ನಮ್ಮ ಸಾಮರ್ಥ್ಯ ಅರಿಯಲು ನಾಯಕತ್ವ ಸಹಕಾರಿ: ಕ್ಯಾ.ಕಾರ್ಣಿಕ್‌

KannadaprabhaNewsNetwork |  
Published : Feb 04, 2026, 03:15 AM IST
ಫೋಟೋ: ೨೯ಪಿಟಿಆರ್-ಕಾರ್ಣಿಕ್ವಿವೇಕಾನಂದ ಕಾಲೇಜ್‌ನ ವಿದ್ಯಾರ್ಥಿ ಸಂಘವನ್ನು ಕ್ಯಾ.ಗಣೇಶ್ ಕಾರ್ಣಿಕ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಪುತ್ತೂರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದಲ್ಲಿ ೨೦೨೫-೨೦೨೬ನೇ ಸಾಲಿನ ವಿದ್ಯಾರ್ಥಿ ಸಂಘದ ಕಾರ್ಯಕ್ರಮ

ಪುತ್ತೂರು: ನಾಯಕತ್ವ ಎನ್ನುವುದು ನಮ್ಮೊಳಗಿನ ಒಳ್ಳೆಯತನವನ್ನು ಹೊರಗೆ ತರುವ ಪ್ರಕ್ರಿಯೆಯಾಗಿದೆ. ನಾಯಕನಾದವನು ಮಗುವಿನಂತೆ ಎಲ್ಲವನ್ನೂ ತಿಳಿದುಕೊಳ್ಳುವ ಕುತೂಹಲ ಹೊಂದಿರಬೇಕು. ನಾಯಕತ್ವ ನಮ್ಮೊಳಗಿನ ಸಾಮರ್ಥ್ಯವನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗಬಹುದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.ಪುತ್ತೂರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದಲ್ಲಿ ೨೦೨೫-೨೦೨೬ನೇ ಸಾಲಿನ ವಿದ್ಯಾರ್ಥಿ ಸಂಘದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಅಧ್ಯಕ್ಷೀಯ ಮಾತುಗಳನ್ನಾಡಿ,

ನಾಯಕ ವಿದ್ಯಾರ್ಥಿಗಳನ್ನು ಒಂದುಗೂಡಿಸುವ ಮೂಲಕ ಉತ್ತಮ ಬಾಂಧವ್ಯ ಬೆಳೆಸಬೇಕು. ಕೇವಲ ಆತನಲ್ಲಿ ಮಾತ್ರವಲ್ಲದೆ ಇತರ ವಿದ್ಯಾರ್ಥಿಗಳ ಕಲೆ-ಕೌಶಲ್ಯವನ್ನು ಮುಂದೆ ತರುವಲ್ಲಿ ಕಾರ್ಯ ಪ್ರವೃತ್ತನಾಗಬೇಕು ಎಂದರು.

ಕಾಲೇಜಿನ ಸಂಚಾಲಕ ಮುರಳಿಕೃಷ್ಣ ಕೆ.ಎನ್. ಶುಭ ಹಾರೈಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ತೃತೀಯ ಬಿಸಿಎ ವಿಭಾಗದ ಅಭಿನೀಶ್ ಕುಮಾರ್ ಶರ್ಮ, , ಉಪಾಧ್ಯಕ್ಷೆಯಾಗಿ ತೃತೀಯ ಬಿ.ಎ. ವಿಭಾಗದ ಸುಮನಾ, ಕಾರ್ಯದರ್ಶಿಯಾಗಿ

ತೃತೀಯ ಬಿಬಿಎ ವಿಭಾಗದ ಅಶ್ವಿನ್ ಕುಮಾರ್, ಜೊತೆ ಕಾರ್ಯದರ್ಶಿಗಳಾಗಿ ತೃತೀಯ ಬಿಎಸಿ ವಿಭಾಗದ ಎನ್. ಗಣೇಶ್ಕು ಮಾರ್ ಮತ್ತು ತೃತೀಯ ಬಿಕಾಂ ವಿಭಾಗದ ಹಂಪನಾ ಎಚ್.ಪಿ. ಆಯ್ಕೆಯಾದರು.ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆಡಳಿತ ವಿಶೇಷಧಿಕಾರಿ ಡಾ. ಮನಮೋಹನ ಎಂ. ಪ್ರಮಾಣವಚನ ಬೋಧಿಸಿದರು.

ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಭಿನೀಶ್ ಕುಮಾರ್ ಶರ್ಮ ಸ್ವಾಗತಿಸಿ, ಅಶ್ವಿನ್ ಕುಮಾರ್ ವಂದಿಸಿ, ತನ್ಮಯಿ ಕೆ.ಡಿ. ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ರದ್ದು ಮಾಡಿ, ನರೇಗಾ ಮರುಸ್ಥಾಪಿಸಿ: ಸಿದ್ದು
ಸಚಿವ ತಿಮ್ಮಾಪುರ ರಾಜೀನಾಮೆಗೆ ಅಹೋರಾತ್ರಿ ಧರಣಿ