ಪತ್ನಿಯ ನಡತೆ ಬಗ್ಗೆ ಶಂಕಿಸಿ ಟ್ರೀಮರ್‌ನಿಂದ ತಲೆಯ ಕೂದಲು ಬೋಳಿಸಿ ಅವಮಾನಪಡಿಸಿದ್ದಲ್ಲದೆ, ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ ಘಟನೆ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಸಾವಳಗಿ
ಪತ್ನಿಯ ನಡತೆ ಬಗ್ಗೆ ಶಂಕಿಸಿ ಟ್ರೀಮರ್‌ನಿಂದ ತಲೆಯ ಕೂದಲು ಬೋಳಿಸಿ ಅವಮಾನಪಡಿಸಿದ್ದಲ್ಲದೆ, ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ ಘಟನೆ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಉಮೇಶ ಕಾಳಿಂಗ ಕೊಟ್ಟಲಗಿ ಎಂಬಾತ ಹೆಂಡತಿಯ ಬಗ್ಗೆ ಸಂಶಯ ಹೊಂದಿದ್ದ ಈತ ಆಕೆಗೆ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ, ಪತ್ನಿ ಈ ವಿಷಯ ತವರು ಮನೆಯವರಿಗೆ ತಿಳಿಸಿದ್ದಳು. ತವರು ಮನೆಯವರು-ಪತಿಯ ಮನೆಯವರು ಇತರರು ಕೂಡಿ ಹೀಗೆ ಸಂಶಯ ಮಾಡಿ ಕಿರಿಕಿರಿ ಮಾಡದಂತೆ ಬುದ್ದಿವಾದ ಹೇಳಿದ್ದರು. ಆದರೂ ಉಮೇಶ ಪತ್ನಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿರಲಿಲ್ಲ.
ಕಬ್ಬು ಕಡೆಯುವ ಗ್ಯಾಂಗಿನ ಮಾಲೀಕ ಬುತ್ತಿ ಒಯ್ಯುವ ಸಲುವಾಗಿ ಉಮೇಶನ ಮನೆಗೆ ಬಂದಾಗ ಪತ್ನಿ ಬುತ್ತಿ ಕೊಡಲು ತಡ ಮಾಡಿದ್ದಕ್ಕೆ ಮನೆಗೆ ಬಂದ ಉಮೇಶ ಮನೆಗೆ ಬಂದು ಮನೆಗೆ ಚೀಲಕ ಹಾಕಿಕೊಂಡು ಟ್ರೀಮರ್‌ನಿಂದ ತಲೆ ಬೋಳಿಸಿ, ಅವಾಚ್ಯವಾಗಿ ನಿಂದಿಸಿ, ಕಬ್ಬು ಕಡೆಯುವ ಕೊಯ್ತಾದಿಂದ ರುಂಡವನ್ನೇ ಕಡಿಯುತ್ತೇನೆಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಸಾವಳಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.