ರಕ್ತದಾನದಿಂದ ಮಾನವೀಯತೆ ಬೆಳವಣಿಗೆ: ಮೀರಾ ಶಿವಲಿಂಗಯ್ಯ

KannadaprabhaNewsNetwork |  
Published : Jun 04, 2025, 02:03 AM IST
೩ಕೆಎಂಎನ್‌ಡಿ-೬ಮಂಡ್ಯ ತಾಲೂಕು ತಾಲೂಕಿನ ವಿ.ಸಿ.ಫಾರಂ ಕೃಷಿ ಮಹಾವಿದ್ಯಾಲಯದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ರಕ್ತ ಸಂಗ್ರಹಿಸಿ ನೀಡಲಾಯಿತು. | Kannada Prabha

ಸಾರಾಂಶ

ರಕ್ತದಾನದಿಂದ ಮಾನವೀಯತೆ ಬೆಳೆಯಲು ಸಹಾಯ ಮಾಡುತ್ತದೆ, ಮಾನವೀಯತೆ, ಸಮಾನತೆ, ಬ್ರಾತೃತ್ವ ರಕ್ತದಾನದ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ಕಾಲೇಜುಗಳಲ್ಲಿ ಯುವ ರೆಡ್ ಕ್ರಾಸ್ ಮೂಲಕ ಯುವ ಪಡೆ ಕಟ್ಟಿ ರಾಷ್ಟ್ರಪತಿಗಳನ್ನು ಆಹ್ವಾನಿಸಿ ಬೆಂಗಳೂರುನಲ್ಲಿ ಮೆಗಾ ಕ್ಯಾಂಪ್ ಮಾಡಲು ಯುವ ರೆಡ್ ಕ್ರಾಸ್ ವತಿಯಿಂದ ನಿರ್ಧರಿಸಿದ್ದೇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಕ್ತದಾನದಿಂದ ಮಾನವೀಯತೆ ಬೆಳೆಯಲು ಸಹಾಯ ಮಾಡುತ್ತದೆ, ಮಾನವೀಯತೆ, ಸಮಾನತೆ, ಬ್ರಾತೃತ್ವ ರಕ್ತದಾನದ ಉದ್ದೇಶವಾಗಿದೆ ಎಂದು ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ತಿಳಿಸಿದರು.

ತಾಲೂಕಿನ ವಿ.ಸಿ.ಫಾರಂ ಕೃಷಿ ಮಹಾ ವಿದ್ಯಾಲಯದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರಕ್ತನಿಧಿ ಕೇಂದ್ರ ಮಿಮ್ಸ್, ಡಿ.ಆರ್.ಪಿ.ಬಿ.ಫೌಂಡೇಷನ್ ಟ್ರಸ್ಟ್ ಇವರ ಸಹಯೋಗದಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಜನ್ಮದಿನದ ಅಂಗವಾಗಿ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತ ನಾಡಿದರು.

ಮುಂದಿನ ದಿನಗಳಲ್ಲಿ ಕಾಲೇಜುಗಳಲ್ಲಿ ಯುವ ರೆಡ್ ಕ್ರಾಸ್ ಮೂಲಕ ಯುವ ಪಡೆ ಕಟ್ಟಿ ರಾಷ್ಟ್ರಪತಿಗಳನ್ನು ಆಹ್ವಾನಿಸಿ ಬೆಂಗಳೂರುನಲ್ಲಿ ಮೆಗಾ ಕ್ಯಾಂಪ್ ಮಾಡಲು ಯುವ ರೆಡ್ ಕ್ರಾಸ್ ವತಿಯಿಂದ ನಿರ್ಧರಿಸಿದ್ದೇವೆ ಎಂದರು.

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ವಿಶೇಷಾಧಿಕಾರಿ ಡಾ.ಕೆ.ಎಂ.ಹರಿಣಿಕುಮಾರ್ ಮಾತನಾಡಿ, ಮೈಸೂರು ಪ್ರಾಂತ್ಯದ ಕಂದಾಯ ವಿಭಾಗದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿಯವರು ಕೃಷಿ ವಿವಿ ಮಾಡಲು ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಇದರಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ ಎಂದರು.

ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಮಾತನಾಡಿ ಎನ್.ಚಲುವರಾಯಸ್ವಾಮಿ ಅವರು ಮಂಡ್ಯ ಜಿಲ್ಲೆಯಿಂದ ಮೂರು ಬಾರಿ ಮಂತ್ರಿಯಾದಾಗಲೂ ಜಿಲ್ಲೆಯ ಅಭಿವೃದ್ಧಿಯಲ್ಲಿ ಛಾಪು ಮೂಡಿಸಿದ್ದಾರೆ ಎಂದರು.

ಸಾರಿಗೆ ಸಚಿವರಾಗಿದ್ದಾಗ ಜಿಲ್ಲೆಯಲ್ಲಿ ಬಸ್ ನಿಲ್ದಾಣಗಳನ್ನು ಆಧುನಿಕರಣಗೊಳಿಸಿದ್ದಾರೆ, ಆರೋಗ್ಯ ಸಚಿವರಾಗಿ ಮಂಡ್ಯಕ್ಕೆ ಮೆಡಿಕಲ್ ಕಾಲೇಜು ತಂದು ಕೆಲಸ ಮಾಡಿದ್ದಾರೆ. ಕೃಷಿ ಸಚಿವರಾಗಿ ರೈತರ ಮಕ್ಕಳಿಗೆ ಅನುಕೂಲವಾಗುವಂತೆ ವಿ.ಸಿ.ಫಾರಂನಲ್ಲಿ ಕೃಷಿ ಮಹಾವಿದ್ಯಾಲಯ ತಂದಿರುವುದು ಹೆಮ್ಮೆಯ ವಿಚಾರ ಪಕ್ಷಾತೀತವಾಗಿ ಅವರನ್ನು ಅಭಿನಂದಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಡೀನ್ (ಕೃಷಿ) ಡಾ.ಪಿ.ಎಸ್.ಫಾತಿಮಾ, ಮಾಜಿ ಶಾಸಕ ಹೆಚ್.ಬಿ.ರಾಮು, ಕೆಪಿಸಿಸಿ ಸದಸ್ಯ ಸಿ.ಕೆ.ನಾಗರಾಜು, ಡಿ.ಆರ್.ಪಿ.ಬಿ.ಫೌಂಡೇಷನ್ ಟ್ರಸ್ಟ್, ಅಧ್ಯಕ್ಷ ಸಿ.ಎಂ.ದ್ಯಾವಪ್ಪ, ರೆಡ್ ಕ್ರಾಸ್ ಸಂಸ್ಥೆ ನಿರ್ದೇಶಕ ಮಂಗಲ ಎಂ.ಯೋಗೇಶ್, ವಕೀಲ ಸುಂಡಹಳ್ಳಿ ಮಂಜುನಾಥ್, ಎಲ್.ಸಂದೇಶ್, ಎನ್.ಸೋಮಶೇಖರ್, ಕಂಬದಹಳ್ಳಿ ಶ್ರೀಕಂಠಯ್ಯ ಇತರರಿದ್ದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ