳ ಸಾಗಾಣಿಕೆ ಸಂಘಟಿತ ಅಪರಾಧ

KannadaprabhaNewsNetwork |  
Published : Jul 31, 2026, 02:15 AM IST
ಯಲಬುರ್ಗಾದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನ ಕಾರ್ಯಕ್ರಮ ಹಿರಿಯ ಸಿವಿಲ್ ನ್ಯಾಯಾಧೀಶೆ ಪ್ರಮಿಳಾ ಎಂ. ಉದ್ಘಾಟಿಸಿದರು. | Kannada Prabha

ಸಾರಾಂಶ

ಲಾಭ ಗಳಿಸುವ ಉದ್ದೇಶದಿಂದ ವ್ಯಕ್ತಿಗಳನ್ನು ಬಲವಂತವಾಗಿ,ವಂಚನೆ ಹಾಗೂ ಬೆದರಿಕೆ ಮೂಲಕ ಬಲೆಗೆ ಬೀಳಿಸಿ, ಶೋಷಣೆಗೆ ಒಳಪಡಿಸುವುದಾಗಿದೆ‌

ಯಲಬುರ್ಗಾ: ಮಾನವ ಕಳ್ಳ‌ ಸಾಗಾಣಿಕೆಯು ಒಂದು ಗಂಭೀರ ಸಂಘಟಿತ ಅಪರಾಧವಾಗಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು

ಹಿರಿಯ ಸಿವಿಲ್ ನ್ಯಾಯಾಧೀಶೆ ಪ್ರಮಿಳಾ ಎಂ.ಹೇಳಿದರು.

ಪಟ್ಟಣದ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಅಭಿಯೋಜನೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಲಾಭ ಗಳಿಸುವ ಉದ್ದೇಶದಿಂದ ವ್ಯಕ್ತಿಗಳನ್ನು ಬಲವಂತವಾಗಿ,ವಂಚನೆ ಹಾಗೂ ಬೆದರಿಕೆ ಮೂಲಕ ಬಲೆಗೆ ಬೀಳಿಸಿ, ಶೋಷಣೆಗೆ ಒಳಪಡಿಸುವುದಾಗಿದೆ‌. ಯಾರೇ ಆಗಲಿ ಅಪರಿಚಿತರಿಂದ ದೂರವಿರಬೇಕು. ಇಂಥ ವ್ಯವಸ್ಥೆಯಿಂದ ರಕ್ಷಿಸಿಕೊಳ್ಳಲು ೧೧೨ ಮತ್ತು ೧೦೯ಗೆ ಕರೆ ಮಾಡಬೇಕು ಎಂದರು.

ಸಿವಿಲ್ ನ್ಯಾಯಾಧೀಶ ಸಂಜುಕುಮಾರ ಪಚ್ಚೆಪೂರೆ ಮಾತನಾಡಿ, ಅಂಕಿ ಅಂಶಗಳ ಪ್ರಕಾರ ವಿದೇಶಕ್ಕೆ ಅತಿ ಹೆಚ್ಚು ಹೆಣ್ಣು ಮಕ್ಕಳನ್ನು ಸಾಗಾಟ ಮಾಡುತ್ತಿದ್ದು, ಅಂತದೊಂದು ಜಾಲವಿದೆ. ಎಲ್ಲರೂ ಸಮಾಜದಲ್ಲಿ ಎಚ್ಚರದಿಂದ ಬದುಕು ನಡೆಸಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷ ಸುಭಾಷ್ ಹೊಂಬಳ, ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್ ಮಾತನಾಡಿದರು.

ಪ್ರಾಚಾರ್ಯ ಸಿದ್ದರಾಮಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ವಕೀಲರ ಸಂಘದ ಉಪಾಧ್ಯಕ್ಷ ಎಂ.ಎಸ್. ನಾಯಕರ, ಪ್ರ. ಕಾರ್ಯದರ್ಶಿ ಮಹಾಂತೇಶ ಈ.ಟಿ.,ಅಂಗನವಾಡಿ ಮೇಲ್ವಿಚಾರಕಿಯರಾದ ಲಲಿತಾ ನಾಯ್ಕರ, ಮಾಧವಿ ವೈದ್ಯ, ನ್ಯಾಯಾಲಯ ಸಿಬ್ಬಂದಿ ರಾಘವೇಂದ್ರ ಕುಲಕರ್ಣಿ, ವಿನಾಯಕ ಸೇರಿದಂತೆ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ರಕ್ಷಣೆಗೆ ಸೂಕ್ತ ಕಾನೂನು ಅರಿವು ನೀಡುವುದು ಅತ್ಯಗತ್ಯ: ಹುಲಗಪ್ಪ ಡಿ.
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಬಾರದು: ಜಾನಕಿ ಕೆ.ಎಂ.