ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಹೆಲ್ಮೆಟ್ ಧರಿಸುವ ಮೂಲಕ ಸಂಚಾರ ನಿಯಮ ಪಾಲಿಸಿದರು
----ಕನ್ನಡಪ್ರಭ ವಾರ್ತೆ ಮೈಸೂರು
ಭಯೋತ್ಪಾದನೆಯ ವಿರುದ್ಧ ಭಾರತದ ಯೋಧರು ಆಪರೇಷನ್ ಸಿಂದೂರ ಮೂಲಕ ಪ್ರತ್ಯುತ್ತರ ನೀಡಿದ್ದಕ್ಕಾಗಿ, ಹೆಮ್ಮೆಯ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಟೀಂ ಮೈಸೂರು ತಂಡವು ಭಾನುವಾರ ಆಯೋಜಿಸಿದ್ದ ದೇಶಕ್ಕಾಗಿ ಬೈಕ್ ರ್ಯಾಲಿಯಲ್ಲಿ ನೂರಾರು ಜನ ಪಾಲ್ಗೊಂಡಿದ್ದರು.
ಮೊದಲಿಗೆ ವೀರ ಯೋಧರಿಗೆ ಹಾಗೂ ಅಕಾಲಿಕ ಮರಣಕ್ಕೆ ತುತ್ತಾದ ಪದ್ಮಶ್ರೀ ಪುರಸ್ಕೃತ ಡಾ. ಅಯ್ಯಪ್ಪನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಂತರ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭವಾದ ಬೈಕ್ ರ್ಯಾಲಿಯು ಗಾಂಧಿ ಚೌಕ, ಸಯ್ಯಾಜಿ ರಾವ್ ರಸ್ತೆ, ಚಿಕ್ಕಗಡಿಯಾರ, ಡಿ. ದೇವರಾಜ ಅರಸು ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ ಮೂಲಕ ಸಾಗಿ ಶಾಂತಲಾ ಚಿತ್ರಮಂದಿರದ ಬಳಿ ಕೊನೆಗೊಂಡಿತು.
ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಹೆಲ್ಮೆಟ್ ಧರಿಸುವ ಮೂಲಕ ಸಂಚಾರ ನಿಯಮ ಪಾಲಿಸಿದರು. ಅಲ್ಲದೆ, ತ್ರಿವರ್ಣ ಧ್ವಜ ಹಿಡಿದು ಸಾಗುವ ಮೂಲಕ ದೇಶಪ್ರೇಮ ಮೆರೆದರು.
ಟೀಂ ಮೈಸೂರು ಸಂಚಾಲಕರಾದ ಗೋಕುಲ್ ಗೋವರ್ಧನ್, ಯಶವಂತ್, ಕಿರಣ್ ಜೈರಾಮ್ ಗೌಡ, ಅನಿಲ್ ಜೈನ್, ಹರೀಶ್ ಬಾಬು, ಲಿಂಗರಾಜು, ರಾಮಪ್ರಸಾದ್, ಮುರಳಿ, ನವೀನ್, ಶಿವಪ್ರಸಾದ್, ಮನೋಹರ್, ತ್ರಿಮೂರ್ತಿ, ಯತೀಶ್, ಬಾಲಕೃಷ್ಣ, ಹರೀಶ್ ಶೆಟ್ಟಿ, ಆನಂದ್, ಮಂಜುನಾಥ್, ಸುನಿಲ್, ಹೇಮಂತ್, ಮನೋಜ್, ಗಣೇಶ್, ಕೃಷ್ಣ, ಸೃಜನ್, ಸಂತೋಷ್, ಶೇಖರ್, ನವೀನ್, ತಿಲಕ್, ಸದಸ್ಯರಾದ ಸುಧಾ ಗೌರವ್ ಮುರಳಿ, ಸಹನಾ, ಸುಕೃತಾ, ಹರ್ಷಿತಾ, ತನಿಷ್ಕಾ, ಕಲ್ಯಾಣಿ ವರ್ಷಿಣಿ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ನಟರಾಜು, ಉಪಾಧ್ಯಕ್ಷರಾದ ನೀಲಕಂಠಕುಮಾರ ಶೆಟ್ಟಿ, ಎಚ್.ಎಸ್. ನಂಜುಂಡಸ್ವಾಮಿ, ಖಜಾಂಚಿ ಬಿ.ಎಂ. ಚಿತ್ರ, ರವೀಂದ್ರ ಕುಮಾರ್ ಜಟ್ಟಿ, ರವಿಕುಮಾರ್, ಶುಭಾಷ್, ಸತೀಶ್ ಮೊದಲಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.