ಹಾಸ್ಯ, ನಗುವಿನಿಂದ ಆರೋಗ್ಯವಂತ ಜೀವನ ಸಾಧ್ಯ

KannadaprabhaNewsNetwork |  
Published : Mar 23, 2026, 02:30 AM IST
ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಆವರಣದಲ್ಲಿ ಮಾತಿನ ಮಂಟಪ ಕಾರ್ಯಕ್ರಮವನ್ನು ಶಾಸಕ ದೊಡ್ಡನಗೌಡ ಪಾಟೀಲ್‌ ಉದ್ಘಾಟಿಸಿದರು. | Kannada Prabha

ಸಾರಾಂಶ

ಇಂದಿನ ದಿನಗಳಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ಮತ್ತು ಕುಟುಂಬಗಳಲ್ಲಿ ಸಂಬಂಧಗಳನ್ನು ಗಟ್ಟಿಗೊಳಿಸುವ ಚಟುವಟಿಕೆ ಹಮ್ಮಿಕೊಂಡಿರುವ ಸ್ಫೂರ್ತಿ ಯುವಕ ಸಂಘದ ಕಾರ್ಯ ಶ್ಲಾಘನಿಯ

ಕುಷ್ಟಗಿ: ಮನುಷ್ಯ ಜೀವನ ಹಾಸ್ಯ, ನಗುವಿನಿಂದ ಆರೋಗ್ಯಕರವಾಗುವುದು ಎಂದು ಶಾಸಕ ದೊಡ್ಡನಗೌಡ ಪಾಟೀಲ್‌ ಹೇಳಿದರು.

ತಾಲೂಕಿನ ತಾವರಗೇರಾ ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಆವರಣದಲ್ಲಿ ಸ್ಫೂರ್ತಿ ಯುವಕ ಸಂಘದ ೧೯ನೇ ವಾರ್ಷಿಕೋತ್ಸವ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ನಡೆದ ಮಾತಿನ ಮಂಟಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ಮತ್ತು ಕುಟುಂಬಗಳಲ್ಲಿ ಸಂಬಂಧಗಳನ್ನು ಗಟ್ಟಿಗೊಳಿಸುವ ಚಟುವಟಿಕೆ ಹಮ್ಮಿಕೊಂಡಿರುವ ಸ್ಫೂರ್ತಿ ಯುವಕ ಸಂಘದ ಕಾರ್ಯ ಶ್ಲಾಘನಿಯ ಎಂದು ಹೇಳಿದರು.

ಪಪಂ ಅಧ್ಯಕ್ಷ ನಾರಾಯಣಗೌಡ ಮೆದಿಕೇರಿ ಮಾತನಾಡಿದರು. ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ನೇತೃತ್ವದಲ್ಲಿ ಮಾತಿನ ಮಂಟಪ ಕಾರ್ಯಕ್ರಮ ನಡೆಯಿತು. ಅಂದಿನ ಮಹಿಳೆ ಮತ್ತು ಇಂದಿನ ಮಹಿಳೆ ವಿಷಯ ಚರ್ಚೆಯಲ್ಲಿ ಡಾ. ಅರಣಾಕುಮಾರಿ, ನರಹರಿ ಬಿಳೆಗುಡ್ಡ, ಸುಜಾತಾ ಹಿರೇಮಠ, ಸಂಗಪ್ಪ ಗುಡದೂರು, ನಿಂಬಮ್ಮ ತುಂಬದ, ಸೋಮಲಿಂಗಪ್ಪ, ಬಸವರಾಜ ಗುರಿಕಾರ, ತೇಜಸ್ವಿನಿ ಬಂಡಿ ಭಾಗವಹಿಸಿದ್ದರು.

ತಾವರಗೇರಾ ಪಟ್ಟಣದ ಸಿದ್ಧಾರೂಢ ಮಠದ ಶ್ರೀ ಕುಮಾರ ಸಿದ್ಧಾರೂಢ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ರವಿಚಂದ್ರ ಹೂಗಾರ, ಶ್ಯಾಮ ಬಂಗಿ, ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ, ಪಪಂ ಉಪಾಧ್ಯಕ್ಷೆ ದುರಗಮ್ಮ ಶಿರವಾಟೆ, ಪಪಂ ಸದಸ್ಯೆ ಅಂಬುಜಾ ಹೂಗಾರ, ಅಂಬಣ್ಣ ಕಂದಗಲ್‌, ಬಸನಗೌಡ ಮಾಲಿ ಪಾಟೀಲ್‌, ಮಂಜುನಾಥ ಜೂಲಕುಂಟಿ, ಪಿಎಸ್‌ಐ ಚಂದ್ರಪ್ಪ ಎಚ್‌., ಮಂಜುನಾಥ ಕಂದಗಲ್ ಇದ್ದರು. ಕಾಮಣ್ಣ ಶಿರವಾರ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ ಪ್ರಾರ್ಥಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತದ ಗುರು-ಶಿಷ್ಯ ಪರಂಪರೆ ಜಗತ್ತಿನಲ್ಲಿಯೇ ಶ್ರೇಷ್ಠ: ಚಕ್ರವರ್ತಿ ಸೂಲಿಬೆಲೆ
ನೀತಿ, ನಿಯಮ ಇಲ್ಲದೆ ಸಮಾಜ, ನಾಡು ಬೆಳೆಯದು: ರಂಭಾಪುರಿ ಶ್ರೀ