ಹಾರೋಹಳ್ಳಿ: ವಚನಗಳ ಮೂಲಕ ಸರಳತೆಯನ್ನು ಸಾರಿದವರು ಮಡಿವಾಳ ಮಾಚಿದೇವರು ಎಂದು ತಹಸೀಲ್ದಾರ್ ಹರ್ಷವರ್ಧನ್ ತಿಳಿಸಿದರು.
ಮಾಚಿದೇವರು ಬಟ್ಟೆಯ ಶುದ್ಧತೆಗಿಂತ ಮನಸ್ಸಿನ ಶುದ್ಧತೆಯೇ ಮುಖ್ಯ. ಜನ್ಮದಿಂದಲ್ಲ ಕರ್ಮದಿಂದ ಮಾನವನ ಮೌಲ್ಯ ನಿರ್ಧಾರವಾಗಲಿದ್ದು, ಅಹಂಕಾರ ವಿರೋಧ, ಜಾತಿ ಭೇದ ತಿರಸ್ಕಾರ ಕಾಯಕದ ಮಹತ್ವ ಸ್ಪಷ್ಟವಾಗಿ ಇವರ ವಚನಗಳಲ್ಲಿ ಕಾಣಿಸುತ್ತದೆ ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಶ್ವೇತಾಬಾಯಿ ಮಾತನಾಡಿ, ಯಾವ ಕೆಲಸವೂ ಚಿಕ್ಕದಲ್ಲ, ಶುದ್ಧ ಮನಸ್ಸಿದ್ದರೆ ಅದೇ ಪರಮಧರ್ಮ ಎಂದು ಸಾರಿದವರು ಬಸವಣ್ಣನವರ ಲಿಂಗಾಯತ ತತ್ವಕ್ಕೆ ಅನುಗುಣವಾಗಿ ಕಾಯಕವೇ ಕೈಲಾಸ ಎಂಬ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡವರು ಮಅಚಿದೇವರು ಎಂದು ಹೇಳಿದರು.ಸಮುದಾಯದ ಮುಖಂಡ ರವಿ ಕಗ್ಗಲಹಳ್ಳಿ ಮಾತನಾಡಿದರು. ತಾಲೂಕು ಕಚೇರಿ ಸಿಬ್ಬಂದಿ ಅವಿನಾಶ್, ಮೊಹಮ್ಮದ್ ಜೀಸನ್, ಮಮತಾ, ನಂದಿನಿ, ಸಮುದಾಯದ ಮುಖಂಡರಾದ ಧನಂಜಯ, ಸ್ಟುಡಿಯೋ ವೆಂಕಟೇಶ್ ಬೈರಪ್ಪ, ನಾರಾಯಣ, ಪುಟ್ಟಸ್ವಾಮಿ, ಮುಡೆನಹಳ್ಳಿ ನಾಗರಾಜು, ಕಗ್ಗಲಹಳ್ಳಿ ಶಿವರುದ್ರಯ್ಯ ಇತರರು ಹಾಜರಿದ್ದರು.